ಜಿಲ್ಲಾ ಸುದ್ದಿ

ಗುದದ್ವಾರದಲ್ಲಿ 700 ಗ್ರಾಂ ಚಿನ್ನ ಪತ್ತೆ..!

ಗುದದ್ವಾರದಲ್ಲಿ 700 ಗ್ರಾಂ ಚಿನ್ನ ಪತ್ತೆ..!
Published On :

ಮಂಗಳೂರು: ಗುದದ್ವಾರದಲ್ಲಿ ಸುಮಾರು 700 ಗ್ರಾಂ ಚಿನ್ನವನ್ನು ಇಟ್ಟು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಪ್ರಯಾಣಿಕನೋರ್ವನನ್ನು ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

ದುಬೈನಿಂದ ಮಂಗಳೂರಿಗೆ ಆಗಮಿಸಿದ್ದ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಿದ್ದ ಪ್ರಯಾಣಿಕ ಅಬ್ದುಲ್ ರೆಹಮಾನ್ ಸುಲೇಮಾನ್ (43 ವರ್ಷ)ನನ್ನು ಪೊಲೀಸರು ಬಂಧಿಸಿದ್ದು, ಆತನಿಂದ ಸುಮಾರು 700 ಗ್ರಾಂ ಚಿನ್ನದ ಬಿಸ್ಕೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತನು ಮೂಲತಃ ಕಾಸರಗೋಡಿನ ತೆಕ್ಕಲ್ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ. 

ತೆರಿಗೆ ಅಧಿಕಾರಿಗಳ ಕಣ್ಣು ತಪ್ಪಿಸಲು ಸುಲೇಮಾನ್ ತನ್ನ ಗುದದ್ವಾರದಲ್ಲಿ ಚಿನ್ನದ ಬಿಸ್ಕೆಟ್‌ಗಳನ್ನು ಇಟ್ಟುಕೊಂಡಿದ್ದನು. ಬಜ್ಪೆ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಸ್ಕ್ಯಾನಿಂಗ್‌ಗೆ ಒಳಪಡಿಸುವಾಗ ಸುಲೇಮಾನ್ ಬಳಿ ಲೋಹದ ವಸ್ತುಗಳು ಇರುವುದು ಪತ್ತೆಯಾಗಿತ್ತು. ಸುಲೇಮಾನ್‌ನನ್ನು ಶೋಧಕ್ಕೆ ಒಳಪಡಿಸಿದಾಗ ಆತನ ಬಳಿ ಯಾವುದೇ ಲೋಹದ ವಸ್ತುಗಳು ಪತ್ತೆಯಾಗಲಿಲ್ಲ. ಆದರೆ ಅನುಮಾನಗೊಂಡ ಅಧಿಕಾರಿಗಳು ಆತನನ್ನು ಸೂಕ್ಷ್ಮವಾಗಿ ತನಿಖೆಗೆ ಒಳಪಡಿಸಿದಾಗ ಆತನ ಗುದದ್ವಾರದಲ್ಲಿ ಚಿನ್ನದ ಬಿಸ್ಕೆಟ್‌ಗಳು ಇರುವುದು ಕಂಡುಬಂದಿತ್ತು.

ಪ್ರಸ್ತುತ ಚಿನ್ನದ ಬಿಸ್ಕೆಟ್‌ಗಳನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು, ಸುಲೇಮಾನ್‌ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಜ್ಪೆ ವಿಮಾನ ನಿಲ್ದಾಣದಲ್ಲಿ ಇಂತಹ ಅಕ್ರಮ ಕಳ್ಳಸಾಗಣೆಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪ್ರಸ್ತುತ ಪ್ರಕರಣ ಸೇರಿದಂತೆ ಈ ವಾರದಲ್ಲಿಯೇ ಒಟ್ಟು ಐದು ಕಳ್ಳಸಾಗಣೆ ಪ್ರಕರಣಗಳು ಬೆಳಕಿಗೆ ಬಂದಿವೆ.

ತೆರಿಗೆ ಉಳಿಸುವ ದೃಷ್ಟಿಯಿಂದಲೋ ಅಥವಾ ಅಕ್ರಮ ಚುಟುವಟಿಕೆಗಳಿಗಾಗಿಯೋ ವಿದೇಶದಲ್ಲಿರುವ ಕಳ್ಳ ಸಾಗಣೆ ಜಾಲಗಳು ಅಲ್ಲಿ ಕೆಲಸ ಮಾಡುವ ಭಾರತೀಯ ಮೂಲದ ಕೆಲಸಗಾರರನ್ನು ಇಂತಹ ಅಕ್ರಮ ಕಳ್ಳಸಾಗಣೆಗೆ ಬಳಸಿಕೊಳ್ಳುತ್ತಿದ್ದಾರೆ. ಹಣಕ್ಕಾಗಿಯೋ ಅಥವಾ ಅವರ ಬೆದರಿಕೆಗೆ ಒಳಗಾಗಿ ಹಲವು ಮುಗ್ದರು ಇಂತಹ ಕಳ್ಳ ಸಾಗಣೆಯ ಜಾಲದಲ್ಲಿ ಸಿಲುಕಿ ಜೈಲು ಪಾಲಾಗುತ್ತಿದ್ದಾರೆ.

ಈ ಹಿಂದಿನ ಹಲವು ಪ್ರಕರಣಗಳಲ್ಲಿ ಇದು ಸಾಬೀತಾಗಿದ್ದು, ಮಾತ್ರೆಯ ರೂಪದಲ್ಲಿ, ಚಾಕೊಲೇಟ್ ಹೊದಿಕೆಯ ರೂಪದಲ್ಲಿ ಕಳ್ಳಸಾಗಣೆ ಮಾಡುವಾಗ ಹಲವು ಪ್ರಯಾಣಿಕರು ಸಿಕ್ಕಿಬಿದಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.