ಭವಾರಿಯಾ ತಂಡದ ಬಂಧನಕ್ಕೆ ಕಾರ್ಯಾಚರಣೆ

ಸರಗಳವು ಮತ್ತು ಮನೆಗಳವು ಪ್ರಕರಣಗಳಲ್ಲಿ ಬೇಕಿರುವ ಉತ್ತರಪ್ರದೇಶ ಮೂಲದ ಭವಾರಿಯಾ ತಂಡದ ಮುಖ್ಯಸ್ಥರಾದ ರಾಕೇಶ್ ಮತ್ತು ಛತ್ರಸೇನ್ ಬಂಧನಕ್ಕೆ 3 ವಿಶೇಷ ತಂಡ ರಚಿಸಲಾಗಿದೆ ಎಂದು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಪಿ. ಹರಿಶೇಖರನ್ ತಿಳಿಸಿದರು...
ಬೆಂಗಳೂರು ಪೊಲೀಸರು
ಬೆಂಗಳೂರು ಪೊಲೀಸರು
Updated on: 

ಬೆಂಗಳೂರು: ಸರಗಳವು ಮತ್ತು ಮನೆಗಳವು ಪ್ರಕರಣಗಳಲ್ಲಿ ಬೇಕಿರುವ ಉತ್ತರಪ್ರದೇಶ ಮೂಲದ ಭವಾರಿಯಾ ತಂಡದ ಮುಖ್ಯಸ್ಥರಾದ ರಾಕೇಶ್ ಮತ್ತು ಛತ್ರಸೇನ್ ಬಂಧನಕ್ಕೆ 3 ವಿಶೇಷ ತಂಡ ರಚಿಸಲಾಗಿದೆ ಎಂದು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಪಿ. ಹರಿಶೇಖರನ್ ತಿಳಿಸಿದರು.

ರಾಕೇಶ್ ಮತ್ತು ಛತ್ರಸೇನ್ ನ ವಿರುದ್ಧ ನ್ಯಾಯಾಲಯದಿಂದ 6 ಬಾರಿ ಬಂಧನ ವಾರೆಂಟ್ ಜಾರಿಯಾಗಿದೆ. ಹಳೇ ಏರ್ ಪೋರ್ಟ್ ಉಪ ವಿಭಾಗ ಎಸಿಪಿ ದುಗ್ಗಪ್ಪ ನೇತೃತ್ವದಲ್ಲಿ 3 ವಿಶೇಷ ತಂಡ ರಚಿಸಲಾಗಿದೆ. ಆರೋಪಿಗಳು ಉತ್ತರಪ್ರದೇಶದಿಂದ ಪರಾರಿಯಾಗಿ ದೆಹಲಿಯಲ್ಲಿ ತಲೆಮರೆಸಿ ಕೊಂಡಿರುವ ಮಾಹಿತಿ ಸಿಕ್ಕಿದೆ. ಹೀಗಾಗಿ ವಿಶೇಷ ತಂಡ ಶೀಘ್ರದಲ್ಲೇ ದೆಹಲಿಗೆ ಪ್ರಯಾಣ ಬೆಳೆಸಲಿದೆ. ತಮಿಳುನಾಡಿನ ಸೇಲಂನಲ್ಲಿ ಕೆಲ ದಿನಗಳಿಂದ ಸರಗಳ್ಳತನ ಪ್ರಕರಣಗಳು ವರದಿಯಾಗುತ್ತಿವೆ. ಬೆಂಗಳೂರಲ್ಲಿ ಕೃತ್ಯ ಎಸಗಿದವರೇ ಅಲ್ಲಿಯೂ ಮಾಡಿರುವ ಶಂಕೆ ಇದೆ. ಹೀಗಾಗಿ ತಮಿಳುನಾಡು ಪೊಲೀಸರ ಜತೆ ನಿರಂತರ ಸಂಪರ್ಕದಲ್ಲಿದ್ದು, ಕಳ್ಳರ ಬಂಧನಕ್ಕೆ ಜಂಟಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಬೆಂಗಳೂರು ಪೊಲೀಸರು ನೀಡಿದ ಮಾಹಿತಿ ಮೇರೆಗೆ 8 ಆರೋಪಿಗಳನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ ಎಂದು ಮಾಹಿತಿ ನೀಡಿದರು. ಹಸಿರು, ನೀಲಿ ಮತ್ತು ಕೆಂಪು ಮತ್ತು ಹಳದಿ ಬಣ್ಣ: ಪೂರ್ವ ವಿಭಾಗದಲ್ಲಿರುವ ಹಳೇ ಆರೋಪಿಗಳು, ತಲೆಮರೆಸಿಕೊಂಡಿರುವವರು, ಜೈಲಿನಲ್ಲಿರುವ ಮತ್ತು ಬಿಡುಗಡೆ ಆಗಿರುವ ಆರೋಪಿ ಗಳ ಪತ್ತೆಹಚ್ಚಿ ಅವರ ಸದ್ಯದ ಮಾಹಿತಿ
ಸಂಗ್ರಹಿಸಲು ಠಾಣಾಧಿಕಾರಿಗಳಿಗೆ ಆದೇಶಿಸಲಾಗಿದೆ. ಅದಕ್ಕಾಗಿ ಹಸಿರು (ಹಾಜರಿರುವವರು), ಕೆಂಪು (ತಲೆಮರೆಸಿಕೊಂಡವರು) ಮತ್ತು ನೀಲಿ (ಜೈಲು) ಹಳದಿ (ವಾರೆಂಟ್) ಬಣ್ಣದಲ್ಲಿ ಆರೋಪಿಗಳ ಗುರುತಿಸಿ 732 ಮಂದಿಮೇಲೆ ನಿಗಾ ಇರಿಸಲಾಗಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com