T20 World Cup 2026: ವೀಕ್ಷಣೆಯಲ್ಲೂ ಹೊಸ ದಾಖಲೆ ಬರೆದ ಭಾರತ vs ಪಾಕಿಸ್ತಾನ ಪಂದ್ಯ!

2024ರ ಆವೃತ್ತಿಯಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿಗೆ ಹೋಲಿಸಿದರೆ, 2026ರ ಈ ಪಂದ್ಯವು ಶೇ 56 ರಷ್ಟು ಹೆಚ್ಚಿನ ವೀಕ್ಷಣೆಯನ್ನು ದಾಖಲಿಸಿದೆ.
Surya kumar yadav - Salman Ali Agha
Updated on

ಟಿ20 ವಿಶ್ವಕಪ್ 2026ರ ಗುಂಪು ಹಂತದ ಭಾರತ-ಪಾಕಿಸ್ತಾನ ನಡೆಯುವುದಕ್ಕೂ ಮುನ್ನ ಸಾಕಷ್ಟು ವಿವಾದ ಮನೆಮಾಡಿತ್ತು. ಅದೆಲ್ಲದರ ನಡುವೆ ನಿಗದಿತ ಸಮಯಕ್ಕೆ ಕೊಲಂಬೊದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾದವು. ಇದೀಗ ಪಂದ್ಯಾವಳಿಯಲ್ಲಿಯೇ ಭಾರತ vs ಪಾಕಿಸ್ತಾನ ಪಂದ್ಯವು ದಾಖಲೆ ಬರೆದಿದ್ದು, ಜಿಯೋಹಾಟ್‌ಸ್ಟಾರ್‌ನಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ಪಂದ್ಯವಾಗಿದೆ.

ಭಾರತದ ಅಧಿಕೃತ ಪ್ರಸಾರ ಮತ್ತು ಡಿಜಿಟಲ್ ಪಾಲುದಾರ ಜಿಯೋಸ್ಟಾರ್ ಪ್ರಕಾರ, ಜಿಯೋಹಾಟ್‌ಸ್ಟಾರ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, ಬರೋಬ್ಬರಿ ದಾಖಲೆಯ 163 ಮಿಲಿಯನ್ (16.30 ಕೋಟಿ) ವೀಕ್ಷಣೆ ಕಂಡಿದೆ. ಇದು ಯಾವುದೇ ಐಸಿಸಿ ಟಿ20 ಕಾರ್ಯಕ್ರಮಕ್ಕಿಂತಲೂ ಅತಿ ಹೆಚ್ಚು. ಇದು ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 2024ರ ಟಿ20 ವಿಶ್ವಕಪ್ ಫೈನಲ್‌ನ ಡಿಜಿಟಲ್ ವೀಕ್ಷಕರ ಸಂಖ್ಯೆಯನ್ನು ಸಹ ಮೀರಿಸಿದೆ.

2024ರ ಆವೃತ್ತಿಯಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿಗೆ ಹೋಲಿಸಿದರೆ, 2026ರ ಈ ಪಂದ್ಯವು ಶೇ 56 ರಷ್ಟು ಹೆಚ್ಚಿನ ವೀಕ್ಷಣೆಯನ್ನು ದಾಖಲಿಸಿದೆ. ಮೊಬೈಲ್‌ನಲ್ಲಿ, ಇದು ಯಾವುದೇ ಐಸಿಸಿ ಟಿ20 ಲೀಗ್ ಹಂತದ ಪಂದ್ಯಕ್ಕಿಂತಲೂ ಅತಿಹೆಚ್ಚು ವೀಕ್ಷಣೆ ಕಂಡಿದೆ. ಇದು ಹಿಂದಿನ ಭಾರತ-ಪಾಕಿಸ್ತಾನ ಮುಖಾಮುಖಿಗಿಂತ 1.2 ಪಟ್ಟು ಹೆಚ್ಚಾಗಿದೆ. ಸಂಪರ್ಕಿತ ಟಿವಿಯಲ್ಲಿ (CTV) 2024ರ ಪಂದ್ಯಕ್ಕಿಂತ 2.4 ಪಟ್ಟು ಹೆಚ್ಚಾಗಿದೆ.

