ಚಿಕ್ಕಮಗಳೂರು

ಹೊಂಡವಾಗಿರುವ ಮೋರಿ

Published On :

ಶೃಂಗೇರಿ: ಪಟ್ಟಣದ ಕೆವಿಆರ್ ರಸ್ತೆ ಬದಿಯಲ್ಲಿರುವ ಮೋರಿ ಹೊಂಡವಾಗಿದ್ದು, ಪಾದಚಾರಿಗಳ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ. ಹಗಲಲ್ಲಿಯೇ ಪಾದಚಾರಿಗಳು ನಿಯಂತ್ರಣ ತಪ್ಪಿ ಇದರೊಳಗೆ ಬಿದ್ದ ಘಟನೆಗಳು ಸಾಕಷ್ಟಿವೆ. ಪಟ್ಟಣದ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಜನನಿಬಿಡ ಪ್ರದೇಶವಾಗಿರುವ ಈ ರಸ್ತೆಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು  ಸಂಚರಿಸಲಿದ್ದು, ರಾತ್ರಿ ವೇಳೆ ತುಂಬಾ ಅಪಾಯಕಾರಿಯಾಗಿದೆ.  ಅದೂ ಅನಿಯಮಿತ ವಿದ್ಯುತ್ ಕಡಿತದಿಂದ ಸಂಜೆಯ ವೇಳೆ ಕತ್ತಲಲ್ಲಿ ಎಡವಿದರೆ ಹೊಂಡದಲ್ಲಿ ಬೀಳುವುದರಲ್ಲಿ ಅನುಮಾನವಿಲ್ಲ. ಈ ಬಗ್ಗೆ ಸ್ಥಳೀಯರಾದ ಕೆ.ಎಸ್. ಕೃಷ್ಣಪ್ಪ, ಗಣೇಶ್ ಮೆಣಸೆ, ಮಂಜುನಾಥ್. ಋೃಂಗೇಶ್ವರ ಭಟ್ ಪತ್ರಿಕೆಯೊಂದಿಗೆ ಮಾತನಾಡಿ, ಮೋರಿಯಲ್ಲಿನ ಈ ಹೊಂಡ ಅಪಾಯಕಾರಿಯಾಗಿದ್ದು, ನಿಯಂತ್ರಣ ತಪ್ಪಿ ಎಡವಿದರೆ ಅನಾಹುತ ಉಂಟಾಗಲಿದೆ. ತ್ಯಾಜ್ಯ ನೀರಿನ ವಾಸನೆಯಿಂದ ನಮಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಸ್ಥಳಿಯ ಪಟ್ಟಣ ಪಂಚಾಯಿತಿ ಇದನ್ನು ಮುಚ್ಚಿಸಿ ಆಗುವ ಅನಾಹುತ ತಪ್ಪಿಸಲು ಮುಂದಾಗಬೇಕಿದೆ. ಪರಿಸರ ನೈರ್ಮಲ್ಯ ಕಾಪಾಡಬೇಕಿದೆ ಎಂದು ಒತ್ತಾಯಿಸಿದ್ದಾರೆ.
ದರ್ಗಾ ಸಮಿತಿ
ನರಸಿಂಹರಾಜಪುರ: ಏ.22ರಂದು ನಡೆಯವ 2013ನೇ ಸಾಲಿನ ದರ್ಗಾ ಎ ಹಜರತ್ ಹಯಾತ್ ಅಲಿ ರವರ ಉರುಸ್ ನೆರವೇರಿಸಲು ನೂತನ ದರ್ಗಾ ಸಮಿತಿ ರಚಿಸಲಾಗಿದೆ ಎಂದು ದರ್ಗಾ ಉರುಸ್ ಸಮಿತಿ ನೂತನ ಅಧ್ಯಕ್ಷ ಮುನಾವರ್ ಪಾಷ ತಿಳಿಸಿದ್ದಾರೆ.ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ, ನರಸಿಂಹರಾಜಪುರ ಜಾಮೀಯ ಮಸೀದಿ ಆಡಳಿತಾಧಿಕಾರಿ ಮತ್ತು ಅಡ್ವೈಸರಿ ಕಮಟಿ ಉರುಸ್ ನಡೆಸಲು ನೂತನ ದರ್ಗಾ ಸಮಿತಿ ರಚಿಸಿದ್ದಾರೆ. ದರ್ಗಾ ಸಮಿತಿಯ ನೂತನ  ಅಧ್ಯಕ್ಷರಾಗಿ ಮುನಾವರ್ ಪಾಷ, ಕಾರ್ಯದರ್ಶಿಯಾಗಿ ಮಹಮ್ಮದ್ ಇಬ್ರಾಹಿಂ, ಖಜಾಂಚಿಯಾಗಿ  ಸಮೀರ್ ಹಾಗೂ 15 ಜನರನ್ನು ಸಮಿತಿಯ ಸದಸ್ಯರನ್ನಾಗಿ ನೇಮಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.