ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿರುವ ಈ ವೃದ್ಧೆಗೆ 102 ವರ್ಷ!

ಕೊಳ್ಳೇಗಾಲ: ಗ್ರಾಮ ಪಂಚಾಯಿತಿ ಚುನಾವಣೆಗೆ ಎಷ್ಟು ವರ್ಷದವರು ಸ್ಪರ್ಧಿಸಬಹುದು ಸುಮಾರು 50 60 ಹೆಚ್ಚೆಂದರೂ 70 ದಾಟಿರುವುದಿಲ್ಲ. ಆದರೆ 102 ವರ್ಷದ ವೃದ್ಧೆಯೊಬ್ಬರು ಗ್ರಾಮಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿ ಅಚ್ಚರಿ ಮೂಡಿಸಿದ್ದಾರೆ.
ಶತಾಯುಷಿಯಾದರೂ ಚುನಾವಣೆಗೆ ಸ್ಪರ್ಧಿಸುವ ಮೂಲಕ ಯುವಕರಿಗೆ ಮಾದರಿಯಾಗಿರುವ ಈ ವೃದ್ಧೆ ಗೌರಮ್ಮ ಕೊಳ್ಳೆಗಾಲದ ಹನೂರು ಕ್ಷೇತ್ರದ ದೊಡ್ಡ ಆಲತ್ತೂರು ಗ್ರಾಮದವರು. ಇದೇ ಗ್ರಾಮಪಂಚಾಯಿತಿ ಚುನಾವಣೆಗೆ ಗೌರಮ್ಮ ಸ್ಪರ್ಧಿಸಿದ್ದು, ಸಾಮಾನ್ಯ ಮಹಿಳಾ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ.
ಈ ತಿಂಗಳು ಚುನಾವಣಾ ಆಯೋಗ ನೀಡಿರುವ ಗುರುತಿನ ಚೀಟಿ ಪ್ರಕಾರ ಗೌರಮ್ಮ ಅವರಿಗೆ 102 ವರ್ಷ! ಅನಕ್ಷರಸ್ಥೆಯಾಗಿರುವ ಶತಾಯುಷಿ ಅಜ್ಜಿ, ಗ್ರಾಮದಲ್ಲಿ ಅತ್ಯಂತ ಸಿರಿವಂತರಾಗಿದ್ದ ದಿ.ಅವಲನಾಯ್ಕ ಅವರ ಪತ್ನಿ. ಈ ಗ್ರಾಮವನ್ನು ಅವಳನಾಯ್ಕನಹಳ್ಳಿ ಎಂಬು ಕರೆಯುತ್ತಿದ್ದದ್ದು ವಿಶೇಷವಾಗಿದೆ. ನಂತರ ಈ ಗ್ರಾಮಕ್ಕೆ ದೊಡ್ಡ ಆಲತ್ತೂರು ಎಂದು ನಾಮಕರಣ ಮಾಡಲಾಗಿದೆ.
ಅವಲನಾಯ್ಕ ಅವರ ಸಹೋದರ ಹಾಲಯ್ಯ ಸಹ ಈ ಹಿಂದೆ ಮಂಡಲ ಪಂಚಾಯ್ತಿ ಅಧ್ಯಕ್ಷರಾಗಿದ್ದರು. ಈ ಹಿನ್ನೆಲೆಯಲ್ಲಿ ಗೌರಮ್ಮ ಅವರಿಗೆ ರಾಜಕೀಯ ಹೊಸತಲ್ಲ ಎಂದು ಹೇಳಬಹುದು. ಗ್ರಾಮಪಂಚಾಯ್ತಿ ಚುನಾವಣೆಗೆ ಸ್ಪರ್ಧಿಸಿರುವ ವೃದ್ಧೆಗೆ 6 ಹೆಣ್ಣು ಮತ್ತು ಒಬ್ಬ ಗಂಡು ಸೇರಿದಂತೆ 7 ಮಕ್ಕಳು ಈಗ ನಾಲ್ಕು ಹೆಣ್ಣು ಮಕ್ಕಳು ಮಾತ್ರ ಇದ್ದಾರೆ. ಮೈಸೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಮೊಮ್ಮಗ ಮಂಜು, ತಿಂಗಳಿಗೊಮ್ಮೆ ಅಜ್ಜಿಯನ್ನು ವಿಚಾರಿಸಿಕೊಂಡು ಹೋಗುತ್ತಾನೆ.
ಚುನಾವಣೆಗೆ ಸ್ಪರ್ಧಿಸಿರುವ ಬಗ್ಗೆ ಮಾತನಾಡಿರುವ ಗೌರಮ್ಮ, ಗ್ರಾಮದಲ್ಲಿರುವ ಕೆಲವರು ಒತ್ತಾಯ ಮಾಡಿದ್ದರ ಹಿನ್ನೆಲೆಯಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದೇನೆ, ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