ಭಾರತ-ಪಾಕಿಸ್ತಾನ ನಡುವಿನ ಪೈಪೋಟಿಯು ಸಾಕಷ್ಟು ಜನಪ್ರಿಯತೆ ಹೊಂದಿದೆ ಎಂಬುದು ಮತ್ತೊಮ್ಮೆ ಸಾಭೀತಾಗಿದೆ. ಈ ಪಂದ್ಯವು ಭಾರಿ ಗಮನ ಸೆಳೆದಿದ್ದು, 20 ಬಿಲಿಯನ್ ನಿಮಿಷಗಳ ವೀಕ್ಷಣೆ ಸಮಯವನ್ನು ದಾಖಲಿಸಿದೆ. ಇದು ಅದರ ಹಿಂದಿನ T20 ವಿಶ್ವಕಪ್ ಪಂದ್ಯಕ್ಕಿಂತ ಶೇ 42 ರಷ್ಟು ಹೆಚ್ಚಾಗಿದೆ. ಪಾಕಿಸ್ತಾನ ವಿರುದ್ಧ 61 ರನ್‌ಗಳ ಜಯ ಸಾಧಿಸುವ ಮೂಲಕ ಭಾರತ ಪ್ರಾಬಲ್ಯ ಸಾಧಿಸಿದೆ. T20 ವಿಶ್ವಕಪ್‌ಗಳಲ್ಲಿ ಪಾಕಿಸ್ತಾನ ಮತ್ತು ಭಾರತ 9 ಬಾರಿ ಮುಖಾಮುಖಿಯಾಗಿದ್ದು, ಕೇವಲ ಒಂದು ಬಾರಿ ಮಾತ್ರ ಪಾಕಿಸ್ತಾನ ಗೆದ್ದಿದೆ.

ಭಾರತ-ಪಾಕಿಸ್ತಾನ ಪಂದ್ಯವು ಟೆಲಿವಿಷನ್ ರೇಟಿಂಗ್‌ನಲ್ಲಿ (ಟಿವಿಆರ್) ಶೇ 71 ರಷ್ಟು ಏರಿಕೆ ಕಂಡಿದೆ. ಇದು 2021 ರಿಂದೀಚೆಗೆ ಟಿವಿಯಲ್ಲಿ ಅತಿ ಹೆಚ್ಚು ರೇಟಿಂಗ್ ಪಡೆದ ಟಿ20 ಘರ್ಷಣೆಯಾಗಿದೆ. ಆನ್‌ಲೈನ್ ಸ್ಟ್ರೀಮಿಂಗ್‌ನ ಜನಪ್ರಿಯತೆಯ ಹೊರತಾಗಿಯೂ, ಜನರು ಈ ಪೈಪೋಟಿಯಂತಹ ದೊಡ್ಡ ಕಾರ್ಯಕ್ರಮವನ್ನು ನಿಗದಿತ ಸಮಯದಲ್ಲಿ ದೂರದರ್ಶನದಲ್ಲಿ ನೇರಪ್ರಸಾರ ವೀಕ್ಷಿಸಿದ್ದಾರೆ.

'ಭಾರತ vs ಪಾಕಿಸ್ತಾನ ಪಂದ್ಯ ಪ್ರಾರಂಭವಾಗುವ ಮೊದಲು ಭಾರಿ ಪ್ರಚಾರವನ್ನು ಹೊಂದಿತ್ತು ಮತ್ತು ಪ್ರಮುಖ ಕ್ರೀಡಾಕೂಟವಾಗಿ ನಿರೀಕ್ಷೆಗಳಿಗೆ ತಕ್ಕಂತೆ ಇತ್ತು. ಟಿವಿ ಮತ್ತು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ವೀಕ್ಷಕರ ಸಂಖ್ಯೆ ಮತ್ತು ಒಟ್ಟು ವೀಕ್ಷಣೆಯ ಸಮಯ ದಾಖಲೆ ಬರೆದಿದೆ. ಪ್ರಪಂಚದಾದ್ಯಂತದ ಅಭಿಮಾನಿಗಳು ಐಸಿಸಿ ಪುರುಷರ ಟಿ20 ವಿಶ್ವಕಪ್ 2026ರೊಂದಿಗೆ ಬಹು ವೇದಿಕೆಗಳಲ್ಲಿ ಎಷ್ಟು ಬಲವಾಗಿ ತೊಡಗಿಸಿಕೊಂಡಿದ್ದಾರೆ ಎಂಬುದನ್ನು ಈ ದೊಡ್ಡ ಸಂಖ್ಯೆಗಳು ತೋರಿಸುತ್ತವೆ' ಎಂದು ಜಿಯೋಸ್ಟಾರ್‌ನ ಮಾರಾಟ, ಕ್ರೀಡೆಗಳ ಮುಖ್ಯಸ್ಥ ಅನುಪ್ ಗೋವಿಂದನ್ ಹೇಳಿದರು.

'ಭಾರತ vs ಪಾಕಿಸ್ತಾನ ಪಂದ್ಯದ ಅಭೂತಪೂರ್ವ ವೀಕ್ಷಕರ ಸಂಖ್ಯೆ ಮತ್ತು ಭಾಗವಹಿಸುವಿಕೆಯ ಸಂಖ್ಯೆಯು ಐಸಿಸಿ ಪುರುಷರ ಟಿ20 ವಿಶ್ವಕಪ್‌ನ ಬಗ್ಗೆ ಅಭಿಮಾನಿಗಳು ಹೊಂದಿರುವ ಗೀಳಿಗೆ ಮತ್ತಷ್ಟು ಪುರಾವೆಯಾಗಿದೆ' ಎಂದು ಜಿಯೋಸ್ಟಾರ್‌ನ ಕ್ರೀಡಾ ವಿಭಾಗದ ವಿಷಯ ಮುಖ್ಯಸ್ಥ ಸಿದ್ಧಾರ್ಥ್ ಶರ್ಮಾ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com