ನಾಳೆ ಪಂಚಾಮೃತ ಅಭಿಷೇಕ
ಶಿವಮೊಗ್ಗ: ಕೋಟೆ ರಸ್ತೆಯ ಶ್ರೀ ಶನೈಶ್ಚರ ಸೇವಾ ಸಮಿತಿ ಟ್ರಸ್ಟ್ ಏ.10ರಂದು ಬೆಳಿಗ್ಗೆ 6.30ರಿಂದ 7.30ರವರೆಗೆ ನವಗ್ರಹ ಮೂಲಬಿಂಬಕ್ಕೆ ಪಂಚಾಮೃತ ಅಭಿಷೇಕ ಏರ್ಪಡಿಸಿದೆ. ಬೆಳಗ್ಗೆ 9.30ರಿಂದ 11.30ರ ವರೆಗೆ ನವಗ್ರಹ ಪೂರ್ವಕ ಶನಿಶಾಂತಿ ಹೋಮ ನಡೆಯುವುದು ಎಂದು ಟ್ರಸ್ಟ್‌ನ ಆರ್ಚಕ ವೃಂದ ತಿಳಿಸಿದೆ. ವಿವರಗಳಿಗೆ- 9449699584 ಸಂಪರ್ಕಿಸಿ.
ಚೆಸ್ ತರಬೇತಿ
ಶಿವಮೊಗ್ಗ: ನಳಂದ ಚೆಸ್ ಅಕಾಡೆಮಿ ಏ.12ರಿಂದ 20ರವರೆಗೆ ಪ್ರಾಥಮಿತ ಹಂತದ ಚೆಸ್ ತರಬೇತಿ ಶಿಬಿರ ಏರ್ಪಡಿಸಲಾಗಿದೆ. ಬೇಸಿಗೆ ರಜೆಯ ಪ್ರಯುಕ್ತ ಚೆಸ್ ತರಬೇತಿ ಶಿಬಿರ ಹಮ್ಮಿಕೊಂಡಿದ್ದು, ಆಸಕ್ತರು ಇದರ ಉಪಯೋಗ ಪಡೆದುಕೊಳ್ಳುವಂತೆ ಆಕಾಡೆಮಿಯ ಶ್ರೀ ಕೃಷ್ಣ ಉಡುಪ ತಿಳಿದ್ದಾರೆ. ವಿವರಗಳಿಗಾಗಿ-945809662.
ನೇಮಕ
ಶಿವಮೊಗ್ಗ: ಜಿಲ್ಲಾ ಜೆಡಿಎಸ್‌ನ ಅಧ್ಯಕ್ಷ ಎಂ. ಶ್ರೀಕಾಂತ್ ಹಾಗೂ ಜಿಲ್ಲಾ ಯವ ಜೆಡಿಎಸ್ ಅಧ್ಯಕ್ಷ ಜಿ.ಡಿ. ಮಂಜುನಾಥ್ ಅವರ ಆದೇಶದ ಮೇರೆಗೆ ಬಿ.ಎಸ್. ವಾರೀಷ್ ಪಾಷಾ ಅವರನ್ನು ಯುವ ಜೆಡಿಎಸ್‌ನ ಉಪಾಧ್ಯಕ್ಷರಾಗಿ ನೇಮಕ ಮಾಡಿದ್ದಾರೆ ಎಂದು ಪಕ್ಷ ತಿಳಿಸಿದೆ.
ಕೆಜೆಪಿಯಿಂದ ಬಿರುಸಿನ ಪ್ರಚಾರ
ಶಿವಮೊಗ್ಗ: ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಜಿ. ಬಸವಣ್ಣಪ್ಪ ಅವರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಚಾರ ಮಾಡಿದರು. ಅಬ್ಬಲಗೆರೆ, ಹಾರ್ನಾಹಳ್ಳಿ, ಕುಂಚೇನಹಳ್ಳಿ, ಮಲ್ಲಾಪುರ ಗ್ರಾಮ ಪಂಚಾಯಿ ಭಾಗದಲ್ಲಿ ಮನೆ- ಮನೆಗಳಿಗೆ ತೆರಳಿ ಮತ ಯಾಚಿಸಿದರು. ಈ ವೇಳೆ ಕೆಜೆಪಿ ಮುಖಂಡ ಬಿ.ಎಚ್. ರುದ್ರಪ್ಪ, ಜಿ.ಎಂ. ಹಾಲೇಶಪ್ಪ, ಕಸಟ್ಟೆ ಸುರೇಶ್, ಹುಬ್ಬಳ್ಳಿ ನಾಗರಾಜ್, ಜಿ.ಇ. ರಮೇಶ್, ನಾಗೇಶ್ ನಾಯ್ಕ್, ಜಿಲ್ಲಾ ರೈತ ಘಟಕದ ಅಧ್ಯಕ್ಷ ಯಡೇಹಳ್ಳಿ ಪಾಲಾಕ್ಷಪ್ಪ, ಕ್ಷೇತ್ರ ಕೆಜೆಪಿ ಅಧ್ಯಕ್ಷ ಜಿ. ಸಾದಶಿವಪ್ಪ ಗೌಡ ಮತ್ತಿತರರು ಇದ್ದರು ಎಂದು ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಬಿ.ಎಚ್. ರಾಮಚಂದ್ರ ತಿಳಿಸಿದ್ದಾರೆ.
18ರಿಂದ ಶಿಬಿರ
ಶಿವಮೊಗ್ಗ: ಜನರೇಶನ್ ನೆಕ್ಟ್ ಏ.18ರಿಂದ 27ರ ವರೆಗೆ ನೇಚರ್ ರೆಸಿಡೆನ್ಸಿಯಲ್ ಕ್ಯಾಂಪ್ ಏರ್ಪಡಿಸಿದೆ. ಮಕ್ಕಳಿಗೆ ಎಲ್ಲಾ ಅನುಕೂಲತೆಗಳೂಂದಿಗೆ ಧ್ಯಾನ, ಭಜನೆ, ಟ್ರಕ್ಕಿಂಗ್ ವಿವಿಧ ಸ್ಪರ್ಧೆಗಳು ಮನೋರಂಜನಾ ಕಾರ್ಯಕ್ರಮವಿರುತ್ತದೆ. ಶಿಬಿರದಲ್ಲಿ ಪಾಲ್ಗೊಳ್ಳಲಿಚ್ಚಿಸುವವರು ಏಪ್ರಿಲ್ 10ರೊಳಗಾಗಿ ಮಕ್ಕಳ ಹೆಸರನ್ನು ನೋಂದಾಯಿಸಬೇಕು ಎಂದು ಡಿ.ಎಚ್. ಗುರುರಾಜ್ ತಿಳಿಸಿದ್ದಾರೆ. ವಿವರಗಳಿಗಾಗಿ- 9731599064.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

