IPL 2025 Points Table: RCB ಅಗ್ರಸ್ಥಾನಕ್ಕೆ; ಸಾಯಿ ಸುದರ್ಶನ್‌ರಿಂದ ಆರೆಂಜ್ ಕ್ಯಾಪ್ ಕಸಿದ ಕೊಹ್ಲಿ, ಪರ್ಪಲ್ ಕ್ಯಾಪ್ ಯಾರಿಗೆ?

ಮುಂಬೈ ಇಂಡಿಯನ್ಸ್ ತಂಡ 11 ಪಂದ್ಯಗಳಲ್ಲಿ 7 ಗೆಲುವು ಸಾಧಿಸಿದ್ದು, 14 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಆಡಿರುವ 10 ಪಂದ್ಯಗಳಲ್ಲಿ 7 ಗೆಲುವುಗಳೊಂದಿಗೆ ಗುಜರಾತ್ ಟೈಟಾನ್ಸ್‌ ತಂಡ ಮೂರನೇ ಸ್ಥಾನದಲ್ಲಿದೆ.
ಶನಿವಾರ ನಡೆದ ಪಂದ್ಯದಲ್ಲಿ ಎಂಎಸ್ ಧೋನಿ- ವಿರಾಟ್ ಕೊಹ್ಲಿ
ಶನಿವಾರ ನಡೆದ ಪಂದ್ಯದಲ್ಲಿ ಎಂಎಸ್ ಧೋನಿ- ವಿರಾಟ್ ಕೊಹ್ಲಿ
Updated on

ಶನಿವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧದ 2 ರನ್‌ಗಳ ರೋಚಕ ಜಯದೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು (RCB) ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025ರ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರಸ್ಥಾನಕ್ಕೇರಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಈ ಆವೃತ್ತಿಯ ತಮ್ಮ 6ನೇ ಅರ್ಧಶತಕ ಗಳಿಸಿ ತಂಡದ ಗೆಲುವಿಗೆ ಅಡಿಪಾಯ ಹಾಕಿದರು. ಯುವ ಆರಂಭಿಕ ಬ್ಯಾಟ್ಸ್‌ಮನ್ ಆಯುಷ್ ಮ್ಹಾತ್ರೆ ಅವರ 94 ಮತ್ತು ರವೀಂದ್ರ ಜಡೇಜಾ ಅವರ ಅಜೇಯ 77 ರನ್‌ ಗಳಿಸಿದರೂ CSK ಗೆಲುವಿಗೆ ಕಾರಣವಾಗಲಿಲ್ಲ.

ಆರ್‌ಸಿಬಿ ನೀಡಿದ 214 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಸಿಎಸ್‌ಕೆ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 211 ರನ್ ಗಳಿಸಲಷ್ಟೇ ಶಕ್ತವಾಯಿತು. ಆಯುಷ್ ಮ್ಹಾತ್ರೆ 48 ಎಸೆತಗಳಲ್ಲಿ ಐದು ಸಿಕ್ಸರ್‌ ಮತ್ತು ಒಂಬತ್ತು ಬೌಂಡರಿಗಳೊಂದಿಗೆ 94 ರನ್ ಗಳಿಸಿದರು ಮತ್ತು ಜಡೇಜಾ 8 ಬೌಂಡರಿ ಮತ್ತು 2 ಸಿಕ್ಸರ್ ನೆರವಿನೊಂದಿಗೆ 45 ಎಸೆತಗಳಲ್ಲಿ ಔಟಾಗದೆ 77 ರನ್ ಗಳಿಸಿದರು. ಇಬ್ಬರು 114 ರನ್‌ಗಳ ಜೊತೆಯಾಟವಾಡಿದರು. ಸಿಎಸ್‌ಕೆ ಆಡಿರುವ 11 ಪಂದ್ಯಗಳ ಪೈಕಿ 2ರಲ್ಲಿ ಗೆಲುವು ಸಾಧಿಸಿದ್ದು, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಉಳಿದಿದೆ.

ಈ ಗೆಲುವಿನೊಂದಿಗೆ ಆರ್‌ಸಿಬಿ ಐಪಿಎಲ್ 2025 ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಆಡಿರುವ 11 ಪಂದ್ಯಗಳಲ್ಲಿ 8 ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಒಟ್ಟು 16 ಅಂಕಗಳನ್ನು ಗಳಿಸಿದೆ. ಮುಂಬೈ ಇಂಡಿಯನ್ಸ್ ತಂಡ 11 ಪಂದ್ಯಗಳಲ್ಲಿ 7 ಗೆಲುವು ಸಾಧಿಸಿದ್ದು, 14 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಆಡಿರುವ 10 ಪಂದ್ಯಗಳಲ್ಲಿ 7 ಗೆಲುವುಗಳೊಂದಿಗೆ ಗುಜರಾತ್ ಟೈಟಾನ್ಸ್‌ ತಂಡ ಮೂರನೇ ಸ್ಥಾನದಲ್ಲಿದೆ.

