

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಪ್ರಮುಖ ವಸ್ತ್ರ ಟವಲ್, ದಿಂಬು ಕವರ್, ಹಾಗೂ ಮನೆಗೆ ಬೆಡ್ ಶೀಟ್ ಖರೀದಿಸಲು 14.34 ಲಕ್ಷ ರುಪಾಯಿ ವೆಚ್ಚ ಮಾಡಲಾಗಿದೆ ಎಂಬ ಸುದ್ದಿ ಗೊತ್ತೇ ಇದೆ, ಟವಲ್, ಬೆಡ್ ಶೀಟ್ ಖರೀದಿಗಾಗಿ 14 .34 ಲಕ್ಷ ಖರ್ಚು ಮಾಡುವ ಸಿಎಂ ಬಳಿ ಸ್ಮಾರ್ಟ್‍ಫೋನ್ ಸಹ ಇಲ್ಲವಂತೆ!.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮೊಬೈಲ್ ಇಟ್ಟುಕೊಳ್ಳುವುದು ನನಗೆ ಕಿರಿಕಿರಿ ಆಗುತ್ತದೆ, ಅದ್ದರಿಂದ ನಾನು ಫೋನ್ ಹೆಚ್ಚಿಗೆ ಬಳಸುವುದಿಲ್ಲ, ನನ್ನ ಬಳಿ ಸ್ಮಾರ್ಟ್ ಫೋನ್ ಸಹ ಇಲ್ಲ ಎಂದು ಹೇಳಿದ್ದಾರೆ. ಖರೀದಿಸಿರುವ ಬೆಡ್ ಶೀಟ್, ದಿಂಬು ಕವರ್, ಟವಲ್ ಐಶಾರಾಮಿಯಾಗಿರದ ಸಾಧಾರಣವಾಗಿದ್ದರೂ ಪರವಾಗಿಲ್ಲ, ಎಲ್ಲಾ ಸೌಲಭ್ಯ, ತಂತ್ರಜ್ಞಾನವುಳ್ಳ ಅಪ್ ಡೇಟೆಡ್ ಐಶಾರಾಮಿ ಮೊಬೈಲ್ ಇಟ್ಟುಕೊಳ್ಳಬೇಕೆಂಬ ಮನಸ್ಥಿತಿ ಇರುವ ಕಾಲಮಾನದಲ್ಲಿದ್ದೇವೆ ನಾವು ಆದರೆ 14.34 ಲಕ್ಷ ರುಪಾಯಿ ವೆಚ್ಚ ಮಾಡಿ ವಸ್ತ್ರ ಟವಲ್, ದಿಂಬು ಕವರ್ ಖರೀದಿಸಿ, ಸ್ಮಾರ್ಟ್‍ಫೋನ್ ಇಟ್ಟುಕೊಳ್ಳದೇ ಇಟ್ಟುಕೊಂಡಿರುವ ಫೋನನ್ನೂ ಸಿಬ್ಬಂದಿ ಬಳಿ ಕೊಡುವ ಸಿದ್ದರಾಮಯ್ಯ ಅವರು ಮಾತ್ರ ವಿಭಿನ್ನವಾಗಿ ಕಾಣುತ್ತಾರೆ. ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳು ತಂತ್ರಜ್ಞಾನವನ್ನು ಚೆನ್ನಾಗಿ ಬಳಕೆ ಮಾಡಿಕೊಂಡು ಜನತೆಗೆ ಹತ್ತಿರವಾಗಲು ಯತ್ನಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರೂ ಸಹ ಸ್ಮಾರ್ಟ್ ಫೋನ್ ನಂತಹ ತಂತ್ರಜ್ಞಾನ ಬಳಕೆ ಮಾಡಿಕೊಂಡರೆ ಜನರಿಗೆ ಮತ್ತಷ್ಟು ಹತ್ತಿರವಾಗಗಲು ಸಹಾಯವಾಗಬಹುದು.