

ಬೆಂಗಳೂರು: ಕನಕಪುರ ತಾಲೂಕಿನ ಕೋಡಿಹಳ್ಳಿ ಹೋಬಳಿ ಹಲಸೂರು ಗ್ರಾಮದಲ್ಲಿ ಕಳೆದ 15 ದಿನಗಳಿಂದ ಕುಡಿಯಲು ನೀರು ಇಲ್ಲದೆ ಪರಿತಪ್ಪಿಸುತ್ತಿದ್ದೇವೆ ಗ್ರಾಮ ಪಂಚಾಯಿತಿಯವರು ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಹಲಸೂರು ಗ್ರಾಮಸ್ಥರು ಆರೋಪಿಸಿದರು.
ತಾಲೂಕಿನ ಹಲಸೂರು ಗ್ರಾಮದಲ್ಲಿ ಬರಗಾಲ ಪ್ರಾರಂಭವಾದ ಮೇಲೆ ಅಲ್ಪಸ್ವಲ್ಪ ನೀರು ಬರುತ್ತಿದ್ದ ಕೊಳವೆ ಬಾವಿಗಳೆಲ್ಲಾ ಬತ್ತಿಹೋಗಿ ನೀರಿಗಾಗಿ ಜನತೆ ಪರಿತಪಿಸುವಂತಾಗಿತ್ತು. ಇತ್ತಿಚೆಗೆ ಗ್ರಾಮದ ಹೊರವಲದಲ್ಲಿನ ಕೆರೆ ಬಳಿಯಲ್ಲಿ ಒಂದು ಕೊಳವೆ ಬಾವಿಯನ್ನು ತೋಡಿಸಿದ್ದು ಅದರಲ್ಲಿ ಸ್ವಲ್ಪ ಪ್ರಮಾಣದಲ್ಲಿ ನೀರು ಸಿಕ್ಕಿದೆ. ಇಡೀ ಗ್ರಾಮಕ್ಕೆ ಆ ಒಂದು ಕೊಳವೆ ಬಾವಿಯಿಂದಲೇ ನೀರು ಪೂರೈಕೆಯಾಗಬೇಕಿರುವುದರಿಂದ ಕರೆಂಟ್ ಬರುವ ಸಮಯವನ್ನು ನೋಡಿಕೊಂಡು ಗ್ರಾಮದವರೆಲ್ಲಾ ಜಾತಕ ಪಕ್ಷಿಯಂತೆ ಕಾದು ನೀರು ಹಿಡಿಯುತ್ತಿದ್ದೇವೆ.
ಗ್ರಾಮದಲ್ಲಿ 30 ಕುಟುಂಬಗಳು ನಾಗರಿಕರು ವಾಸ ಮಾಡುತ್ತಿದ್ದೇವೆ, ಎರಡು ಬೀದಿಗಳು ಇವೆ, ಜೊತೆಗೆ ಟ್ಯಾಂಕ್‍ಗಳನ್ನು ಅಳವಡಿಸಿದ್ದಾರೆ ಅಲ್ಲಿಂದ ಮಾತ್ರ ಟ್ಯಾಂಕ್‍ಗೆ ನೀರು ಬಿಡುತ್ತಿಲ್ಲ. ಕೇಳಿದರೆ ಬೋರೆವೆಲ್‍ನಮ್ಮದು ನಿಮಗೆ ನೀರು ಬಿಡುವುದಿಲ್ಲ ಏನು ಬೇಕಾದರೂ ಮಾಡಿ ಕೊಳ್ಳಿ ಎಂದು ಬೆದರಿಕೆ ಹಾಕುವ ಕೆಲಸವನ್ನು ಸದಸ್ಯರು ಮಾಡುತ್ತಿದ್ದರೆ ಎಂದು ಮಹಿಳೆಯರು
ತಿಳಿಸಿದರು. ಕೂಡಲೇ ನಮಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಗ್ರಾಮ ಪಂಚಾಯಿತಿಯವರು ಮಾಡಿಕೊಡಬೇಕು ಇಲ್ಲದಿದ್ದಾರೆ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ನೂರಕ್ಕೂ ಹೆಚ್ಚು ಗ್ರಾಮಸ್ಥರು ಉಪಸ್ಥಿತರಿದ್ದರು.