ಜಿಲ್ಲಾ ಸುದ್ದಿ

ನಾಳೆಯಿಂದ ಅಂತಾರಾಷ್ಟ್ರೀಯ ಮಕ್ಕಳ ಸಿನಿಮೋತ್ಸವ

ನಾಳೆಯಿಂದ ಅಂತಾರಾಷ್ಟ್ರೀಯ ಮಕ್ಕಳ ಸಿನಿಮೋತ್ಸವ
Published On :

ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ವಿವಿಧ ಇಲಾಖೆ ಹಾಗೂ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ರಾಜ್ಯ ಸರ್ಕಾರ ಆಯೋಜಿಸಿರುವ 7 ದಿನಗಳ ಅಂತಾರಾಷ್ಟ್ರೀಯ ಮಕ್ಕಳ ಸಿನಿಮೋತ್ಸವ ನ.14ರಿಂದ ನ.20ರವರೆಗೆ ನಡೆಯಲಿದೆ.

ಆಯ್ಕೆಯಾದ ಮಕ್ಕಳ ಚಿತ್ರಗಳು ಉಪಗ್ರಹ ತಂತ್ರಜ್ಞಾನದ ಮೂಲಕ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿನ 90 ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ಪ್ರದರ್ಶನಗೊಳ್ಳಲಿವೆ. 10 ಲಕ್ಷ ಮಕ್ಕಳು ಚಿತ್ರಗಳನ್ನು ವೀಕ್ಷಣೆ ಮಾಡುವ ನಿರೀಕ್ಷೆಯಿದೆ.

ಚಿತ್ರಗಳ ವೀಕ್ಷಣೆಗೆ ಮಕ್ಕಳನ್ನು ಕರೆತರುವಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕರ್ನಾಟಕ ಚಲನಚಿತ್ರ ಅಕಾಡೆಮಿ, ಸಾರ್ವಜನಿಕ ಶಿಕ್ಷಣ ಇಲಾಖೆ ಮೂಲಕ ವಿವಿಧ ಸಂಘ ಸಂಸ್ಥೆಗಳಿಗೆ ಮನವಿ ಮಾಡಲಾಗಿದೆ.

ಸರ್ಕಾರೇತರ ಸಂಸ್ಥೆಗಳಿಗೂ ಮಾಹಿತಿ ನೀಡಲಾಗಿದೆ ಎಂದು ವಾರ್ತಾ ಮತ್ತ ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇಂದು ಉದ್ಘಾಟನೆ: ಪ್ರದರ್ಶನದ ಆರಂಭಕ್ಕೂ ಮುನ್ನಾದಿನ ಅಂದರೆ ನ.13ರಂದೇ ಸಿನಿಮೋತ್ಸವಕ್ಕೆ ನಗರದಲ್ಲಿ ಚಾಲನೆ ಸಿಗಲಿದೆ. ಅಂಬೇಡ್ಕರ್ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿನಿಮೋತ್ಸವ ಉದ್ಘಾಟಿಸಿ ಮಾತನಾಡಲಿದ್ದಾರೆ. ಸಚಿವರಾದ ರಾಮಲಿಂಗಾರೆಡ್ಡಿ, ಕಿಮ್ಮನೆ ರತ್ನಾಕರ್, ಉಮಾಶ್ರೀ, ಸಂಸದ ಪಿ.ಸಿ ಮೋಹನ್, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಚ್.ಡಿ ಗಂಗರಾಜು ಭಾಗವಹಿಸಲಿದ್ದಾರೆ.

ಭಾರತೀಯ ಮಕ್ಕಳ ಚಲನಚಿತ್ರ ಒಕ್ಕೂಟದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರವಣ್ ಕುಮಾರ್, ಚಿತ್ರೋತ್ಸವ ಸಲಹೆಗಾರ ಶ್ರೀನಿವಾಸ ಸಂತಾನಂ, ನಟ ಹಾಗೂ ನಿರ್ದೇಶಕರಾದ ಕಿಶನ್ ಎಸ್.ಎಸ್ ಅರ್ಜುನ್ ಸರ್ಜಾ, ವಿಜಯರಾಘವೇಂದ್ರ, ನಟಿ ರಾಧಿಕಾ ಪಂಡಿತ್ ಭಾಗವಹಿಸಲಿದ್ದಾರೆ.

ಮೊದಲ ಸಿನಿಮಾ ಸಿಂಡ್ರೆಲ್ಲಾ ಮೂನ್
ರಾಜ್ಯ ಮಟ್ಟದಲ್ಲಿ ಆಯೋಜಿತ ಅಂತರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ ಉದ್ಘಾಟನೆ ಚಿತ್ರವಗಾ ಚೀನಾದ ಮೂನ್ ಪ್ರದರ್ಶನಗೊಳ್ಳುತ್ತಿದೆ.

ಬೋವೆನ್ ಇದರ ನಿರ್ದೇಶಕ. ಹೆಣ್ಣು ಮೇಲಿನ ಶೋಷಣೆ ಹಾಗೂ ಬಾಲ ಪದ್ಥತಿಯ ಮೇಲೆ ಈ ಚಿತ್ರ ಬೆಳಕು. ಹೆಣ್ಣು-ಗಂಡಿನ ನಡುವಿನ ತಾರತಮ್ಯ ಚಿತ್ರದ ಕಥಾವಸ್ತು.

6ರಿಂದ 10 ವರ್ಷದ ಮಕ್ಕಳಿಗೆ

ಚಿತ್ರ    
ನಿರ್ದೇಶಕ        
ದೇಶ

ಟೈನಾ        
ರೋಸಾನೆ ಸ್ವರ್ತಮನ್
ಬ್ರೆಜಿಲ್
ಯಲೋಕೊಲ್ಟ್
ಕೋರೊಲ್ ದೋರ್ಜ್
ಮಂಗೋಲಿಯಾ
ಪನಿ ಕ್ಲುಕಿ   
ವೆಸಾ ಸಿಂವೋಕ
ಝೇಕ್ ರಿಪಬ್ಲಿಕ್
ಬ್ಯೂ ಟೈಗರ್    
ಪೀಟರ್ ಔಕ್ರೋಪೆಕ್
ಝೇಕ್ ರಿಪಬ್ಲಿಕ್

ಜರ್ನಿ ಆಫ್ ದಿ ಬಿಗನಿಂಗ್ ಆಫ್ ಟೈಮ್
ಕರೆಲ್ ಜಮಾನ್
ಝೇಕ್ ರಿಪಬ್ಲಿಕ್

ಗೂಪಿ ಗವ್ಯಾಯಾ ಬಾತಾ ಬಜಾಯ
ಶಿಲ್ಪಾರನಾಡೆ
ಭಾರತ
ಟಚಿಂಗ್ ವೈಲ್ಡ್ ಹಾರ್ಸಸ್
ಎಲೆನಾರ್ ಲಿಂಡೊ
ಅಮೆರಿಕ

ಕಫಲ್
ಬತುಲ್ ಮುಕ್ತಿಯಾರ್
ಭಾರತ

ಖೋಬ್
ರೇನ್ ಬೋರಾ
ಭಾರತ

11ರಿಂದ 16 ವರ್ಷದ ಮಕ್ಕಳಿಗಾಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.