

ಬೆಂಗಳೂರು: ಕಳೆದ ವಾರದಿಂದ ನಗರದಲ್ಲಿ ಬಿಟ್ಟು ಬಿಟ್ಟು ಸುರಿಯುತ್ತಿರುವ ಬೇಸಿಗೆ ಮಳೆ ಉದ್ಯಾನ ನಗರಿ ಬೆಂಗಳೂರಿಗರಿಗೆ ಮಳೆಗಾಲದ ಅನುಭವ ನೀಡುತ್ತಿದೆ. ಆದರೆ, ಗುರುವಾರ ಸುರಿದ ಮಳೆ ಸಾಕಷ್ಟು ಹಾನಿಗೂ
ಕಾರಣವಾಗಿದೆ. ಗುಡುಗು ಮಿಂಚು, ಬಿರುಗಾಳಿ ಸುರಿದಿದ್ದು, ನಗರದಲ್ಲಿ ಸುಮಾರು 25 ಕಡೆ ಬೃಹತ್ ಮರಗಳು ಧರೆಗುರುಳಿವೆ. ಈ ವೇಳೆ 10ಕ್ಕೂ ಹೆಚ್ಚು ಕಾರುಗಳು ಹಾಗೂ ಒಂದು ಗೂಡ್ಸ್ ವಾಹನ ಜಖಂಗೊಂಡಿದ್ದು, ಮೂರ್ನಾಲ್ಕು ಕಡೆ ವಿದ್ಯುತ್ ಕಂಬಗಳು ನೆಲಕಚ್ಚಿವೆ. ಪರಿಣಾಮ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯವಾಗಿತ್ತು.
ಮರಗಳು ಬಿದ್ದದ್ದೆಲ್ಲಿ?
-ನಗರದ ದಕ್ಷಿಣ ಭಾಗದಲ್ಲಿ ಹಾಗೂ ನಗರ ಕೇಂದ್ರ ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗಿದೆ.
-ನಗರದಾದ್ಯಂತ ಸುಮಾರು ನೂರು ಮರಗಳು ಧರೆಗುರುಳಿವೆ: ಬಿಬಿಎಂಪಿ ಸಿಬ್ಬಂದಿಯಿಂದ ಅಂದಾಜು
- ಕೋರಮಂಗಲ ಬಿಡಿಎ ಕಾಂಪ್ಲೆಕ್ಸ್ ಬಳಿ ಬೃಹತ್ ಮರ ಗೂಡ್ಸ್ ಆಟೋ ಮೇಲೆ ಉರುಳಿ ಬಿದ್ದಿದೆ.
- ಚಾಲಕನಿಗೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
- ಹೊಂಬೇಗೌಡ ನಗರದಲ್ಲೂ ದೊಡ್ಡ ಮರ ಉರುಳಿದೆ.
ಕಾರಿನ ಮೇಲೆ ಮರ
- ಜಯನಗರದ 4ನೇ ಬ್ಲಾಕ್ 30ನೇ ಅಡ್ಡರಸ್ತೆಯಲ್ಲಿ ಬೃಹತ್ ಮರ ನೆಲಕ್ಕೆ
- ಕಾರಿನ ಮೇಲೆ ಬಿದ್ದು, ಮೈಸೂರು ಮೂಲದ ಉದ್ಯಮಿ ಪ್ರಾಣಾಪಾಯದಿಂದ ಪಾರು
- ವಿಲ್ಸನ್ ಗಾರ್ಡನ್, ಸುಬ್ಬಯ್ಯ ವೃತ್ತ, ಹಲಸೂರು ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ ಕಚೇರಿ ಬಳಿ, ಕಮ್ಮನಹಳ್ಳಿ, ಬನಶಂಕರಿಯಲ್ಲಿ ಮರಗಳು ಉರುಳಿವೆ.
- ಜಯನಗರದಲ್ಲಿ ಫುಟ್‍ಪಾತ್ ಮೇಲಿದ್ದ ಮರವೊಂದು ಉರುಳಿ ಮನೆ ಮೇಲೆ ಬಿದ್ದ ಪರಿಣಾಮ ಮನೆಗೆ ಅಲ್ಪ ಪ್ರಮಾಣದ ಹಾನಿ.
