ವಜ್ರ ವಂಚನೆ: ಆರೋಪಿ ಬಂಧನ

ವಜ್ರದ ಹರಳು ಖರೀದಿಸಿ ಅದರ ಹಣ ಪಾವತಿಸದೇ ವಂಚನೆ ಎಸಗಿದ್ದ ವ್ಯಕ್ತಿಯನ್ನು ಬಂಧಿಸಿರುವ ಮಲ್ಲೇಶ್ವರ ಪೊಲೀಸರು ರು.15 ಲಕ್ಷ ಮೌಲ್ಯದ 56 ವಜ್ರದ ಹರಳುಗಳನ್ನು ವಶಪಡಿಸಿಕೊಂಡಿದ್ದಾರೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಬೆಂಗಳೂರು; ವಜ್ರದ ಹರಳು ಖರೀದಿಸಿ ಅದರ ಹಣ ಪಾವತಿಸದೇ ವಂಚನೆ ಎಸಗಿದ್ದ ವ್ಯಕ್ತಿಯನ್ನು ಬಂಧಿಸಿರುವ ಮಲ್ಲೇಶ್ವರ ಪೊಲೀಸರು ರು.15 ಲಕ್ಷ ಮೌಲ್ಯದ 56 ವಜ್ರದ ಹರಳುಗಳನ್ನು ವಶಪಡಿಸಿಕೊಂಡಿದ್ದಾರೆ.

ಕೋರಮಂಗಲ ಕೆ.ಆರ್.ಗಾರ್ಡನ್ ನಿವಾಸಿ ಅಬ್ದುಲ್ ಜಬ್ಬಾರ್ (29) ಬಂಧಿತ. ಏ.26 ರಂದು ದೂರುದಾರ ವ್ಯಾಪಾರಿ ರಾಮ್ ಗೌಡ ಎಂಬಾತನ ಬಳಿ ವಜ್ರದ ಹರಳುಗಳಿದ್ದವು. ಅವುಗಳನ್ನು ಮಾರಾಟ ಮಾಡಿಸಿಕೊಡುವಂತೆ ಆತ ಮನ್ಸೂರ್ ಬಾಶಾ ಅವರನ್ನು ಕೇಳಿಕೊಂಡಿದ್ದ. ಅದರಂತೆ ಮನ್ಸೂರ್ ಬಾಷಾ ಮಧ್ಯವರ್ತಿಗಳ ಮುಖಾಂತರ ಅಬ್ದುಲ್ ಜಬ್ಬಾರ್, ಹುಸೇನ್, ಫಾರೂಕ್ ಎಂಬುವರು ಭೇಟಿಯಾಗಿ ವಜ್ರ ಮಾರಾಟ ಮಾತುಕತೆ ನಡೆಸಿದ್ದ.

ಆರೋಪಿಗಳು ವಜ್ರಗಳನ್ನು ಖರೀದಿಸುವುದಾಗಿ ಹೇಳಿ ಮಲ್ಲೇಶ್ವರದ ಸಾಯಿಕೃಪಾ ಕಾಂಪ್ಲೆಕ್ಸ್ ಬಳಿ ಕರೆಸಿಕೊಂಡು ಅವುಗಳನ್ನು ಪರೀಕ್ಷಿಸುವುದಾಗಿ ತೆಗೆದುಕೊಂಡು ಹೋಗಿದ್ದರು. ಅಲ್ಲದೆ ವಜ್ರಗಳನ್ನು ನೀಡಿದೆ ಮೋಸ ಮಾಡಿದ್ದರು. ಮಲ್ಲೇಶ್ವರ ಪೊಲೀಸರು ಅಬ್ದುಲ್ ಜಬ್ಬಾರ್ ನನ್ನು ಬಂಧಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com