ರಿಷಬ್ ಪಂತ್ ಬದಲಿಗೆ ಕೀಪಿಂಗ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾದ ಯುವ ವಿಕೆಟ್ ಕೀಪರ್ ರಿಷಭ್ ಪಂತ್ ಇಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕೀಪಿಂಗ್ ಮಾಡಲು ಇಳಿಯಲಿಲ್ಲ. ಇವರ ಬದಲಿಗೆ ಕರ್ನಾಟಕದ ಕೆ.ಎಲ್ ರಾಹುಲ್ ಕೀಪಿಂಗ್ ಮಾಡಿ ಗಮನ ಸೆಳೆದರು.
ಕೆಎಲ್ ರಾಹುಲ್
ಕೆಎಲ್ ರಾಹುಲ್
Updated on: 

ಮುಂಬೈ: ಟೀಂ ಇಂಡಿಯಾದ ಯುವ ವಿಕೆಟ್ ಕೀಪರ್ ರಿಷಭ್ ಪಂತ್ ಇಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕೀಪಿಂಗ್ ಮಾಡಲು ಇಳಿಯಲಿಲ್ಲ. ಇವರ ಬದಲಿಗೆ ಕರ್ನಾಟಕದ ಕೆ.ಎಲ್ ರಾಹುಲ್ ಕೀಪಿಂಗ್ ಮಾಡಿ ಗಮನ ಸೆಳೆದರು.

ರಿಷಭ್ ಬ್ಯಾಟಿಂಗ್ ಮಾಡುವಾಗ ಹೆಲ್ಮೆಟ್ ಗೆ ಚೆಂಡು ಬಿದ್ದು ಗಾಯಕ್ಕೆ ತುತ್ತಾಗಿದ್ದಾರೆ. ಭಾರತ ತಂಡ ಬ್ಯಾಟಿಂಗ್ ಮಾಡುವ ವೇಳೆ ಪ್ಯಾಟ್ ಕಮಿನ್ಸ್ ಮಾಡಿದ 44ನೇ ಓವರ್ ನಲ್ಲಿ ಪಂತ್ ಗಾಯ ಮಾಡಿಕೊಂಡಿದ್ದರು. ಈ ಕಾರಣಕ್ಕೆ ಕೆಎಲ್ ರಾಹುಲ್ ಕೀಪಿಂಗ್ ಮಾಡಬೇಕಾಯಿತು.

ಅತಿಥೇಯ ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 10 ವಿಕೆಟ್ ಗಳಿಂದ ಭರ್ಜರಿ ಜಯಗಳಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 255 ರನ್ ಗಳಿಗೆ ಆಲೌಟ್ ಆಯಿತು. 

ಭಾರತ ನೀಡಿದ್ದ 256 ರನ್ ಗಳ ಗುರಿ ಬೆನ್ನಟ್ಟಿದ್ದ ಆಸ್ಟ್ರೇಲಿಯಾ ವಿಕೆಟ್ ನಷ್ಟವಿಲ್ಲದೆ 258 ರನ್ ಬಾರಿಸಿ ಭರ್ಜರಿ ಗೆಲುವು ದಾಖಲಿಸಿದೆ. ಆಸ್ಟ್ರೇಲಿಯಾ ಪರ ಆರಂಭಿಕರಾದ ಡೇವಿಡ್ ವಾರ್ನರ್ ಅಜೇಯ 128 ಮತ್ತು ಆರೋನ್ ಪಿಂಚ್ ಅಜೇಯ 110 ರನ್ ಬಾರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com