ಕೊನೆಯ ಎಸೆತದಲ್ಲಿ ಬುಮ್ರಾ ಸಿಕ್ಸರ್; ಚಪ್ಪಾಳೆ ತಟ್ಟಿ ಕುಣಿದ ಕೊಹ್ಲಿ ಸಂಭ್ರಮದ ವಿಡಿಯೋ ವೈರಲ್!

ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 4 ವಿಕೆಟ್ ಗಳಿಂದ ಸೋಲು ಅನುಭವಿಸಿದ್ದು ಈ ಮಧ್ಯೆ ಪಂದ್ಯದ ಕೊನೆಯ ಎಸೆತದಲ್ಲಿ ಟೀಂ ಇಂಡಿಯಾ ವೇಗಿ...
ಜಸ್ ಪ್ರೀತ್ ಬುಮ್ರಾ-ವಿರಾಟ್ ಕೊಹ್ಲಿ
ಜಸ್ ಪ್ರೀತ್ ಬುಮ್ರಾ-ವಿರಾಟ್ ಕೊಹ್ಲಿ
Updated on: 
ಮೊಹಾಲಿ: ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 4 ವಿಕೆಟ್ ಗಳಿಂದ ಸೋಲು ಅನುಭವಿಸಿದ್ದು ಈ ಮಧ್ಯೆ ಪಂದ್ಯದ ಕೊನೆಯ ಎಸೆತದಲ್ಲಿ ಟೀಂ ಇಂಡಿಯಾ ವೇಗಿ ಜಸ್ ಪ್ರೀತ್ ಬುಮ್ರಾ ಬಾರಿಸಿದ ಸಿಕ್ಸರ್ ಗೆ ಕೊಹ್ಲಿ ಕೊಟ್ಟ ರಿಯಾಕ್ಷನ್ ಇದೀಗ ವೈರಲ್ ಆಗಿದೆ.
ಮೊಹಾಲಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ 358 ರನ್ ಕಲೆಹಾಕಿತ್ತು. ಟೀಂ ಇಂಡಿಯಾ 352 ರನ್ ಗಳಿಸಿದ್ದಾಗ ಈ ವೇಳೆ ಕೊನೆಯ ಎಸೆತವನ್ನು ಎದುರಿಸಿದ್ದ ಬುಮ್ರಾ ಸಿಕ್ಸರ್ ಬಾರಿಸಿದ್ದರು. ಬುಮ್ರಾರ ಸಿಕ್ಸರ್ ಕಂಡ ವಿರಾಟ್ ಕೊಹ್ಲಿ ಪೆವಿಲಿಯನ್ ನಲ್ಲಿ ಚಪ್ಪಾಳೆ ತಟ್ಟುತ್ತಾ ಸಂಭ್ರಮಿಸಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಟೀಂ ಇಂಡಿಯಾ ನೀಡಿದ 359 ರನ್ ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಇನ್ನು 13 ಎಸೆತ ಬಾಕಿ ಇರುವಂತೆ 359 ರನ್ ಪೇರಿಸುವ ಮೂಲಕ ಗೆಲುವಿನ ನಗೆ ಬೀರಿತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com