

ಬೆಂಗಳೂರು: ನಂದಿನಿ ಉತ್ಪನ್ನಗಳನ್ನು ಇನ್ನು ಆನ್‍ಲೈನ್‍ನಲ್ಲಿ ಖರೀದಿಸ ಬಹುದು. ಇದಕ್ಕಾಗಿ ಕೆಎಂಎಫ್ ಮೊದಲ ಬಾರಿಗೆ bigbasket.com ಸಹಯೋಗದೊಂದಿಗೆ ಮೊಬೈಲ್ ಆ್ಯಪ್ ರೂಪಿಸಿದೆ. ಆನ್‍ಲೈನ್ ಗ್ರಾಹಕರು ಆಂಡ್ರಾ ಯ್ಡ್ ಆಧಾರಿತ ಮೊಬೈಲ್‍ನಲ್ಲಿ ಪ್ಲೇಸ್ಟೋರ್‍ನಿಂದ ಆ್ಯಪ್ ಅನ್ನು ಡೌನ್‍ಲೋಡ್ ಮಾಡಬಹುದು. ಗ್ರಾಹಕರಿಗೆ ನಂದಿನಿ ಉತ್ಪನಗಳು ಮತ್ತಷ್ಟು ಹತ್ತಿರವಾಗುವ ದೃಷ್ಟಿಯಿಂದ ಈ ನೂತನ ತಂತ್ರಜ್ಞಾನ ಜಾರಿಗೆ ತರಲಾಗಿದೆ. ಈ ಆ್ಯಪ್‍ನಲ್ಲಿ ನಿತ್ಯ ಬಳಸುವ ನಂದಿನಿ ಪ್ಯಾಕೆಟ್ ಹಾಲು ಹೊರತುಪಡಿಸಿ ಉಳಿದ ಎಲ್ಲಾ ನಂದಿನಿ ಉತ್ಪನ್ನ ಖರೀದಿಸಬಹುದು. ಬೆಳಗ್ಗೆ ಆನ್‍ಲೈನ್‍ನಲ್ಲಿ ನೋಂದಾಯಿಸಿದರೆ ಸಂಜೆ ವೇಳೆಗೆ ಗ್ರಾಹಕರಿಗೆ ಸಿಗಲಿವೆ. ಇದಕ್ಕಾಗಿ ಗ್ರಾಹಕರು ಯಾವುದೇ ತೆರಿಗೆ ನೀಡುವಂತಿಲ್ಲ. ಮಾರುಕಟ್ಟೆ ಬೆಲೆ (ಎಂಆರ್‍ಪಿ) ನೀಡಿದರೆ ಸಾಕು. ಕರ್ನಾಟಕ ಹಾಲು ಮಹಾಮಂಡಳಿ ನಿಯಮಿತ ಸೋಮವಾರ ಶಂಕರಪುರದ ಮಹಿಳಾ ಸೇವಾ ಸಮಾಜ ಉನ್ನತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ `ವಿಶ್ವ ಹಾಲು ದಿನಾಚರಣೆ' ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆ್ಯಪ್ ಬಿಡುಗಡೆ ಮಾಡಿದರು.
80 ಲಕ್ಷ ಲೀಟರ್ ಸಂಗ್ರಹ ಗುರಿ: ಕೆಎಂಫ್‍ನ ವ್ಯವಸ್ಥಾಪಕ ನಿರ್ದೇಶಕ ಎಸ್.ಎನ್
.ಜಯರಾಮ್ ಮಾತನಾಡಿ, ರಾಜ್ಯದಲ್ಲಿ ಕೆಎಂ ಎಫ್ ಪ್ರಸುತ್ತ 68 ಲಕ್ಷ ಲೀಟರ್ ಹಾಲು ಸಂಗ್ರಹ ಮಾಡುತ್ತಿದೆ. ಕೆಎಂಎಫ್ ರೈತರಿಗೆ ತೊಂದರೆ ಯಾಗದಂತೆ 80 ಲಕ್ಷ ಲೀಟರ್ ಹಾಲು
ಸಂಗ್ರಹಿಸುವ ಗುರಿ ಹೊಂದಿದೆ. ಇದಕ್ಕೆ ಡೈರಿ ಸಂಸ್ಕರಣಾ ಘಟಕ, ಶೀತ ಸಂಸ್ಕರಣಾ
ಘಟಕದಂತಹ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರ ರು.2 ಸಾವಿರ
ಕೋಟಿ ನೆರವು ನೀಡಿದರೆ ಸಾಧ್ಯವಾಗುತ್ತದೆ. ಸರ್ಕಾರದ ಕ್ಷೀರಭಾಗ್ಯ ಯೋಜನೆಯಿಂದಾಗಿ
16,700 ಮಕ್ಕಳು ಅಪೌಷ್ಟಿಕತೆಯಿಂದ ಮುಕ್ತ ರಾಗಿದ್ದಾರೆ ಎಂದರು. ಪಶು ಸಂಗೋಪನೆ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ನಂದಿನಿ ಬ್ಯಾಂಡ್‍ನ 61ನೇ ಉತ್ಪನ್ನ `ನಂದಿನಿ ಶ್ರೀಖಂಡ್ ಮ್ಯಾಂಗೋ' ಬಿಡುಗಡೆ ಮಾಡಿದರು. ಸಚಿವ ಎಚ್.ಎಸ್.ಮಹದೇವ ಪ್ರಸಾದ್, ಕೆಎಂಎಫ್ ಅಧ್ಯಕ್ಷ ಪಿ.ನಾಗರಾಜು, ಕ್ರಿಕೆಟ್ ಆಟಗಾರ ಸುನಿಲ್ ಜೋಶಿ, ಜಯದೇವ ಹೃದ್ರೋಗ ಸಂಸ್ಥೆಯ ಮಕ್ಕಳ ಹೃದ್ರೋಗ ತಜ್ಞ ಫ್ರೋ.ಐ.ಬಿ.ವಿಜಯಲಕ್ಷ್ಮಿ ಇದ್ದರು. ವಿಶ್ವ ಹಾಲು ದಿನದ ಅಂಗವಾಗಿ ಕೆಎಂಎಫ್
ವತಿಯಿಂದ ಕಿದ್ವಾಯ್ ಆಸ್ಪತ್ರೆಯ 3 ಸಾವಿರ ರೋಗಿಗಳಿಗೆ ಉಚಿತವಾಗಿ ಹಾಲು ವಿತರಣೆ
ಮಾಡಲಾಯಿತು.