

ಬೆಂಗಳೂರು: ಅತ್ಯಾಚಾರ ನಡೆದ ಸಂದರ್ಭದಲ್ಲಿ ದೂರು ನೀಡಲು ವಿಳಂಬವಾಗಿದೆ ಎಂಬ ಕಾರಣಕ್ಕೆ ಆರೋಪಿಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಅತ್ಯಾಚಾರ ಆರೋಪ ಎದುರಿಸುತ್ತಿರುವ ಧರ್ಮೇಶ್ ಪ್ರತಾಪ್ ಲೋಂಡೆ ಎಂಬುವರು ಎಂಬುವರು ಜಾಮೀನು ಕೋರಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಆರ್ .ಬಿ.ಬೂದಿಹಾಳ್ ಅವರಿದ್ದ ಧಾರವಾಢ ಪೀಠ, ದೂರು ನೀಡಲು ವಿಳಂಬವಾಯಿತು ಎಂಬ ಕಾರಣಕ್ಕೆ ಜಾಮೀನು ಮಂಜೂರು ಸಾಧ್ಯವಿಲ್ಲ ಎಂದು ಆದೇಶಿಸಿದ್ದಾರೆ.
ಆರೋಪಿ ಧರ್ಮೇಶ್ 16 ವರ್ಷದ ಬಾಲಕಿ ಮೆಲೆ ಅತ್ಯಾಚಾರವೆಸಗಿ ದ್ದ.ವಿಷಯವನ್ನು ಯಾರೊಂದಿಗೂ ಹೇಳದಂತೆ ಬೆದರಿಕೆ ಹಾಕಿದ್ದ. ಮೂರು ತಿಂಗಳ ಬಳಿಕ ಬಾಲಕಿ ಗರ್ಭಿಣಿಯಾಗಿದ್ದಳು. ಈ ಹಿನ್ನೆಲೆಯಲ್ಲಿ ಪ್ರಕರಣ ನಡೆದು ಮೂರು ತಿಂಗಳ ಬಳಿಕ ದೂರು ದಾಖಲಾಗಿತ್ತು. ದೂರು ದಾಖಲಿಸಲು ವಿಳಂಬವಾಗಿದೆ ಹೀಗಾಗಿ ಜಾಮೀನು ಮಂಜೂರು ಮಾಡಬೇಕು ಎಂದು ಅರ್ಜಿ ಸಲ್ಲಿಸಲಾಗಿತ್ತು.