ಸಾಲು ಮರದ ತಿಮ್ಮಕ್ಕನ ಮನೆಯಲ್ಲಿ ಕಳ್ಳತನ

ಸಾಲು ಮರದ ತಿಮ್ಮಕ್ಕ ಅವರ ಮನೆಯಲ್ಲಿ ಸಾವಿರಾರು ರುಪಾಯಿ ನಗದು ಹಾಗೂ ಚಿನ್ನಾಭರಣ ಕಳವಾಗಿರುವ ಘಟನೆ ಮಂಜುನಾಥ್ ನಗರದಲ್ಲಿ ಶುಕ್ರವಾರ ನಡೆದಿದೆ...
(ಸಂಗ್ರಹ ಚಿತ್ರ)
(ಸಂಗ್ರಹ ಚಿತ್ರ)
Updated on: 

ಬೆಂಗಳೂರು: ಸಾಲು ಮರದ ತಿಮ್ಮಕ್ಕ ಅವರ ಮನೆಯಲ್ಲಿ ಸಾವಿರಾರು ರುಪಾಯಿ ನಗದು ಹಾಗೂ ಚಿನ್ನಾಭರಣ ಕಳವಾಗಿರುವ ಘಟನೆ ಮಂಜುನಾಥ್ ನಗರದಲ್ಲಿ ಶುಕ್ರವಾರ ನಡೆದಿದೆ.

ತಿಮ್ಮಕ್ಕ ಅವರು ತಮ್ಮ ಸಾಕುಮಗ ಉಮೇಶ್ ಜೊತೆ ಮಂಜುನಾಥ್‍ನಗರದಲ್ಲಿ ವಾಸವಿದ್ದು, ಕಾರ್ಯನಿಮಿತ್ತ ಊರಿಗೆ ಹೋಗಿದ್ದರು.

ಈ ವೇಳೆ ಮನೆಯ ಹಿಂಬಾಗಿಲಿನಿಂದ ಒಳನುಗ್ಗಿದ ಕಳ್ಳರು ಮನೆಯಲ್ಲಿದ್ದರು.50 ಸಾವಿರ ನಗದು, ಟಿವಿ, ಬೆಳ್ಳಿ ಖಡ್ಗ, 25 ಗ್ರಾಂ ಚಿನ್ನದ ಸರವನ್ನು ಕಳವು ಮಾಡಿದ್ದಾರೆ. ತಿಮ್ಮಕ್ಕ ಹಾಗೂ ಮಗ ಉಮೇಶ್ ಮಧ್ಯಾಹ್ನ 3 ಗಂಟೆಗೆ ಊರಿನಿಂದ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ಪೀಣ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com