- ಸುಬ್ಬಣ್ಣ ಗಾರ್ಡನ್ ಪ್ರದೇಶದಲ್ಲಿ ಹೊರ್ಡಿಂಗ್ ಹಾಗೂ ಫ್ಲೆಕ್ಸ್ ಗಳು ಕುಸಿದು ಬಿದ್ದಿದ್ದು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
- ಹೈಕೋರ್ಟ್ ಆವರಣದಲ್ಲಿ ಹಳೇ ಮರ ಬುಡಸಮೇತ ಬಿದ್ದ ಪರಿಣಾಮ ಎರಡ್ಮೂರು ದ್ವಿಚಕ್ರ ವಾಹನಗಳು ಜಖಂ.
- ರೆಸಿಡೆನ್ಸಿ ರಸ್ತೆಯಲ್ಲೂ ಮರ ಬಿದ್ದು ಕೆಲ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು.
ಎಲ್ಲೆಲ್ಲಿ ಹೆಚ್ಚು ಮಳೆ?
- ಮೆಜೆಸ್ಟಿಕ್, ಎಂಜಿ ರಸ್ತೆ ಸೇರಿದಂತೆ ಕೇಂದ್ರ
ಭಾಗದ ಬಹುತೇಕ ಪ್ರದೇಶಗಳು.
- ಜಯನಗರ, ಕೋರಮಂಗಲ, ಇಂದಿರಾ
ನಗರ, ಜೆ.ಪಿ ನಗರ, ಬನಶಂಕರಿ,
ಮಲ್ಲೇಶ್ವರದಲ್ಲಿ ಹೆಚ್ಚು ಮಳೆ.
ಸಂಚಾರ ದಟ್ಟಣೆ
ಮುಷ್ಕರ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದ ಬಸ್ ಹಾಗೂ ಆಟೋಗಳ ಸಂಚಾರ ವಿರಳವಾಗಿತ್ತು. ಸಂಜೆಯಾಗುತ್ತಿದ್ದಂತೆ ವಾಹನಗಳು ರಸ್ತೆಗಿಳಿದಿದ್ದು ಮಳೆಯು ಆರಂಭವಾದ ಕಾರಣ ನಗರದ ಬಹುತೇಕ ಭಾಗಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಎಂ.ಜಿರಸ್ತೆ, ಬ್ರಿಗೇಡ್ ರಸ್ತೆ, ಮೆಜೆಸ್ಟಿಕ್ ಸುತ್ತ ಮುತ್ತ, ಮಾಗಡಿ ರಸ್ತೆ, ಓಕಳಿಪುರ, ಮೈಸೂರು ರಸ್ತೆ, ಇಂದಿರಾ ನಗರ, ಕೋರಮಂಗಲ, ಜಯನಗರದಲ್ಲಿ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡಿದರು.
ನೆಲಕ್ಕುರುಳಿದ ಬೃಹತ್ ಮರಗಳು
- ಬಿರುಗಾಳಿ ಸಹಿತ ಮಳೆಗೆ ಕೇವಲ 50 ಮೀಟರ್ ಅಂತರದಲ್ಲಿ ಎರಡು ಬೃಹತ್ ಮರಗಳು ರಸ್ತೆಗೆ ಬಿದ್ದಿವೆ.
- ಇದರಿಂದ ಬಿಎಂಡಬ್ಲ್ಯೂ, ವ್ಯಾಗನ್ ಆರ್, ಸ್ಕೋಡಾ ಕಾರುಗಳು ಜಖಂ.
- ರಸ್ತೆಯಲ್ಲಿ ಎರಡು ಕಡೆ ಮರಗಳು ಬಿದ್ದಿದ್ದರಿಂದ 1 ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಸ್ಥಗಿತ.
- ಅಗ್ನಿಶಾಮಕ, ಬಿಬಿಎಂಪಿ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮರ ತೆರವುಗೊಳಿಸಿದರು.
- ಪ್ರೈಮ್ ರೋಸ್ ರಸ್ತೆಯಲ್ಲಿ ಸ್ವಿಫ್ಟ್ ಕಾರಿನ ಮೇಲೆ ಮರ ಬಿದ್ದಿದೆ.ಹೆಚ್ಚು ಮಳೆ?