IPL 2026: Top 2 ಸ್ಥಾನಕ್ಕಾಗಿ ಮದಗಜಗಳ ಕಾದಾಟ, 256 ರನ್ ಗಳ ಬೃಹತ್ ಮೊತ್ತ ಪೇರಿಸಿದ SRH, RCBಗೆ ಬೇಕು ಕನಿಷ್ಟ 166 ರನ್!

ಸನ್ ರೈಸರ್ಸ್ ಹೈದರಾಬಾದ್ ತಂಡ ಸ್ಫೋಟಕ ಬ್ಯಾಟಿಂಗ್ ನಡೆಸಿ ನಿಗಧಿತ 20 ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 255 ರನ್ ಕಲೆಹಾಕಿತು.
Ishan Kishan Leads The Way With 79
ಇಶಾನ್ ಕಿಶನ್ ಬ್ಯಾಟಿಂಗ್ ಆರ್ಭಟ
Updated on

ಹೈದರಾಬಾದ್: ಐಪಿಎಲ್ ಟೂರ್ನಿಯ ಇಂದಿನ ಮಹತ್ವದ ಪಂದ್ಯದಲ್ಲಿ ತನ್ನಕೊನೆಯ ಲೀಗ್ ಪಂದ್ಯವನ್ನಾಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 256 ರನ್ ಗಳ ಬೃಹತ್ ಗುರಿ ಬೆನ್ನು ಹತ್ತಿದೆ.

ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಇಂದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಸ್ಫೋಟಕ ಬ್ಯಾಟಿಂಗ್ ನಡೆಸಿ ನಿಗಧಿತ 20 ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 255 ರನ್ ಕಲೆಹಾಕಿತು.

ಸನ್ ರೈಸರ್ಸ್ ಪರ ಅಭಿಷೇಕ್ ಶರ್ಮಾ ಕೇವಲ 22 ಎಸೆತಗಳಲ್ಲಿ 5 ಸಿಕ್ಸರ್ ಮತ್ತು 4 ಬೌಂಡರಿ ಸಹಿತ 56 ರನ್ ಪೇರಿಸಿದರು. ಅಂತೆಯೇ ಮತ್ತೋರ್ವ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ 16 ಎಸೆತಗಳಲ್ಲಿ 5 ಬೌಂಡರಿ ಸಹಿತ 26 ರನ್ ಪೇರಿಸಿದರು.

ಬಳಿಕ ಬಂದ ಇಶಾನ್ ಕಿಶನ್ ಆರ್ ಸಿಬಿ ಬೌಲರ್ ಗಳ ಮೇಲೆ ಸವಾರಿ ಮಾಡಿದರು. ಕೊನೆಯ ಎಸೆತದವರೆಗೂ ಕ್ರೀಸ್ ನಲ್ಲಿದ್ದ ಇಶಾನ್ ಕಿಶನ್ ಸ್ಫೋಟಕ ಇನ್ನಿಂಗ್ಸ್ ಆಡಿ ಸನ್ ರೈಸರ್ಸ್ ಬೃಹತ್ ಮೊತ್ತಕ್ಕೆ ಕಾರಣರಾದರು.

Ishan Kishan Leads The Way With 79
IPL 2026: ಕೊಹ್ಲಿ ಜೊತೆಗಿನ ಬ್ಯಾಟಿಂಗ್ ನನ್ನ ಬೆಳವಣಿಗೆಗೆ ಕಾರಣ ಎಂದ ಪಡಿಕಲ್; ಸೂರ್ಯವಂಶಿ ಬಗ್ಗೆ ಹೇಳಿದ್ದೇನು?

