ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡಕ್ಕೆ ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ನಿಧಾನಗತಿ ಆರಂಭ ಒದಗಿಸಿದರೂ, ಉತ್ತಮ ಆರಂಭ ನೀಡಿದ್ದಾರೆ. ಆಸಿಸ್ ವೇಗಿಗಳನ್ನು ರಕ್ಷಣಾತ್ಮಕವಾಗಿ ಎದುರಿಸಿದ ಇಬ್ಬರೂ ಆಟಗಾರರೂ ದೊಡ್ಡ ಹೊಡೆತಕ್ಕೆ ಕೈಹಾಕದೇ ರಕ್ಷಣಾತ್ಮಕ ಆಟದ ಮೂಲಕ ಒಂದೊಂದೇ ರನ್ ಗಳನ್ನು ಕಲೆಹಾಕಿ ಭಾರತದ ಉತ್ತಮ ಸ್ಥಿತಿಗೆ ಕಾರಣರಾಗಿದ್ದಾರೆ.