

ಬೆಂಗಳೂರು: ರಾಜರಾಜೇಶ್ವರಿ ನಗರದ ಗೇಟ್ ಬಳಿಯಿರುವ ಗೋಪಾಲನ್ ಆರ್ಕೆಡ್ ಮಾಲ್ ನಲ್ಲಿ ಸೋಮವಾರ ಅಗ್ನಿ ಆಕಸ್ಮಿಕ ಘಟನೆ ನಡೆದಿದೆ.
ಗೋಪಾಲನ್ ಆರ್ಕೆಡ್ ನಲ್ಲಿರುವ ಬ್ರಾಂಡ್ ಫ್ಯಾಕ್ಟರಿಯಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಘಟನೆಗೆ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಹೇಳಲಾಗುತ್ತಿದೆ.
ಅಗ್ನಿ ಆಕಸ್ಮಕಿ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿರುವ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಿಗಿದ್ದು, ಬೆಂಕಿ ನಂದಿಸಲು ಈಗಾಗಲೇ 2 ವಾಹನಗಳು ಕಾರ್ಯನಿರ್ವಹಿಸುತ್ತಿವೆ. ಘಟನೆಯಲ್ಲಿ ಸಾವು-ಗಾಯಗೊಂಡಿರುವ ಕುರಿತಂತೆ ಯಾವುದೇ ವರದಿಯಾಗಿಲ್ಲ.