ಕೇವಲ 46 ಎಸೆತಗಳನ್ನು ಎದುರಿಸಿದ ಇಶಾನ್ ಕಿಶನ್ 3 ಸಿಕ್ಸರ್ ಮತ್ತು 8 ಬೌಂಡರಿ ಸಹಿತ 79 ರನ್ ಪೇರಿಸಿದರೆ, ಅವರಿಗೆ ಉತ್ತಮ ಸಾಥ್ ನೀಡಿದ ಹೆನ್ರಿಚ್ ಕ್ಲಾಸೆನ್ 24 ಎಸೆತಗಳಲ್ಲಿ 5 ಸಿಕ್ಸರ್ ಮತ್ತು 2 ಬೌಂಡರಿ ಸಹಿತ 51 ರನ್ ಕಲೆಹಾಕಿದರು. ಬಳಿಕ ಅಂತಿಮ ಹಂತದಲ್ಲಿ ಕ್ರೀಸ್ ಗೆ ಬಂದ ನಿತೀಶ್ ಕುಮಾರ್ ರೆಡ್ಡಿ ಕೂಡ 12 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 1 ಬೌಂಡರಿ ಸಹಿತ ಅಜೇಯ 29 ರನ್ ಕಲೆಹಾಕಿದರು.

ಅಂತಿಮವಾಗಿ ಹೈದರಾಬಾದ್ ತಂಡ 4 ವಿಕೆಟ್ ನಷ್ಟಕ್ಕೆ 255ರನ್ ಕಲೆಹಾಕಿ ಆರ್ ಸಿಬಿಗೆ ಗೆಲ್ಲಲು 256 ರನ್ ಗಳ ಬೃಹತ್ ಗುರಿ ನೀಡಿದೆ. ಆರ್ ಸಿಬಿ ಪರ ರಸಿಕ್ ಸಲಾಂ ಧರ್ 2 ವಿಕೆಟ್ ಪಡೆದರೆ, ಸುಯಾಶ್ ಶರ್ಮಾ ಮತ್ತು ಕೃನಾಲ್ ಪಾಂಡ್ಯಾ ತಲಾ 1 ವಿಕೆಟ್ ಪಡೆದರು.

Top 2 ಸ್ಥಾನಕ್ಕಾಗಿ ಮದಗಜಗಳ ಕಾದಾಟ

ಇನ್ನು ಇಂದಿನ ಪಂದ್ಯ ಪ್ಲೇಆಫ್ ಗೆ ಮಾತ್ರವಲ್ಲ ಟಾಪ್ 2 ಸ್ಥಾನಕ್ಕಾಗೂ ನಡೆಯುತ್ತಿರುವ ಕದನವಾಗಿದೆ. ಇಂದಿನ ಪಂದ್ಯವನ್ನು ಸನ್ ರೈಸರ್ಸ್ ಹೈದರಾಬಾದ್ ತಂಡ 100 ರನ್ ಗಳ ಅಂತರದಲ್ಲಿ ಗೆದ್ದರೆ ಅಗ್ರಸ್ಥಾನಕ್ಕೇರುವ ಸಾಧ್ಯತೆ ಇದೆ. ಅಂತೆಯೇ 80 ರನ್ ಗಳ ಅಂತರದಲ್ಲಿ ಗೆದ್ದರೆ 2ನೇ ಸ್ಥಾನಕ್ಕೇರಲಿದೆ. ಹೀಗಾಗಿ ಇಂದಿನ ಪಂದ್ಯವನ್ನು ಭಾರಿ ಅಂತರದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

ಆರ್ ಸಿಬಿಗೂ ಅವಕಾಶ

ಅಂತೆಯೇ ಈ ಪಂದ್ಯದಲ್ಲಿ ಆರ್ ಸಿಹಿ 166 ರನ್ ಗಳಿಸಿ ಸೋತರೂ ಅಗ್ರ 2 ಸ್ಥಾನದಲ್ಲಿ ಉಳಿಯಬಹುದು. ಒಂದು ವೇಳೆ 180 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದರೆ ಅಗ್ರಸ್ಥಾನದಲ್ಲಿಯೇ ಮುಂದುವರೆಯುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com