ಮಳೆ ಅಬ್ಬರ ತತ್ತರ

ನಗರದಲ್ಲಿ ಮಳೆ ಮಂಗಳವಾರವೂ ಮುಂದುವರಿದಿದ್ದು ಹಲವು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಮತ್ತಷ್ಟು ಹಾನಿಯಾಗಿದೆ...
ನಗರದಲ್ಲಿ ಮಂಗಳವಾರ ಸುರಿದ ಮಳೆಯಲ್ಲಿ ಕವರ್ ಹಿಡಿದು ದಾರಿಯಲ್ಲಿ ನಡೆಯುತ್ತಿರುವ ಪಾದಚಾರಿ
ನಗರದಲ್ಲಿ ಮಂಗಳವಾರ ಸುರಿದ ಮಳೆಯಲ್ಲಿ ಕವರ್ ಹಿಡಿದು ದಾರಿಯಲ್ಲಿ ನಡೆಯುತ್ತಿರುವ ಪಾದಚಾರಿ
Updated on: 

ಬೆಂಗಳೂರು: ನಗರದಲ್ಲಿ ಮಳೆ ಮಂಗಳವಾರವೂ ಮುಂದುವರಿದಿದ್ದು ಹಲವು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಮತ್ತಷ್ಟು ಹಾನಿಯಾಗಿದೆ.
.
ಕೋರಮಂಗಲ 6ನೇ ಬ್ಲಾಕ್‍ನ 7ನೇ ಅಡ್ಡರಸ್ತೆಯಲ್ಲಿ ಮರವೊಂದಕ್ಕೆ ಹಾನಿಯಾಗಿದ್ದು, ಕೊಂಬೆಗಳು ನೆಲಕ್ಕುರುಳಿವೆ. ಜಕ್ಕೂರು ವಾರ್ಡ್ ನ ಜಿಕೆವಿಕೆ ಲೇಔಟ್ ನಲ್ಲಿ ರಸ್ತೆ ಬದಿಯಲ್ಲಿ ನಿಂತಿದ್ದ ಶಾಲಾ ವಾಹನ ನೀರಿನಲ್ಲಿ ಸಿಕ್ಕಿಹಾಕಿಕೊಂಡಿತ್ತು. ತಗ್ಗು ಪ್ರದೇಶವಾಗಿರುವುದರಿಂದ ನೀರು ನುಗ್ಗಿದ್ದು, ಶಾಲಾ ವಾಹನ ಪಾರ್ಕಿಂಗ್ ನಲ್ಲಿದ್ದರಿಂದ ಯಾವುದೇ ಹಾನಿಯಾಗಿಲ್ಲ.

 ಕೊಡಿಗೇಹಳ್ಳಿಯ ಸೊನ್ನೇಗೌಡ ಕಾಂಪ್ಲೆಕ್ಸ್‍ನ ಚಿಕನ್ ಸೆಂಟರ್ ಬಳಿ ನೀರು ನುಗ್ಗಿ ಮನೆಗಳಿಗೆ ಹಾನಿಯಾಗಿದೆ. ಪ್ರಕೃತಿನಗರದ ಕೋಗಿಲು ಮುಖ್ಯರಸ್ತೆಯಲ್ಲಿ ಬಸ್ ತಂಗುದಾಣದ ಬಳಿ ನೀರು ನುಗ್ಗಿದ್ದು, ಬಿಬಿಎಂಪಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಸಮಸ್ಯೆ ಪರಿಹರಿಸಿದ್ದಾರೆ. ಸಿ.ವಿ. ರಾಮನ್ ನಗರದ ಕೃಷ್ಣಪ್ಪ ಗಾರ್ಡನ್ ಬಳಿ ಮಳೆನೀರು ಕಾಲುವೆ ಒಡೆದು ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ಹಾನಿಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com