ಚಿಕ್ಕಮಗಳೂರು

ಜೆಡಿಎಸ್‌ಗೆ ಸೇರ್ಪಡೆ

Published On :

ತರೀಕೆರೆ: ಮಾಜಿ ಪುರಸಭಾಧ್ಯಕ್ಷ, ಜೆಡಿಎಸ್ ಮುಖಂಡ ಟಿ.ಆರ್. ನಾಗರಾಜ್ ಅವರ ನಿವಾಸದಲ್ಲಿ ಏರ್ಪಡಿಸಿಗಿದ್ದ ಸಭೆಯಲ್ಲಿ ಮುಖಂಡ ಟಿ.ಆರ್. ನಾಗರಾಜ್ ಅವರ ಸಮ್ಮುಖದಲಿ ಯಾಸೀನ್, ಆಸ್ಲಾಂಖಾನ್, ರಿಜ್ವಾನ್ ಆಹಮದ್,ಖಾನ್, ಅಲ್ಪಸಂಖ್ಯಾತರ ಅಧ್ಯಕ್ಷ ರಫೀಕ್ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ಮತದಾನ ಜಾಗೃತಿ ಅಭಿಯಾನ
ತರೀಕೆರೆ: ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾ.ಶಾಲೆ ವತಿಯಿಂದ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕ್ಷೇತ್ರ ಶಿಕ್ಷಣಾಧಿಕಾರಿ ಸಿ,.ಆರ್. ಪರಮೇಶ್ವರಪ್ಪ ಅವರು ಮತದಾನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದರು.
ಪಟ್ಟಣದಲ್ಲಿ ಜಾಥಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ನೀತಿ ಸಂಹಿತೆ ಉಲ್ಲಂಘನೆ: ಆರೋಪ
ಕೊಪ್ಪ: ರಾಜ್ಯ ವಿಧಾನ ಸಭೆಗೆ ಚುನಾವಣೆ ಘೋಷಣೆಯಾಗಿದ್ದರೂ ಬಿಜೆಪಿ ನೀತಿ ಸಂಹಿತೆ ಉಲ್ಲಂಘನೆ ಮಾಡುತ್ತಿದೆ ಎಂದು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಓಣಿತೋಟ ರತ್ನಾಕರ್ ಆರೋಪಿಸಿದ್ದಾರೆ.
 ಬಿಜೆಪಿ ಹಿಡಿತದಲ್ಲಿರುವ ಮಲೆನಾಡು ಅಡಕೆ ಮಾರಟ ಸಹಕಾರ ಸಂಘದ ಕೊಪ್ಪ ಶಾಖೆಯಲ್ಲಿ ಏ.3 ರಂದು 6 ಮಂದಿಗೆ ಗುಂಪು ವಿಮಾ ಯೋಜನೆಯಡಿ # 1.13 ಲಕ್ಷ ಪರಿಹಾರ ಚೆಕ್ಕನ್ನು ವಿತರಿಸಲಾಗಿದ್ದು, ಬಿಜೆಪಿ ಮುಖಂಡ, ಮ್ಯಾಮ್ಕೋಸ್ ನಿರ್ದೇಶಕ ಜಿಪಂ ಸದಸ್ಯೆಯೊಬ್ಬರ ಪತಿ ಈ ಚೆಕ್ಕುಗಳನ್ನು ವಿತರಣೆ ಮಾಡಿದ್ದಾರೆ. ಚುನಾವಣಾಧಿಕಾರಿ ವಿಷಯ ತಿಳಿದಿದ್ದರೂ ಕ್ರಮ ತೆಗೆದುಕೊಳ್ಳದೇ ಕೈಕಟ್ಟಿ ಕುಳಿತಿದ್ದಾರೆ. ಅದ್ದರಿಂದ ಜಿಲ್ಲಾಧಿಕಾರಿಗಳು ಕೂಡಲೇ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಪುಸ್ತಕ ಬಿಡುಗಡೆ
ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಸಂಶೋಧಕ ಫ್ರಾನ್ಸಿಸ್ ಡಿಸೋಜ ಅವರು ಬರೆದಿರುವ ಸ್ಪೀಕಿಂಗ್ ಇಂಗ್ಲಿಷ್ ಎಂಬ ಪುಸ್ತಕ ಬಿಡುಗಡೆಗೊಂಡಿದೆ.
ನಗರದ ಎಡ್ಯುರೈಟ್ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಅತಿಥಿ ಉಪನ್ಯಾಸಕ ಪ್ರೊ. ಡೇವಿಡ್ ಬಾಂಡ್ ಪುಸ್ತಕ ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಅವರು, ಈ ಪುಸ್ತಕದಲ್ಲಿ ಪರಿಚಯಿಸಿರುವ ಇಂಗ್ಲಿಷ್ ಆಲಿಸುವಿಕೆ ಮತ್ತು ಬರವಣಿಗೆಯ ವಿಚಾರಗಳು, ವ್ಯಾಕರಣ, ಇಂಗ್ಲಿಷ್ ಕಲಿಕಾ ವಿದ್ಯಾರ್ಥಿಗಳಿಗೆ ತುಂಬ ಉಪಯುಕ್ತವಾಗಿದೆ ಎಂದರು.
ಲೇಖಕ ಫ್ರಾನ್ಸಿಸ್ ಡಿಸೋಜ ಮಾತನಾಡಿ, ಇಂಗ್ಲಿಷ್ ಬೇಡಿಕೆಯ ಸ್ವರೂಪ ಬದಲಾಗುತ್ತಿದೆ. ಹಾಗಾಗಿ ಇಂಗ್ಲಿಷ್ ಕಲಿಕೆಯ ಸ್ಪರೂಪವು ಬದಲಾಗಬೇಕು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.