ಮೆಟ್ರೋ ಎರಡನೇ ಹಂತಕ್ಕೆ ಫ್ರಾನ್ಸ್ ಸಾಲ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಮೆಟ್ರೊ 2ನೇ ಹಂತದ ಯೋಜನೆ ಅನುಷ್ಠಾನಕ್ಕೆ ರು.1,500 ಕೋಟಿ ಸಾಲ ನೀಡುವುದಕ್ಕೆ ಫ್ರಾನ್ಸ್ ನ ಏಜೆನ್ಸಿ ಫ್ರಾಂಚೈಸಿ ಡಿ ಡೆವಲಪ್‍ಮೆಂಟ್ (ಎಎಫ್ಡಿ) ಸಂಸ್ಥೆ ಒಪ್ಪಿಗೆ ನೀಡಿದೆ.
ನಮ್ಮ ಮೆಟ್ರೋ (ಸಂಗ್ರಹ ಚಿತ್ರ)
ನಮ್ಮ ಮೆಟ್ರೋ (ಸಂಗ್ರಹ ಚಿತ್ರ)
Updated on: 

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಮೆಟ್ರೊ 2ನೇ ಹಂತದ ಯೋಜನೆ ಅನುಷ್ಠಾನಕ್ಕೆ ರು.1,500 ಕೋಟಿ ಸಾಲ ನೀಡುವುದಕ್ಕೆ ಫ್ರಾನ್ಸ್ ನ ಏಜೆನ್ಸಿ ಫ್ರಾಂಚೈಸಿ ಡಿ  ಡೆವಲಪ್‍ಮೆಂಟ್ (ಎಎಫ್ಡಿ) ಸಂಸ್ಥೆ ಒಪ್ಪಿಗೆ ನೀಡಿದೆ.

ಎಎಫ್ಡಿ ನಿಯೋಗದ ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದ್ದು, 15 ವರ್ಷದ ಅವಧಿಯಲ್ಲಿ ರಾಜ್ಯ ಸರ್ಕಾರ ಈ ಸಾಲವನ್ನು ಮರು ಪಾವತಿಸಬೇಕಾಗುತ್ತದೆ. ಎಎಫ್ಡಿ ಸಂಸ್ಥೆ ಭಾರತದಲ್ಲಿ ಇದುವರೆಗೆ ನೀಡಿದ ಅತಿ ದೊಡ್ಡ ಸಾಲದ ಮೊತ್ತ ಇದಾಗಿದೆ. ಸಹಿ ಹಾಕುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಫ್ರಾನ್ಸ್ ನ ಕೌನ್ಸಲ್ ಜನರಲ್  ಫ್ರಾಂಕಾಯ್ಸ್ ಗಾಟಿಯಾರ್, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸತ್ಯಮೂರ್ತಿ, ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಕರೋಲಾ, ಎಎಫ್ ಡಿ ಪ್ರಾಂತೀಯ ನಿರ್ದೇಶಕ ನಿಕೋಲಸ್ ಫರ್ನಾಜ್ ಭಾಗವಹಿಸಿದ್ದರು.

ಮೆಟ್ರೊ 1ನೇ ಹಂತದ ಯೋಜನೆ ಎಎಫ್ ಡಿ ಈ ಹಿಂದೆ 110 ಮಿಲಿಯನ್ ಯುರೋ ಸಾಲ ನೀಡಿತ್ತು. ಈ ಬಾರಿ 200 ಮಿಲಿಯನ್ ಯೂರೋ ಸಾಲ ನೀಡುವುದಕ್ಕೆ ಒಪ್ಪಿಗೆ ನೀಡಲಾಗಿದೆ. ಸಾಲ ಪಡೆದ ದಿನಾಂಕದಿಂದ ಕಡಿಮೆ ಸ್ಥಿರ ಬಡ್ಡಿ ದರವನ್ನು ಒದಗಿಸಲಾಗುತ್ತದೆ.

ರೀಚ್-2 ಎಲ್ಲೆಲ್ಲಿ?
ಸುಮಾರು ರು.26,405 ಕೋಟಿ ಮೊತ್ತದ ಮೆಟ್ರೋ 2ನೇ ಹಂತದ ಯೋಜನೆಗೆ ಈಗಾಗಲೇ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಒಪ್ಪಿಗೆ ನೀಡಲಾಗಿದೆ. ಎಎಫ್ ಡಿ ಸಾಲವನ್ನು ಮೆಟ್ರೋ 2ನೇ ಹಂತದ ಪೂರ್ವ-ಪಶ್ಚಿಮ, ಉತ್ತರ-ದಕ್ಷಿಣ ನಾಲ್ಕು ವಿಸ್ತರಣೆ ಮಾರ್ಗಕ್ಕೆ ಬಳಸಿಕೊಳ್ಳಲಾಗುತ್ತದೆ. ಅಂದರೆ, ಮೈಸೂರು ರಸ್ತೆಯಿಂದ ಕೆಂಗೇರಿ, ಬೈಯಪ್ಪನಹಳ್ಳಿಯಿಂದ ವೈಟ್ ಫೀಲ್ಡ್, ಪುಟ್ಟೇನಹಳ್ಳಿಯಿಂದ ಅಂಜನಾಪುರ ಮತ್ತು ನಾಗಸಂದ್ರದಿಂದ ಬಿಐಇಸಿವರೆಗೆ ಉಪಯೋಗಿಸಿಕೊಳ್ಳಲಾಗುವುದು.

