T20 World Cup 2026: ನೇಪಾಳ ವಿರುದ್ಧ ಭರ್ಜರಿ ಜಯ; ಸೂಪರ್ 8 ಹಂತಕ್ಕೆ ಅರ್ಹತೆ ಪಡೆದ ವೆಸ್ಟ್ ಇಂಡೀಸ್!

ಆಡಿರುವ ಮೂರರಲ್ಲೂ ಗೆಲುವು ಸಾಧಿಸುವ ಮೂಲಕ ಆರು ಅಂಕಗಳೊಂದಿಗೆ ಟಿ20 ವಿಶ್ವಕಪ್‌ ಗ್ರೂಪ್ ಸಿಯಲ್ಲಿ ವೆಸ್ಟ್ ಇಂಡೀಸ್ ಅಗ್ರಸ್ಥಾನದಲ್ಲಿದೆ ಮತ್ತು ಸೂಪರ್ 8 ಗೆ ಅರ್ಹತೆ ಪಡೆದ ಮೊದಲ ತಂಡವಾಗಿದೆ.
Shimron Hetmyer
ಶಿಮ್ರಾನ್ ಹೆಟ್ಮೈಯರ್
Updated on

ಮುಂಬೈ: ನಾಯಕ ಶಾಯಿ ಹೋಪ್ ಅವರ ಅಜೇಯ ಅರ್ಧಶತಕದ ನೆರವಿನಿಂದ ವೆಸ್ಟ್ ಇಂಡೀಸ್ ತಂಡವು ನೇಪಾಳವನ್ನು ಒಂಬತ್ತು ವಿಕೆಟ್‌ ಅಂತರದಿಂದ ಸೋಲಿಸಿ ಟಿ20 ವಿಶ್ವಕಪ್‌ನ ಸೂಪರ್ 8 ಹಂತಕ್ಕೆ ಅರ್ಹತೆ ಗಳಿಸಿತು.

ಹೋಪ್ 44 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳ ಸಹಾಯದಿಂದ ಔಟಾಗದೆ 61 ರನ್ ಗಳಿಸಿದರೆ, ಶಿಮ್ರಾನ್ ಹೆಟ್ಮೈಯರ್ 46 ರನ್ ಗಳಿಸಿ 134 ರನ್‌ಗಳ ಸಾಧಾರಣ ಗುರಿಯನ್ನು 28 ಎಸೆತಗಳು ಬಾಕಿ ಇರುವಾಗಲೇ ತಲುಪಲು ಸಹಾಯ ಮಾಡಿದರು.

ಆಡಿರುವ ಮೂರರಲ್ಲೂ ಗೆಲುವು ಸಾಧಿಸುವ ಮೂಲಕ ಆರು ಅಂಕಗಳೊಂದಿಗೆ ಟಿ20 ವಿಶ್ವಕಪ್‌ ಗ್ರೂಪ್ ಸಿಯಲ್ಲಿ ವೆಸ್ಟ್ ಇಂಡೀಸ್ ಅಗ್ರಸ್ಥಾನದಲ್ಲಿದೆ ಮತ್ತು ಸೂಪರ್ 8 ಗೆ ಅರ್ಹತೆ ಪಡೆದ ಮೊದಲ ತಂಡವಾಗಿದೆ.

ಮುಂಬೈನ ವಾಖೆಂಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡವು ಬೌಲಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ನೇಪಾಳ 8 ವಿಕೆಟ್ ನಷ್ಟಕ್ಕೆ 133 ರನ್ ಗಳಿಸಲಷ್ಟೇ ಶಕ್ತವಾಯಿತು.

ದೀಪೇಂದ್ರ ಸಿಂಗ್ ಐರಿ ಹೊರತುಪಡಿಸಿ ಬೇರೆ ಯಾರೊಬ್ಬರೂ ನೇಪಾಳ ಪರ ಉತ್ತಮ ರನ್ ಗಳಿಸಲು ಸಾಧ್ಯವಾಗಲಿಲ್ಲ. ಸೋಮ್‌ಪಾಲ್ ಕಾಮಿ 26, ಆಸಿಫ್ ಶೇಕ್ 11 ರನ್ ಗಳಿಸಿದರು. ಅಂತಿಮವಾಗಿ ನೇಪಾಳ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಸಾಧಾರಣ 133 ರನ್ ಗಳಿಸಿತು.

Shimron Hetmyer
T20 ವಿಶ್ವಕಪ್ 2026: ಇಂಗ್ಲೆಂಡ್ ಬಗ್ಗುಬಡಿದ ವೆಸ್ಟ್ ಇಂಡೀಸ್; 30 ರನ್ ಭರ್ಜರಿ ಜಯ

ವೆಸ್ಟ್ ಇಂಡೀಸ್ ಪರ ಅನುಭವಿ ವೇಗಿ ಜೇಸನ್ ಹೋಲ್ಡರ್ (4/27) ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. ಅಕೇಲ್ ಹೊಸೈನ್, ಮ್ಯಾಥ್ಯೂ ಫೋರ್ಡ್, ಶಾಮರ್ ಜೋಸೆಫ್ ಮತ್ತು ರೋಸ್ಟನ್ ಚೇಸ್ ತಲಾ ಒಂದೊಂದು ವಿಕೆಟ್ ಪಡೆದರು.

134 ರನ್‌ಗಳ ಗುರಿಯನ್ನು ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡದ ಆರಂಭಿಕರಾದ ಬ್ರೆಂಡನ್ ಕಿಂಗ್ 17 ಎಸೆತಗಳಲ್ಲಿ 22 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಶಾಯಿ ಹೋಪ್ 44 ಎಸೆತಗಳಲ್ಲಿ 61 ಮತ್ತು ಶಿಮ್ರಾನ್ ಹೆಟ್ಮೈಯರ್ 32 ಎಸೆತಗಳಲ್ಲಿ 44 ರನ್ ಗಳಿಸುವ ಮೂಲಕ ಅಜೇಯರಾಗಿ ಉಳಿದರು. ಈ ಮೂಲಕ ವೆಸ್ಟ್ ಇಂಡೀಸ್ 15.2 ಓವರ್‌ಗಳಲ್ಲಿಯೇ ಗುರಿ ಮುಟ್ಟುವ ಮೂಲಕ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

ನೇಪಾಳ ಪರ ಸೋಮಪಾಲ್ ಕಾಮಿ ಒಂದು ವಿಕೆಟ್ ಪಡೆದಿದ್ದು ಬಿಟ್ಟರೆ ಬೇರೆ ಯಾವುದೇ ಬೌಲರ್ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com