ಒಂದೇ ವೇದಿಕೆ ಹಂಚಿಕೊಂಡ, ದೇವೇಗೌಡ, ಸಿದ್ದರಾಮಯ್ಯ, ಬಿಎಸ್ ವೈ

ಐದು ದಶಕಗಳ ರಾಜಕೀಯ ಅನುಭವ ಹೊಂದಿರುವ ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರಿಗೆ ಪ್ರಧಾನಿಯಾಗುವ ಎಲ್ಲಾ ಅರ್ಹತೆಗಳಿವೆ,ಎಂದು ಮುಖ್ಯಮಂತ್ರಿ....
ಶರದ್ ಪವಾರ್ ಅಭಿನಂದನಾ ಸಮಾರಂಭ
ಶರದ್ ಪವಾರ್ ಅಭಿನಂದನಾ ಸಮಾರಂಭ
Updated on: 

ಬೆಂಗಳೂರು :ಐದು ದಶಕಗಳ ರಾಜಕೀಯ ಅನುಭವ ಹೊಂದಿರುವ ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರಿಗೆ ಪ್ರಧಾನಿಯಾಗುವ ಎಲ್ಲಾ ಅರ್ಹತೆಗಳಿವೆ,'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರದ ಮಾಜಿ ಸಚಿವ ಶರದ್ ಪವಾರ್ ಅವರಿಗೆ 75 ವರ್ಷ ತುಂಬಿದ ಅಂಗವಾಗಿ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಮೃತ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ``ಪವಾರ್, ರಾಷ್ಟ್ರದ ಎಲ್ಲ ರಾಜಕಾರಣಿಗಳ ಜತೆ
ಸ್ನೇಹದಿಂದಿದ್ದಾರೆ. ಬೇರೆ ಬೇರೆ ವಿಚಾರಧಾರೆ, ವಿಭಿನ್ನ ಅಭಿಪ್ರಾಯ ಹೊಂದಿರಬಹುದು. ಆದರೆ, ಅಜಾತಶತ್ರು ಗುಣ ಸ್ನೇಹಕ್ಕೆ ಎಂದಿಗೂ ಅಡ್ಡಿಬಂದಿಲ್ಲ,'' ಎಂದು ಹೇಳಿದರು.

``ರಾಜ್ಯದಲ್ಲಿ ಬರಗಾಲ, ಕಬ್ಬು ಬೆಳೆಗಾರರ ಸಮಸ್ಯೆ, ಸಕ್ಕರೆ ಕಾರ್ಖಾನೆಗಳ ಸಮಸ್ಯೆ ಎದುರಾದ ಸನ್ನಿವೇಶಗಳಲ್ಲಿ ನಾನೇ ವೈಯಕ್ತಿಕವಾಗಿ ಭೇಟಿಯಾಗಿ ಅವರಿಂದ ಹಲವು ಸಲಹೆಗಳನ್ನು ಪಡೆದಿದ್ದೇನೆ,'' ಎಂದು ತಮ್ಮ ಒಡನಾಟ ಹಂಚಿಕೊಂಡರು.

ಕೃಷಿಯೊಂದೇ ಅಲ್ಲ: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಮಾತನಾಡಿ, ``ಶರದ್ ಪವಾರ್ ಕೃಷಿಯೊಂದೇ ಅಲ್ಲ, ದೇಶದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಆರ್ಥಿಕವಾಗಿ ಮತ್ತಷ್ಟು ಸಹಕಾರ ನೀಡಿದ್ದರೆ, ಇನ್ನಷ್ಟು ಪ್ರಗತಿ ಸಾಧಿಸುತ್ತಿದ್ದರು,'' ಎಂದು ತಿಳಿಸಿದರು. ``ಮಾಜಿ ಪ್ರಧಾನಿಯಾಗಿದ್ದರೂ ಕಳೆದ 10 ವರ್ಷಗಳಿಂದ ಲೋಕಸಭೆಯಲ್ಲಿ ಮಾತನಾಡುವ ಅವಕಾಶವೇ ದೊರೆಯದಿರುವುದು ದೇಶದ ಪರಿಸ್ಥಿತಿಯನ್ನು ತಿಳಿಸುತ್ತದೆ,'' ಎಂದು ಅವರು ವಿಷಾಯ ವ್ಯಕ್ತಪಡಿಸಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ``ಕೃಷಿ ಕ್ಷೇತ್ರದಲ್ಲಿ ಆಳವಾಗಿ ಅಧ್ಯಯನ ನಡೆಸಿದವರಲ್ಲಿ ಪವಾರ್ ಪ್ರಮುಖರು. ಕೃಷಿ ಸಚಿವರಾಗಿದ್ದ ಸಂದರ್ಭದಲ್ಲಿ ರಾಜ್ಯದ ಕೃಷಿ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಟ್ಟ ತಕ್ಷಣವೇ ಇತ್ಯರ್ಥಪಡಿಸುತ್ತಿದ್ದರು,'' ಎಂದು ಪ್ರಶಂಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ವಿವಿಧ ಪಕ್ಷಗಳ ನಾಯಕರು ಅವರ ವ್ಯಕ್ತಿತ್ವ, ರಾಜಕಾರಣ, ಕ್ರೀಡೆ ಸೇರಿದಂತೆ ಹಲವು ಕ್ಷೇತ್ರಗಳಿಗೆ ನೀಡಿರುವ ಕೊಡುಗೆಗಳನ್ನು ಕೊಂಡಾಡಿದರು.

ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯ, ಕೇಂದ್ರದ ಮಾಜಿ ಸಚಿವ ಸಿ.ಕೆ. ಜಾಫರ್ ಷರೀಫ್ ಎಂ.ವಿ. ರಾಜಶೇಖರನ್, ಸಚಿವ ಆರ್.ವಿ. ದೇಶಪಾಂಡೆ, ಜೆಡಿಯು ಅಧ್ಯಕ್ಷ ಎಂ.ಪಿ.ನಾಡಗೌಡ ಸೇರಿದಂತೆ ಪ್ರಮುಖ ರಾಜಕೀಯ
 
ದೇಶದ ಜನತೆ ಸೂಕ್ಷ್ಮ

ಅಭಿನಂದನೆ ಸ್ವೀಕರಿಸಿದ ಶರದ್ ಪವಾರ್, ``ದೇಶದ ಜನತೆ ಸೂಕ್ಷ್ಮವಾಗಿದ್ದಾರೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಇಂದಿರಾಗಾಂಧಿ ಅವರನ್ನು ಪ್ರಧಾನಿಗಾಧಿಯಿಂದ ಇಳಿಸಿದ್ದ ಜನತೆ, ಎರಡು ವರ್ಷಗಳ ನಂತರ ಅಧಿಕಾರಕ್ಕೆ ತಂದರು. ಇದು ಇಂದಿರಾಗಾಂಧಿ ಅವರು ಮಾಡಿದ್ದ ಜನಪರ ಕೆಲಸಗಳನ್ನು ತಿಳಿಸುತ್ತದೆ. ಜನಪರ ಕಾರ್ಯಗಳನ್ನು ಕೈಗೊಂಡರೆ ಜನರು ಎಂದಿಗೂ ಕೈಬಿಡುವುದಿಲ್ಲ,'' ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com