2015ರಿಂದ 2023ರ ವರೆಗೂ 6 ದ್ವಿಪಕ್ಷೀಯ ಸರಣಿಗಳನ್ನು ಆಡುತ್ತೇವೆ ಎಂದು ಮಾಡಿಕೊಂಡ ಒಪ್ಪಂದವನ್ನು ಬಿಸಿಸಿಐ ಉಲ್ಲಂಘಿಸಿದೆ ಎಂದು ಆರೋಪಿಸಿ, ಪಿಸಿಬಿ ಐಸಿಸಿಗೆ ದೂರು ದಾಖಲಿಸಿತ್ತು. ಜತೆಗೆ 480 ಕೋಟಿ ರುಪಾಯಿ ಪರಿಹಾರಕ್ಕೆ ಬೇಡಿಕೆ ಇಟ್ಟಿತ್ತು. ವಿಚಾರಣೆ ನಡೆಸಿದ ಐಸಿಸಿಯ ವಿವಾದ ನಿರ್ಣಯ ಸಮಿತಿ, ಪಾಕ್ ಬೇಡಿಕೆಯನ್ನು ತಿರಸ್ಕರಿಸಿತ್ತು. ವಿಚಾರಣೆ ವೇಳೆ ಸರಣಿ ಆಡುವುದಾಗಿ ಪ್ರಸ್ತಾಪಿಸಲಾಗಿತ್ತೇ ಹೊರತು ಒಪ್ಪಂದ ಮಾಡಿಕೊಂಡಿರಲಿಲ್ಲ ಎಂದು ಬಿಸಿಸಿಐ ಸಾಬೀತು ಪಡಿಸಿ, ಪ್ರಕರಣ ಜಯಿಸಿತ್ತು.