ಪ್ರತ್ಯೇಕ ಅಪಘಾತ ಇಬ್ಬರ ಸಾವು

ವಿಜಯನಗರ ಹಾಗೂ ಉಪ್ಪಾರಪೇಟೆಯಲ್ಲಿ ಸಂಭವಿಸಿದ 2 ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಹೈ ಕೋರ್ಟ್ ಕ್ಲರ್ಕ್ ಸೇರಿ ಇಬ್ಬರು ಮೃತಪಟ್ಟಿದ್ದಾರೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)
Updated on: 

ಬೆಂಗಳೂರು: ವಿಜಯನಗರ ಹಾಗೂ ಉಪ್ಪಾರಪೇಟೆಯಲ್ಲಿ ಸಂಭವಿಸಿದ 2 ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಹೈ ಕೋರ್ಟ್ ಕ್ಲರ್ಕ್ ಸೇರಿ ಇಬ್ಬರು ಮೃತಪಟ್ಟಿದ್ದಾರೆ.

ಕುರಬರಹಳ್ಳಿ ರಸ್ತೆಯ ವೇಗವಾಗಿ ತೆರಳುತ್ತಿದ್ದ ಹೈ ಕೋರ್ಟ್ ಉದ್ಯೋಗಿ ಶಶಿಧರ್, ರಸ್ತೆ ಉಬ್ಬು ಗಮನಿಸದೇ ವಾಹನ ಹಾರಿಸಿದ್ದರಿಂದ ನಿಯಂತ್ರಣ ಕಳೆದುಕೊಂಡು, ಕೆಳಗೆ ಬಿದ್ದು ಮೃತ ಪಟ್ಟಿದ್ದಾರೆ. ಪ್ಯಾಲೆಸ್ ಗುಟ್ಟಹಳ್ಳಿ ನಿವಾಸಿಯಾಗಿರುವ ಶಶಿಧರ್, ಕುರುಬರಹಳ್ಳಿಯಿಂದ ಶಂಕರ ಮಠದ ಕಡೆ ತೆರಳುತ್ತಿದ್ದರು. ತಡರಾತ್ರಿ 12.30ರ ಸುಮಾರಿಗೆ ಈ ದುರ್ಘಟನೆ ನಡೆದಿದೆ.

ಪಾದಚಾರಿ ಸಾವು:


ನಗರದ ಆನಂದರಾವ್ ವೃತ್ತದಲ್ಲಿ ರಸ್ತೆ ದಾಟುತ್ತಿದ್ದಾಗ ನ್ಯಾಷನಲ್ಸ್ ಟ್ರಾವೆಲ್ಸ್ ಬಸ್ ಡಿಕ್ಕಿ ಹೊಡೆದು ಪಾದಚಾರಿಯೊಬ್ಬರು ಮೃತಪಟ್ಟಿದ್ದಾರೆ. ಆಂಧ್ರ ಪ್ರದೇಶದ ವಿಶಾಖಪಟ್ಟಣದ ರಾಜು (40) ಮೃತ ವ್ಯಕ್ತಿ. ಇವರು ಶನಿವಾರ ರಾತ್ರಿ. 11.30ರಲ್ಲಿ ಆನಂದರಾವ್ ವೃತ್ತದ ಮೇಲ್ಸೇತುವೆ ಅಪ್ ರ್ಯಾಂಪ್ ಬಳಿ ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಬಸ್ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com