ಕರೆನ್ಸಿ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಎಂಆರ್‍ಸಿಎಲ್ ಗೆ ನೀಡಿರುವುದರಿಂದ ಬಡ್ಡಿ ಹೊರೆ ಗಣನೀಯವಾಗಿ ತಗ್ಗುತ್ತದೆ. ಯೂರೋ ಬಡ್ಡಿ ದರ ರುಪಾಯಿಗಿಂತ ಕಡಿಮೆ ಇದ್ದರೆ ಬಿಎಂಆರ್‍ಸಿಎಲ್ ಅದನ್ನೇ ಆಯ್ದುಕೊಳ್ಳಬಹುದು. ಒಪ್ಪಂದಕ್ಕೆ ಸಹಿ ಹಾಕಿದ ದಿನದಿಂದ ಒಂದು ವರ್ಷದ ನಂತರ ಸಾಲ ಪಡೆಯಲು ಪ್ರಸ್ತಾಪಿಸಿರುವುದರಿಂದ ಮಾರುಕಟ್ಟೆ ದರವನ್ನು ಆಧರಿಸಿ ಕರೆನ್ಸಿ ಆಂಂಯ್ಕೆ ಮಾಡಿಕೊಳ್ಳಬಹುದು.

30 ಲಕ್ಷ ಪ್ರಯಾಣಿಕರು
ಬಿಎಂಆರ್‍ಸಿಎಲ್ ಪ್ರಕಾರ ರೀಚ್-2 ಪೂರ್ಣ ಪ್ರಮಾಣದಲ್ಲಿ 2021ಕ್ಕೆ ಮುಕ್ತಾಯಗೊಳ್ಳಲಿದೆ. ಈಗ ನೀಡಿರುವ ಸಾಲದಿಂದ 90 ಲಕ್ಷಕ್ಕೂ ಹೆಚ್ಚು ಜನರಿರುವ ಬೆಂಗಳೂರಿನ ಅ„ಕ ಸಂಖ್ಯೆಯ ಜನ ಸಾರ್ವಜನಿಕ ಸಾರಿಗೆ ಬಳಸಲು ನೆರವಾಗುತ್ತದೆ. ರೀಚ್-1 ಅನ್ನು ಪ್ರತಿ ದಿನ 10 ಲಕ್ಷ ಜನರ ಪ್ರಯಾಣಕ್ಕೆ ಅನುಕೂಲ ವಾಗುವಂತೆ ವಿನ್ಯಾಸಗೊಳಿಸಲಾಗಿದ್ದು, ರೀಚ್-2 ಪೂರ್ಣಗೊಂಡ ನಂತರ ಪ್ರತಿ ದಿನ 30 ಲಕ್ಷ ಜನ ಪ್ರಯಾಣ ಮಾಡಲು ಸಾಧ್ಯವಾಗಲಿದೆ.

ತಳಮಟ್ಟದಲ್ಲಿ ಲಕ್ಷಾಂತರ ಜನರಿಗೆ ಸಾರ್ವಜನಿಕ ಸಂಚಾರ ಲಭ್ಯತೆ, ಮಾಲಿನ್ಯ ನಿಯಂತ್ರಣ ಹಾಗೂ ಇಂಧನ ಸಂರಕ್ಷಣೆ ಉದ್ದೇಶಗಳಿಗಾಗಿ ಈ ಸಾಲ ನೀಡಲಾಗುತ್ತಿದೆ.
-ಫ್ರಾಂಕಾಯ್ಸ್ ಭಾಟಿಯಾ

ಮೆಟ್ರೊ ಯೋಜನೆ ಸುರಕ್ಷಿತ, ಪರಿಣಾಮಕಾರಿ ಹಾಗೂ ಕಡಿಮೆ ಬೆಲೆಯ ಸಾರ್ವಜನಿಕ ಸಂಚಾರ ವ್ಯವಸ್ಥೆ. ಬೆಂಗಳೂರು ವಿಶ್ವದಲ್ಲಿ ಬೆಳೆಯುತ್ತಿರುವ ನಗರಗಳ ಪಟ್ಟಿಯಲ್ಲಿ ಸೇರಿರುವ ಕಾರಣ ಇಂಥದೊಂದು ಸಂಚಾರ ವ್ಯವಸ್ಥೆಯನ್ನು ನಿರ್ಮಾಣ ಮಾಡುವುದು ಅನಿವಾರ್ಯವೂ ಹೌದು.
-ಸಿದ್ದರಾಮಯ್ಯ ಮುಖ್ಯಮಂತ್ರಿ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com