ಇನ್ನುಳಿದಂತೆ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಆಡಿರುವ 10 ಪಂದ್ಯಗಳಲ್ಲಿ ತಲಾ 6 ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಕ್ರಮವಾಗಿ 4 ಮತ್ತು 5ನೇ ಸ್ಥಾನದಲ್ಲಿವೆ. ಲಕ್ನೋ ಸೂಪರ್ ಜೈಂಟ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ರಾಜಸ್ತಾನ್ ರಾಯಲ್ಸ್, ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಕ್ರಮವಾಗಿ 6, 7, 8 ಮತ್ತು 9ನೇ ಸ್ಥಾನದಲ್ಲಿವೆ.

ಆರೆಂಜ್ ಕ್ಯಾಪ್ ಯಾರಿಗೆ?

33 ಎಸೆತಗಳಲ್ಲಿ 62 ರನ್ ಗಳಿಸಿದ ವಿರಾಟ್ ಕೊಹ್ಲಿ, ಗುಜರಾತ್ ಟೈಟಾನ್ಸ್‌ನ ಸಾಯಿ ಸುದರ್ಶನ್ ಅವರಿಂದ ಆರೆಂಜ್ ಕ್ಯಾಪ್ ಅನ್ನು ಕಸಿದುಕೊಂಡಿದ್ದಾರೆ. ಆಡಿರುವ 10 ಪಂದ್ಯಗಳಲ್ಲಿ ಸಾಯಿ ಸುದರ್ಶನ್ 504 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಮತ್ತೊಂದೆಡೆ, ಕೊಹ್ಲಿ ಇದುವರೆಗೆ ಆರ್‌ಸಿಬಿ ಪರ ಆಡಿರುವ 11 ಪಂದ್ಯಗಳಲ್ಲಿ 507 ರನ್ ಗಳಿಸಿದ್ದಾರೆ.

ನಂತರದ ಸ್ಥಾನದಲ್ಲಿ ಸೂರ್ಯಕುಮಾರ್ ಯಾದವ್ (ಮುಂಬೈ ಇಂಡಿಯನ್ಸ್, 475 ರನ್), ಜೋಸ್ ಬಟ್ಲರ್ (ಗುಜರಾತ್ ಟೈಟಾನ್ಸ್, 470 ರನ್), ಶುಭಮನ್ ಗಿಲ್ (ಜಿಟಿ, 465 ರನ್, ಯಶಸ್ವಿ ಜೈಸ್ವಾಲ್ (ರಾಜಸ್ಥಾನ್ ರಾಯಲ್ಸ್, 439 ರನ್) ಮತ್ತು ನಿಕೋಲಸ್ ಪೂರನ್ (ಲಕ್ನೋ ಸೂಪರ್ ಜೈಂಟ್ಸ್, 404 ರನ್) ಇದ್ದಾರೆ.

ಶನಿವಾರ ನಡೆದ ಪಂದ್ಯದಲ್ಲಿ ಎಂಎಸ್ ಧೋನಿ- ವಿರಾಟ್ ಕೊಹ್ಲಿ
IPL 2025, RCB vs CSK: ವೇಗಿ ಯಶ್ ದಯಾಳ್ 'ತಂಡದ ಪ್ರಮುಖ ಬೌಲರ್'; RCB ನಾಯಕ ರಜತ್ ಪಾಟೀದಾರ್ ಮೆಚ್ಚುಗೆ!

ಪರ್ಪಲ್ ಕ್ಯಾಪ್ ಯಾರಿಗೆ?

ಗುಜರಾತ್ ಟೈಟಾನ್ಸ್ ವೇಗಿ ಪ್ರಸಿದ್ಧ್ ಕೃಷ್ಣ ಪರ್ಪಲ್ ಕ್ಯಾಪ್ ಮಾಲೀಕರಾಗಿದ್ದಾರೆ. ಆಡಿರುವ 10 ಪಂದ್ಯಗಳಲ್ಲಿ 19 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡದ ಜೋಶ್ ಹೇಜಲ್‌ವುಡ್ ಅವರಿಗಿಂತ ಮುಂದಿದ್ದಾರೆ. ಹೇಜಲ್‌ವುಡ್ ಆಡಿರುವ 10 ಪಂದ್ಯಗಳಲ್ಲಿ 18 ವಿಕೆಟ್‌ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಸ್ಪಿನ್ನರ್ ನೂರ್ ಅಹ್ಮದ್ 11 ಪಂದ್ಯಗಳಲ್ಲಿ 16 ವಿಕೆಟ್‌ಗಳೊಂದಿಗೆ 3ನೇ ಸ್ಥಾನದಲ್ಲಿದ್ದಾರೆ.

MI ನ ಟ್ರೆಂಟ್ ಬೌಲ್ಟ್ ಕೂಡ 16 ವಿಕೆಟ್‌ಗಳೊಂದಿಗೆ ಜಂಟಿಯಾಗಿ ಮೂರನೇ ಸ್ಥಾನ ಪಡೆದಿದ್ದಾರೆ. RCBಯ ಕೃನಾಲ್ ಪಾಂಡ್ಯ, ಖಲೀಲ್ ಅಹ್ಮದ್ ಹಾಗೂ GTಯ ಮೊಹಮ್ಮದ್ ಸಿರಾಜ್ ಮತ್ತು ದೆಹಲಿ ಕ್ಯಾಪಿಟಲ್ಸ್‌ನ ಮಿಚೆಲ್ ಸ್ಟಾರ್ಕ್ 14 ವಿಕೆಟ್‌ ಪಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com