ಯಡಿಯೂರಪ್ಪ ಯೋಚಿಸಿ ಮಾತನಾಡಲಿ: ಕೃಷ್ಣಭೈರೇಗೌಡ

ಮಾಜಿ ಸಿಎಂ ಆಗಿದ್ದ ಬಿ.ಎಸ್. ಯಡಿಯೂರಪ್ಪ ಅವರು ಯೋಚಿಸಿ ಮಾತನಾಡಬೇಕು. ಅವರು ಮನಸ್ಸು ಮಾಡಿದರೆ ಬರ ಪರಿಹಾರ ಬಂದಿದೆಯೋ, ಇಲ್ಲವೋ ಎಂಬುದರ ಬಗ್ಗೆ ಕ್ಷಣಾರ್ಧದಲ್ಲಿ ಮಾಹಿತಿ ತರಿಸಿಕೊಂಡು ನೋಡಬಹುದು ಎಂದು ಕೃಷಿ ಸಚಿವ ಕೃಷ್ಣಭೈರೇಗೌಡ ತಿರುಗೇಟು ನೀಡಿದ್ದಾರೆ...
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (ಸಂಗ್ರಹ ಚಿತ್ರ)
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (ಸಂಗ್ರಹ ಚಿತ್ರ)
Updated on: 

ಬೆಂಗಳೂರು: ಮಾಜಿ ಸಿಎಂ ಆಗಿದ್ದ ಬಿ.ಎಸ್. ಯಡಿಯೂರಪ್ಪ ಅವರು ಯೋಚಿಸಿ ಮಾತನಾಡಬೇಕು. ಅವರು ಮನಸ್ಸು ಮಾಡಿದರೆ ಬರ ಪರಿಹಾರ ಬಂದಿದೆಯೋ, ಇಲ್ಲವೋ ಎಂಬುದರ ಬಗ್ಗೆ ಕ್ಷಣಾರ್ಧದಲ್ಲಿ ಮಾಹಿತಿ ತರಿಸಿಕೊಂಡು ನೋಡಬಹುದು ಎಂದು ಕೃಷಿ ಸಚಿವ ಕೃಷ್ಣಭೈರೇಗೌಡ ತಿರುಗೇಟು ನೀಡಿದ್ದಾರೆ.

ಪ್ರತಿ ಬಾರಿಯು ಬರ ಪರಿಹಾರಕ್ಕಾಗಿ ಕೇಂದ್ರಕ್ಕೆ ಮನವಿ ಮಾಡಿದರು ಇಲ್ಲಿಯವರೆಗೆ ನಯಾಪೈಸೆ ಬಿಡುಗಡೆ ಯಾಗಿಲ್ಲ. ಬಿಜೆಪಿ ಮುಖಂಡರು ಏನೇ ಹೇಳಿಕೆ ನೀಡಿದರು ಸಹ ನಾವು ಮೌನವಹಿಸಿದ್ದು ರಾಜ್ಯದ ರೈತರ ಹಿತದೃಷ್ಟಿಯಿಂದ ಹೊರತು ಬೇರೆ ಕಾರಣಕ್ಕಾಗಿ ಅಲ್ಲ. ಆದರೆ ಸುಳ್ಳು ಹೇಳುತ್ತಿರುವಾಗ ನಾವು ಸುಮ್ಮನಿರುವುದು ಸರಿಯಲ್ಲ ಎಂಬ ಕಾರಣಕ್ಕೆ ಸ್ಪಷ್ಟಪಡಿಸುತ್ತಿದ್ದೇನೆ.

ಮೊದಲು ಯಡಿಯೂರಪ್ಪ, ಸದಾನಂದಗೌಡ ಮತ್ತು ಅನಂತಕುಮಾರ ಕೇಂದ್ರದಿಂದ ಹಣ ಬಿಡುಗಡೆ ಮಾಡಿಸಲಿ, ನಮಗಿಂತಲೂ ಹಿಂದೆ ವರದಿ ನೀಡಿದ ಬಿಡೆಪಿ ಅಧಿಕಾರದಲ್ಲಿರುವ ರಾಜ್ಯಗಳಿಗೆ ಹಣ ಬಿಡುಗಡೆ ಆಗಿರುವಾಗ ನಮಗೆ ತಾರತಮ್ಯ ಮಾಡುತ್ತಿರುವುದು ತರವಲ್ಲ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com