

ಬೆಂಗಳೂರು: ಮೆಟ್ರೋ ರೈಲು ನಿಗಮವು ಪೂರ್ವ ಮತ್ತು ಪಶ್ಚಿಮ ಕಾರಿಡಾರ್‍ನಲ್ಲಿ ಕಾಮಗಾರಿ ಹಮ್ಮಿಕೊಳ್ಳುತ್ತಿದ್ದು, ಪ್ರಯಾಣಿಕರು ಸಹಕರಿಸಬೇಕು ಎಂದು ಬಿಎಂಆರ್‍ಸಿಎಲ್ ತಿಳಿಸಿದೆ.
ಜ.9, 10ರಂದು ಬೆಳಗ್ಗೆ 6ರಿಂದ ರಾತ್ರಿ 10ಗಂಟೆ ವರೆಗೆ ಕ್ರಮವಾಗಿ ಮಹಾತ್ಮ ಗಾಂಧಿ ರಸ್ತೆಯಿಂದ ಬೈಯಪ್ಪನಹಳ್ಳಿ ನಿಲ್ದಾಣದವರೆಗೆ ಮತ್ತು ಮಹಾತ್ಮ ಗಾಂಧಿ ರಸ್ತೆಯಿಂದ ಇಂದಿರಾನಗರ ನಿಲ್ದಾಣದವರೆಗೆ ವಾಣಿಜ್ಯ ಸಂಚಾರ ಹಮ್ಮಿಕೊಂಡಿದೆ.
ಇಂದಿರಾ ನಗರ ನಿಲ್ದಾಣದಿಂದ ಬೈಯ್ಯಪನಹಳ್ಳಿಯ ಎರಡೂ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಕೈಗೊಳ್ಳಲಾಗಿದೆ. ಜ.12, 14ರಂದು ಬೆಳಗ್ಗೆ 7-10 ಗಂಟೆವರೆಗೆ ಮೈಸೂರು ರಸ್ತೆಯಿಂದ ಮಾಗಡಿ ರಸ್ತೆವರೆಗೆ ಹಾಗೂ ಮೈಸೂರು ರಸ್ತೆಯಿಂದ ವಿಜಯನಗರದ ವರೆಗೂ ವಾಣಿಜ್ಯ ಸಂಚಾರ ನಡೆಸಲಾಗುವುದು ಎಂದಿದ್ದಾರೆ.