ಮೌಲ್ಯಾಧಾರಿತ ಶಿಕ್ಷಣ ಅಗತ್ಯ
ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ಶಿಸ್ತು, ಸಂಯಮ ಹೇಳಿಕೊಡಿ: ಮಹೇಶ್
ಕಪ್ರ ವಾರ್ತೆ, ಚಿಕ್ಕಮಗಳೂರು, ಏ.9
ಪುಟ್ಟ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಬೇಕು ಎಂದು ಜಿಲ್ಲಾ ಸ್ಕೌಟ್ಸ್ ಆಯುಕ್ತ ಎ.ಎನ್. ಮಹೇಶ್ ಹೇಳಿದ್ದಾರೆ.
ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಲ್ಲಿ ಸೋಮವಾರ ಮುಕ್ತಾಯಗೊಂಡ ತರಬೇತಿ ಶಿಬಿರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೆಳೆಯುವ ಪೈರು ಮೊಳಕೆಯಲ್ಲಿ ಎನ್ನುವಂತೆ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಚಟುವಟಿಕೆ ಆಧಾರಿತ ಶಿಸ್ತು, ಸಂಯಮ, ನೀತಿಯುತ ಶಿಕ್ಷಣದ ಅಗತ್ಯವಿದೆ ಎಂದರು.
ಜಿಲ್ಲೆಯಲ್ಲಿರುವ ಎಲ್ಲಾ ನರ್ಸರಿ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಬನ್ನೀಸ್ ಕಾರ್ಯಕ್ರಮವನ್ನು 6 ವರ್ಷದೊಳಗಿನ ಮಕ್ಕಳಿಗಾಗಿ ಆಯೋಜಿಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ಸರ್ಕಾರ, ಸಂಘಸಂಸ್ಥೆಗಳು ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ಸಹಕಾರ ಅಗತ್ಯವೆ ಎಂದ ಅವರು, ಈ ಶೈಕ್ಷಣಿಕ ವರ್ಷದ ಅಂತ್ಯದೊಳಗೆ ಜಿಲ್ಲೆಯಲ್ಲಿ ಎಲ್ಲಾ ಪ್ರಥಮ ದರ್ಜೆ ಕಾಲೇಜುಗಳಲ್ಲಿ ರೇಜರ್ಸ್ ಮತ್ತು ರೋವರ್ ತಂಡಗಳು ಕಾರ್ಯರಂಭಗೊಳ್ಳಲಿವೆ ಎಂದು ತಿಳಿಸಿದರು.
ಹೊಸತು ಕಲಿಯಿರಿ: ತರಬೇತಿಯ ಶಿಬಿರಾರ್ಥಿಗಳು ರಚಿಸಿದ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಜನದನಿ ಸಂಚಾಲಕ ರವೀಶ್ ಕ್ಯಾತಬೀಡು, ಮನುಷ್ಯ ಪ್ರತಿಕ್ಷಣ ಹೊಸದೊಂದು ಶಿಕ್ಷಣವನ್ನು ಕಲಿಯಬೇಕಾಗಿದ್ದು, ಕಲಿಯುವ ಹಾಗೂ ಕಲಿಸುವ ಆಸಕ್ತಿ ಮುಖ್ಯ. ಶಿಕ್ಷಕರು ಮಕ್ಕಳೊಂದಿಗೆ ಕಲೆತು ಬೆರೆತು ತರಬೇತಿ ನೀಡಬೇಕಾಗಿದ್ದು ನಾವು ಬದುಕುವ ಜೀವನ ತೆರೆದಿಟ್ಟ ಪುಸ್ತಕವಾಗಬೇಕೆಂದರು.
ಯಾರು ಒಳ್ಳೆಯ ಕೆಲಸಕ್ಕೆ ಹೆಜ್ಜೆ ಹಾಕುವುದಲ್ಲಿವೊ ಅವನು ಮನುಷ್ಯನಾಗುವುದಿಲ್ಲ ಒಳ್ಳೆಯ ಸಮಾಜ ನಿರ್ಮಾಣ ಮಾಡಲು ಎಲ್ಲರೂ ಕೈ ಜೋಡಿಸುವ ಅಗತ್ಯವಿದೆಯೆಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಗೈಡ್ಸ್ ಆಯುಕ್ತ ಸಿ.ಎಂ. ಪಿಂಟೋ, ರಾಜ್ಯ ತರಬೇತಿ ಸಂಚಾಲಕಿ ಛಾಯಾ, ಜಿಲ್ಲಾ ಸಹಾಯಕ ಆಯುಕ್ತ ಭಾರತಿ ಶಿವರುದ್ರಪ್ಪ, ಜಿಲ್ಲಾ ಗೈಡ್ಸ್ ತರಬೇತಿ ಆಯುಕ್ತ ಸಿಸ್ಟರ್ ಸಿಂಧಿಯಾ, ಜಿಲ್ಲಾ ಸಂಚಾಲಕ ಕಿರಣ್ ಕುಮಾರ್ ಉಪಸ್ಥಿತರಿದ್ದರು.
ಕಾರ್ಯಕ್ರಮವು ಕುರಿತು ಗಿರಿಜಾ, ಮಧುರ ಹಾಗೂ ಆನಂದ್ ಅಭಿಪ್ರಾಯ ವ್ಯಕ್ತಪಡಿಸಿ 5 ದಿನಗಳ ತರಬೇತಿ ಬಹಳಷ್ಟು ಕಲಿಸಿದ್ದು ಇದೊಂದು ವಿಶಿಷ್ಟ ಅನುಭವವೆಂದರು. ಜಿಲ್ಲೆಯಲ್ಲಿ ವಿವಿಧ ನರ್ಸರಿ ಶಾಲೆಯ ಶಿಕ್ಷಕರು ಹಾಗೂ ವಿವಿಧ ಅಂಗನವಾಡಿಗಳಿಂದ ಸಹಾಯಕಿಯರು ತರಬೇತಿಯಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

