ಕೈಕೊಟ್ಟ ಪ್ರಿಯಕರ ಯುವತಿ ನೇಣಿಗೆ ಶರಣು

ಪ್ರಿಯಕರ ಬೇರೊಬ್ಬಳ ಜೊತೆ ಮದುವೆಯಾದ ವಿಷಯ ತಿಳಿದು ಮನನೊಂದ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗುರುವಾರ ರಾತ್ರಿ ವಿವೇಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)
Updated on: 

ಬೆಂಗಳೂರು: ಪ್ರಿಯಕರ ಬೇರೊಬ್ಬಳ ಜೊತೆ ಮದುವೆಯಾದ ವಿಷಯ ತಿಳಿದು ಮನನೊಂದ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗುರುವಾರ ರಾತ್ರಿ ವಿವೇಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಆಸ್ಟೀನ್ ಟೌನ್ ಬಿಡಿಎ ಫ್ಲ್ಯಾಟ್ ನಿವಾಸಿ ಪವಿತ್ರಾ (24) ಮೃತಪಟ್ಟವರು. ರಾತ್ರಿ 8.30ರ ಸುಮಾರಿನಲ್ಲಿ ಯುವತಿ ಮನೆಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೆಲಸ ನಿಮಿತ್ತ ಹೊರ ಹೋಗಿದ್ದ ಪೋಷಕರು ತಡರಾತ್ರಿ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.

ಕಳೆದ ನಾಲ್ಕು ವರ್ಷದಿಂದ ಚಿಕ್ಕಬಳ್ಳಾಪುರ ಮೂಲದ ಮುರಳಿ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಸೇಂಟ್ ಫಿಲೊಮಿನಾ ಆಸ್ಪತ್ರೆಯಲ್ಲಿ ಟೆಕ್ನಿಷಿಯನ್ ಆಗಿ ಕಾರ್ಯನಿರ್ವಹಿಸುವ ವೇಳೆ ಇಬ್ಬರಿಗೂ ಪ್ರೇಮಾಂಕುರವಾಗಿದೆ. ಈ ವೇಳೆ ಮುರಳಿ ಮದುವೆಯಾಗುವುದಾಗಿ ನಂಬಿಸಿ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ. ಪರಿಣಾಮ ಆಕೆ ಗರ್ಭವತಿಯಾಗಿದ್ದಳು.

ಇದರಿಂದ ಪೇಚಿಗೆ ಸಿಲುಕಿದ ಮುರಳಿ, ಗರ್ಭವತಿ ವಿಚಾರ ಸಮಾಜಕ್ಕೆ ತಿಳಿದರೆ ಮರ್ಯಾದೆಗೆ ಧಕ್ಕೆಯಾಗುತ್ತದೆ ಎಂದು ಭಾವಿಸಿ ಪವಿತ್ರಾ ಒಪ್ಪಿಗೆ ಪಡೆದು ಗರ್ಭಪಾತ ಮಾಡಿಸಿದ್ದ. ನಂತರವೂ ಇವರ ಪ್ರೇಮ ಮುಂದುವರಿದಿತ್ತು. ಯಾವುದೋ ಕಾರಣಕ್ಕೆ ಒಂದೂವರೆ ವರ್ಷದ ಹಿಂದೆ ಇವರ ಪ್ರೇಮ ಮುರಿದು ಬಿದ್ದು ಪ್ರಿಯಕರ ಮುರಳ ದೂರವಾಗಿದ್ದ. ಬಳಿಕ ಪವಿತ್ರಾ ಕೆಲಸ ಬಿಟ್ಟು ಬಿಎಸ್ಸಿ ವ್ಯಾಸಂಗಕ್ಕೆ ಸೇರಿದ್ದಳು. ಆದರೂ ಮುರಳಿ ಮೇಲೆ ತುಂಬಾ ಪ್ರೀತಿ ಇತ್ತು. ಇತ್ತೀಚೆಗೆ ಮುರಳಿ ಬೇರೊಬ್ಬಳ ಜೊತೆ ಮದುವೆಯಾದ ವಿಚಾರ ತಿಳಿದ ಪವಿತ್ರಾ ಮಾನಸಿಕವಾಗಿ ನೊಂದಿದ್ದಳು. ಗುರುವಾರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದೆ ಈ ಸಂಬಂಧ ವಿವೇಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com