ಜಿಲ್ಲಾ ಸುದ್ದಿ

ಶಾಂತಿಯುತ ಮತದಾನ

ಶಾಂತಿಯುತ ಮತದಾನ
ವಿಧಾನಪರಿಷತ್ ಚುನಾವಣೆ: ಶಾಂತಿಯುತ ಮತದಾನ
Published On :

ಬೆಂಗಳೂರು: ಬೆಂಗಳೂರು ನಗರದ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‍ಗೆ ನಡೆದ ಚುನಾವಣೆಯು ಶಾಂತಿಯುತವಾಗಿ ನಡೆದಿದ್ದು, ಯಾವುದೇ ಗೊಂದಲ ಹಾಗೂ ಅನಾಹುತಕ್ಕೆ ಎಡೆಮಾಡಿ ಕೊಡದೆ ಮುಕ್ತಾಯಗೊಂಡಿದೆ.

ನಗರದ ಬಿಬಿಎಂಪಿ ಕಚೇರಿ ಹಾಗೂ ಬನಶಂಕರಿಯಲ್ಲಿರುವ ನಗರ ಜಿಪಂ ಕಚೇರಿಯಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಬಿಬಿಎಂಪಿ ಕಚೇರಿಯಲ್ಲಿ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಪಾಲಿಕೆ ಸದಸ್ಯರಿಗೆ ಮತ ಚಲಾವಣೆಗೆ ಅವಕಾಶ ಕಲ್ಪಿಸಲಾಗಿತ್ತು. ಬೆಳಗ್ಗೆ 8 ಗಂಟೆಗೆ ಆರಂಭವಾದ ಮತದಾನವು ನಿಧಾನವಾಗಿ ಸಾಗಿತು. ಮೊದಲಿಗೆ ಬಿಜೆಪಿಯ ಯಲಹಂಕ ಶಾಸಕ ವಿಶ್ವನಾಥ್, ಬಿಬಿಎಂಪಿಯ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ, ಆಡಳಿತ ಪಕ್ಷದ ನಾಯಕ ಸತ್ಯನಾರಾಯಣ, ವಿಧಾನ ಪರಿಷತ್‍ನ ಸರ್ಕಾರಿ ಸಚೇತಕ ಆರ್.ವಿ. ವೆಂಕಟೇಶ್ ಬಿರುಸಿನಿಂದ ಮತದಾನ ಮಾಡಿದರು.

ಬಳಿಕ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಶಾಸಕ ಎಸ್. ಸುರೇಶ್ ಕುಮಾರ್, ರಾಜ್ಯಸಭಾ ಸದಸ್ಯರಾದ ರಾಜೀವ್ ಚಂದ್ರಶೇಖರ್, ಬಿ.ಕೆ. ಹರಿಪ್ರಸಾದ್ ಮತ ಚಲಾಯಿಸಿದರು. ನಂತರ ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಜೆ. ಜಾರ್ಜ್, ದಿನೇಶ್ ಗುಂಡೂರಾವ್, ರೋಷನ್ ಬೇಗ್, ಶಾಸಕರಾದ ಆರ್.ವಿ. ದೇವರಾಜ್, ಅರವಿಂದ ಲಿಂಬಾವಳಿ, ಕೆ.ಎನ್. ಗೋಪಾಲಯ್ಯ, ಪ್ರಿಯ ಕೃಷ್ಣ, ಸುರೇಶ್ ಕುಮಾರ್, ಆರ್. ಅಶೋಕ್, ವಿ. ಸೋಮಣ್ಣ, ವಿಜಯï ಕುಮಾರ್, ರವಿ ಸುಬ್ರಮಣ್ಯ, ಎಂ. ಕೃಷ್ಣಪ್ಪ ಮತದಾನ ಮಾಡಿದರು.

ಹೆಸರು ನಾಪತ್ತೆ: ಆಕ್ರೋಶ


ಪರಿಷತ್ ಚುನಾವಣೆಯಲ್ಲಿ ಮತ ಚಲಾಯಿಸಲು ನಗರ ಜಿಲ್ಲಾ ಪಂಚಾಯತ್ ಮತಗಟ್ಟೆಗೆ ಆಗಮಿಸಿದ್ದ ಶಾಸಕ ರಾಮಚಂದ್ರೇಗೌಡರು ಮತಪಟ್ಟಿಯಲ್ಲಿ ತಮ್ಮ ಹೆಸರಿಲ್ಲದ್ದನ್ನು ಕಂಡು ವ್ಯಗ್ರಗೊಂಡರು. ಮತಗಟ್ಟೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಅವರು, ಬಿಬಿಎಂಪಿ ಕಚೇರಿಯ ಮತಗಟ್ಟೆಯಲ್ಲೂ ನನ್ನ ಹೆಸರಿಲ್ಲ. ಈ ರೀತಿ ಚುನಾವಣೆ ನಡೆಸುವುದು ಸರಿಯಲ್ಲ ಎಂದು ಕಿಡಿಕಾರಿ, ಚುನಾವಣೆ ರದ್ದು ಮಾಡಬೇಕು ಎಂದು ಆಗ್ರಹಿಸಿದರು. ಯಾವ ಮತಗಟ್ಟೆಯಲ್ಲಿ ತಮ್ಮ ಹೆಸರಿದೆ ಎಂಬುದರಲ್ಲಿಯೇ ಕಾಲ ದೂಡಬೇಕಾದ ಪರಿಸ್ಥಿತಿ ಅವರಿಗೆ ಒದಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.