ಬ್ಯಾಂಕ್ ಮುಷ್ಕರ; ಗ್ರಾಹಕ ತತ್ತರ

ಐದು ಸಹವರ್ತಿ ಬ್ಯಾಂಕ್‍ಗಳ ದ್ವಿಪಕ್ಷಿಯ ಒಪ್ಪಂದ ಉಲ್ಲಂಘಿಸಿದ ಭಾರತೀಯ ಸ್ಟೇಟ್ ಬ್ಯಾಂಕ್‍ನ ನಿಲುವು ವಿರೋಧಿಸಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ ಕರೆದಿದ್ದ ದೇಶವ್ಯಾಪಿ ಕರೆ ನೀಡಿದ್ದ ಮುಷ್ಕರಕ್ಕೆ ಉತ್ತಮ ಪ್ರತಿಕ್ರಿಯೆ ದೊರಕಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)
Updated on: 

ಬೆಂಗಳೂರು: ಐದು ಸಹವರ್ತಿ ಬ್ಯಾಂಕ್‍ಗಳ ದ್ವಿಪಕ್ಷಿಯ ಒಪ್ಪಂದ ಉಲ್ಲಂಘಿಸಿದ ಭಾರತೀಯ ಸ್ಟೇಟ್ ಬ್ಯಾಂಕ್‍ನ ನಿಲುವು ವಿರೋಧಿಸಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ ಕರೆದಿದ್ದ ದೇಶವ್ಯಾಪಿ ಕರೆ ನೀಡಿದ್ದ ಮುಷ್ಕರಕ್ಕೆ ಉತ್ತಮ ಪ್ರತಿಕ್ರಿಯೆ  ದೊರಕಿದೆ.

ಶುಕ್ರವಾರ ಬೆಂಗಳೂರಿನ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಪ್ರಧಾನ ಕಚೇರಿ ಎದುರು ಸಂಘದ ಸಾವಿರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಸಹವರ್ತಿ ಬ್ಯಾಂಕ್ ಗಳ ಸೇವಾ ನಿಯಮಗಳಲ್ಲಿ ಏಕಾಏಕಿ ಬದಲಾವಣೆ ತರಲು ಹೊರಟಿದ್ದು, ಇದರಿಂದ ನೌಕರರು ಹಲವು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಕಳೆದ 2015ರ ಮೇನಲ್ಲಿ ಭಾರತೀಯ ಬ್ಯಾಂಕ್‍ಗಳ ಸಂಘದ ವ್ಯವಸ್ಥಾಪಕ ಮಂಡಳಿ ಮತ್ತು ಅಖಿಲ ಭಾರತ ಬ್ಯಾಂಕ್‍ಗಳ ಸಂಘದ ಪ್ರತಿನಿಧಿಗಳು ಸಾಮಾನ್ಯ ಒಪ್ಪಂದವೊಂದಕ್ಕೆ ಸಹಿ ಮಾಡಿದ್ದು, ಈ ಒಪ್ಪಂದದಲ್ಲಿ ಬ್ಯಾಂಕ್ ಗಳಲ್ಲಿರುವ ನೌಕರರ ಹುದ್ದೆಗಳಿಗೆ ಅನುಸಾರವಾಗಿ ನಿಯಮಗಳು ಮತ್ತು ವೇತನಗಳನ್ನು ನಿರ್ಧರಿಸಲಾಗಿದೆ. 5 ಸಹವರ್ತಿ ಬ್ಯಾಂಕ್‍ಗಳು ಈ ಒಪ್ಪಂದವನ್ನು ಒಪ್ಪಿಕೊಂಡು ಸಹಿ ಮಾಡಿವೆ. ಆದರೆ, ಭಾರತೀಯ ಸ್ಟೇಟ್ ಬ್ಯಾಂಕ್, ಅದರ ನೌಕರರ ಸಂಘದ ಜೊತೆ ಆಂತರಿಕವಾಗಿ ಪೂರಕ ಒಪ್ಪಂದ ಮಾಡಿಕೊಂಡು ಸ್ವಲ್ಪ ಬದಲಾವಣೆಯೊಂಗೆ ನಿಯಮಗಳು ಹಾಗೂ ವೇತನಗಳು ನಿರ್ಧಾರವಾಗುತ್ತವೆ. ಈ ಆಂತರಿಕ ಒಪ್ಪಂದ ಇತರೆ ಬ್ಯಾಂಕ್‍ಗಳಿಗೆ ಅನ್ವಯವಾಗುವುದಿಲ್ಲ. ಆದರೆ, ಭಾರತೀಯ ಸ್ಟೇಟ್ ಬ್ಯಾಂಕ್‍ನ ಆಡಳಿತ ವರ್ಗದವರು ಪ್ರತ್ಯೇಕ ನೀತಿ-ನಿಯಮ, ವೇತನಗಳನ್ನು ಸಹವರ್ತಿ ಬ್ಯಾಂಕ್‍ಗಳಲ್ಲಿ ಏಕಪಕ್ಷೀಯವಾಗಿ ನಿರ್ಧರಿಸಿ ಜಾರಿಗೊಳಿಸಲು ಹುನ್ನಾರ ನಡೆಸುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.

ಇದಕ್ಕೆ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ ವಿರೋಧಿಸುತ್ತಿದ್ದರೂ ಭಾರತೀಯ ಸ್ಟೇಟ್ ಬ್ಯಾಂಕ್‍ನ ಆಡಳಿತ ವರ್ಗದವರು ನೌಕರರ ಸಂಘದ ಜೊತೆ ಯಾವುದೇ ಮಾತುಕತೆ ನಡೆಸದೆ ಹೊಸ ನಿಯಮ ಜಾರಿಗೊಳಿಸಲು ಹೊರಟಿರುವುದು ಸರಿಯಲ್ಲ. ಕೂಡಲೇ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ನಿರ್ಧಾರವನ್ನು ಬದಲಿಸಿಕೊಳ್ಳಬೇಕು. ಇಲ್ಲವಾದಲ್ಲಿ ಮುಂದೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸಂಘಟನೆ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com