ಆತಂಕ ಸೃಷ್ಟಿಸುತ್ತಿರುವ ಕೆರೆ ಕಬಳಕಿ

ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಕೆರೆಗಳ ಕಣ್ಮರೆ, ಪರಿಸರ ಹಾನಿ ದೃಷ್ಟಿಯಿಂದ ಆತಂಕ ಸೃಷ್ಟಿಸಿದೆ. ಈ ಕೆರೆಗಳ ಹಾನಿಗೆ ಭೂ ಸ್ವಾಹವೇ ಮುಖ್ಯ ಕಾರಣವಾಗಿದ್ದು ಬೆಂಗಳೂರಿನಾಚೆಗೂ ಹಬ್ಬಿರುವ ಚಹರೆಯು ಕಣ್ಣಿಗೆ ರಾಚುತ್ತಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)
Updated on: 

ಬೆಂಗಳೂರು; ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಕೆರೆಗಳ ಕಣ್ಮರೆ, ಪರಿಸರ ಹಾನಿ ದೃಷ್ಟಿಯಿಂದ ಆತಂಕ ಸೃಷ್ಟಿಸಿದೆ. ಈ ಕೆರೆಗಳ ಹಾನಿಗೆ ಭೂ ಸ್ವಾಹವೇ ಮುಖ್ಯ ಕಾರಣವಾಗಿದ್ದು ಬೆಂಗಳೂರಿನಾಚೆಗೂ ಹಬ್ಬಿರುವ ಚಹರೆಯು ಕಣ್ಣಿಗೆ ರಾಚುತ್ತಿದೆ.

ಅನೇಕಲ್ ತಾಲೂಕಿನಲ್ಲಿ ಭೂ ಮಾಫಿಯಾ ಎಗ್ಗಿಲ್ಲದೆ ನಡೆಯುತ್ತಿರುವುದಕ್ಕೆ ಕಣ್ಮರೆಯಾಗಿರುವ ಕೆರೆಗಲೇ ಸಾಕ್ಷಿಭೂತವಾಗಿವೆ. ತಾಲೂಕಿನಲ್ಲಿ ನಾಲ್ಕು ಹೋಬಳಿಗಳಿದ್ದು, ಒಟ್ಟು 251 ಕೆರೆಗಳು 7191.9 ಎಕರೆಗಳಲ್ಲಿ ವ್ಯಾಪಿಸಿದ್ದವು. ಇಲ್ಲಿಗೂ ಕನ್ನ ಹಾಕಿದ ಪರಿಣಾಮ, 583.36 ಎಖರೆ ಕೆರೆ ಒತ್ತವರಿಯಾಗಿದೆ. ಇದರಲ್ಲಿ 123.9 ಎಕರೆ ಸರ್ಕಾರಿ ಒತ್ತವರಿ ಹಾಗೂ 460.27 ಎಕರೆ ಖಾಸಗಿ ಒತ್ತುವರಿಯಾಗಿದೆ. ಆಶ್ಚರ್ಯವೆಂದರೆ ಬಿಡಿಎ ಇಲ್ಲಿ ಯಾವುದೇ ಒತ್ತುವರಿ ಮಾಡದೆ ಸೈ ಎನಿಸಿಕೊಂಡಿದೆ! ಉಳಿದಂತೆ ಕೊಳಚೆ, ಸರ್ಕಾರಿ ರಸ್ತೆ, ಪೂಜಾ ಸ್ಥಳಗಳು, ಅರಣ್ಯ ಇಲಾಖೆ ಸ್ಮಶಾನ, ಶಾಲೆಗಳು, ಸಾರಿಗೆ ಸಂಸ್ಥೆಗಳು ತಮ್ಮ ಒತ್ತುವರಿಯನ್ನು ಅಲ್ಪಮಟ್ಟಿಗೆ ಮುಂದುವರಿಸಿವೆ.

ಹೆಸರು ಪುನರಾವರ್ತನೆ
ಅನೇಕಲ್ ತಾಲೂಕಿನಲ್ಲಿ ಕೆರೆ ಜಾಗ ಒತ್ತವರಿ ಮಾಡಿಕೊಂಡಿರುವ ವ್ಯಕ್ತಿಗಳ ಪೈಕಿ ಮುನಿರಾಜು, ಮುನಿವೆಂಕಟಪ್ಪ ಹಾಗೂ ರೆಡ್ಡಿ ಎಂಬ ಹೆಸರಿನಡಿ 100ಕ್ಕೂ ಹೆಚ್ಚು ಮಂದಿಯ ಹೆಸರು ಪುನರಾವರ್ತನೆಯಾಗಿರುವುದು ವಿಶೇಷ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com