2 ಕಿಲೋ ಚಿನ್ನ ವಶ

ದುಬೈನಿಂದ ಮಂಗಳೂರಿಗೆ ವಿಮಾನದಲ್ಲಿ ಆಗಮಿಸಿದ್ದ ಪ್ರಯಾಣಿಕ ನೋರ್ವ ಇಸ್ತ್ರಿ ಪೆಟ್ಟಿಗೆಯಲ್ಲಿ ಅಡಗಿಸಿ ಇರಿಸಿದ್ದ ಸುಮಾರು ರು.53 ಲಕ್ಷ ಮೌಲ್ಯದ 2 ಕಿಲೋ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಗುರುವಾರ ವಶಪಡಿಸಿಕೊಂಡಿದ್ದಾರೆ...
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಸಂಗ್ರಹ ಚಿತ್ರ)
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಸಂಗ್ರಹ ಚಿತ್ರ)

ಮಂಗಳೂರು: ದುಬೈನಿಂದ ಮಂಗಳೂರಿಗೆ ವಿಮಾನದಲ್ಲಿ ಆಗಮಿಸಿದ್ದ ಪ್ರಯಾಣಿಕ ನೋರ್ವ ಇಸ್ತ್ರಿ ಪೆಟ್ಟಿಗೆಯಲ್ಲಿ ಅಡಗಿಸಿ ಇರಿಸಿದ್ದ ಸುಮಾರು ರು.53 ಲಕ್ಷ ಮೌಲ್ಯದ 2 ಕಿಲೋ ಚಿನ್ನವನ್ನು  ಕಸ್ಟಮ್ಸ್ ಅಧಿಕಾರಿಗಳು ಗುರುವಾರ ವಶಪಡಿಸಿಕೊಂಡಿದ್ದಾರೆ.

ಪ್ರಯಾಣಿಕ ಸಂಶಯಾಸ್ಪದ ರೀತಿಯಲ್ಲಿ ವರ್ತಿಸುವುದನ್ನು ಗಮನಿಸಿದ ಕಸ್ಟಮ್ಸ್ ಅಧಿಕಾರಿಗಳು ಆತನನ್ನು ಪ್ರಶ್ನಿಸಿದ್ದರು. ಅಧಿಕಾರಿಗಳು ಆತನ ಲಗೇಜನ್ನು ತಪಾಸಣೆಗೆ ಒಳಪಡಿಸಿದರು. ಈ  ಸಂದರ್ಭದಲ್ಲಿ ಬ್ಯಾಗಿನಲ್ಲಿ ಇಸ್ತ್ರಿ ಪೆಟ್ಟಿಗೆಯ ಒಳಗಡೆ ಇರುವ ಕಾಯಿಲ್ ಮಾದರಿಯ ವಸ್ತು ಗೋಚರಿಸಿತು. ಕಪ್ಪು ಮೆಟಾಲಿಕ್ ಬಣ್ಣ ಬಳಿದಿದ್ದ ಅದನ್ನು ಪರಿಶೀಲಿಸಿದಾಗ ಅದು 24 ಕ್ಯಾರೆಟ್ ಚಿನ್ನದಿಂದ ಮಾಡಿದ ಕಾಯಿಲ್ ಎಂಬುದು ಬೆಳಕಿಗೆ ಬಂತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com