ಕೊಲೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ

ಮಹಾಲಕ್ಷ್ಮಿಬಡಾವಣೆ ಕಮಲಮ್ಮನ ಗುಂಡಿ ಆಟದ ಮೈದಾನದಲ್ಲಿ ಹೇಮಂತ ಎಂಬಾತನ ಕೊಲೆ ಪ್ರಕರಣ ಸಂಬಂಧ ನಾಲ್ವರು...
ಕೊಲೆ ಆರೋಪಿಗಳ ಬಂಧನ (ಸಾಂದರ್ಭಿಕ ಚಿತ್ರ)
ಕೊಲೆ ಆರೋಪಿಗಳ ಬಂಧನ (ಸಾಂದರ್ಭಿಕ ಚಿತ್ರ)
Updated on: 

ಬೆಂಗಳೂರು: ಮಹಾಲಕ್ಷ್ಮಿಬಡಾವಣೆ ಕಮಲಮ್ಮನ ಗುಂಡಿ ಆಟದ ಮೈದಾನದಲ್ಲಿ ಹೇಮಂತ ಎಂಬಾತನ ಕೊಲೆ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಮಹಾಲಕ್ಷ್ಮಿಬಡಾವಣೆ ಪೊಲೀಸರು ಬಂಧಿಸಿದ್ದಾರೆ.

ಕೊಟ್ಟಿಗೆ ಪಾಳ್ಯ ನಿವಾಸಿ ಕಾರು ಚಾಲಕ ಕೃಷ್ಣಮೂರ್ತಿ(35), ಪೀಣ್ಯ ಚೌಡೇಶ್ವರಿ ನಗರದ ಮಹೇಶ್(23), ತುಮಕೂರಿನ ಗುಬ್ಬಿಯ ರುದ್ರೇಶ್(42) ಹಾಗೂ ಕಾಮಾ ಕ್ಷಿಪಾಳ್ಯದ ನಾಗರಾಜು(40) ಬಂಧಿತರು. ಬಂಧಿತ ಆರೋಪಿ ಕೃಷ್ಣಮೂರ್ತಿಯ ಪತ್ನಿಯೊಂದಿಗೆ ಕೊಲೆಯಾದ ಹೇಮಂತ್ ಅಕ್ರಮ ಸಂಬಂಧ ಇರಿಸಿಕೊಂಡಿದ್ದ. ಅಲ್ಲದೇ, ಹೇಮಂತ್ ಕಾರು ಕೊಳ್ಳಲು ಕೃಷ್ಣಮೂರ್ತಿ ಪತ್ನಿ ರು.1 ಲಕ್ಷ ಸಾಲಕ್ಕೆ ಭದ್ರತಾ ಸಹಿ ಮಾಡಿದ್ದಳು.

ಈ ವಿಷಯ ತಿಳಿದು ಕೋಪಗೊಂಡಿದ್ದ ಕೃಷ್ಣಮೂರ್ತಿ, ಪರಿಚಿತರಾದ ಮೂವರನ್ನು ಸೇರಿಸಿಕೊಂಡು ಕೊಲೆಗೆ ಸಂಚು ರೂಪಿಸಿದ್ದ. ಫೆ..22ರಂದು ಮಲ್ಲತ್ತಹಳ್ಳಿಯ ಆತನ
ಮನೆಯಿಂದ ಕೆಲಸವಿದೆ ಎಂದು ಟಿಟಿ ವಾಹನದಲ್ಲಿ ಕರೆದುಕೊಂಡು ಹೋಗಿ ಕಬ್ಬಿಣದ ರಾಡ್‍ನಿಂದ ಹೊಡೆದು ಕೊಲೆ ಮಾಡಿ ಶವವನ್ನು ಕಮಲಮ್ಮನ ಗುಂಡಿ ಆಟದ ಮೈದಾನದ ಪಕ್ಕದ ಕಸದ ರಾಶಿಯ ಬಳಿ ಬಿಸಾಡಿ ನಂತರ ಮುಖದ ಗುರುತು ಸಿಗದಂತೆ ಮೇಲೆ ಬಟ್ಟೆ ಹಾಕಿ, ಕಲ್ಲು ಎತ್ತಿ ಹಾಕಿ ಪರಾರಿಯಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com