ಸಮಾನತೆ ಹರಿಕಾರ ಅಂಬೇಡ್ಕರ್
ಕ.ಪ್ರ ವಾರ್ತೆ, ಚಿಕ್ಕಮಗಳೂರು, ಏ. 14
ವಿಶ್ವದಲ್ಲೇ ಅತ್ಯಂತ ಪ್ರಗತಿಪರ ಸಂವಿಧಾನವನ್ನು ರಚಿಸಿದ ಬಾಬಾ ಸಾಹೇಬ್ ಅಂಬೇಡ್ಕರ್ ರವರು ವಿಶ್ವಮಾನ್ಯರಾಗಿದ್ದಾರೆ. ಸಮಾನತೆಯ ಹರಿಕಾರರಾಗಿ ಜಗತ್ತಿಗೆ ಸಂದೇಶವನ್ನು ನೀಡಿದ ಮಹಾನ್ ನಾಯಕರು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಲ್. ಮೂರ್ತಿ ಹೇಳಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲರೂ ಎಲ್ಲರನ್ನು ಪ್ರೀತಿಸಿದ್ದರೆ, ಗೌರವವಾಗಿ ಕಂಡಿದ್ದರೆ ಮೀಸಲಾತಿ ಅಗತ್ಯವಿರಲಿಲ್ಲ, ಶ್ರಮಿಕರನ್ನು ಕೆಳವರ್ಗದ ಜನರನ್ನು ಮೇಲೆ ತರುವಂತಹ ಕೆಲಸವಾಗಬೇಕು.
ಮೀಸಲಾತಿ ಹೋರಾಟ ಎಲ್ಲರನ್ನೂ ಒಗ್ಗೂಡಿಸಿ ಸಮಾನತೆಯನ್ನು ಸಾರುವ ದೃಷ್ಟಿಯಲ್ಲಿದ್ದು ಅಂಬೇಡ್ಕರ್ರವರು ಅದನ್ನೆ ಬಯಸಿದ್ದರು. ನಾವು ನೀವುಗಳೆಲ್ಲಾ ಸೇರಿ ಎಲ್ಲರನ್ನೂ ಪ್ರೀತಿಸಿ ಸಮಾನವಾಗಿ ಕಂಡು ಸಾಮಾಜಿಕ ಸಿದ್ದಾಂತದಡಿಯಲ್ಲಿ ಆಲೋಚಿಸುವ ಅಗತ್ಯವಿದೆಯೆಂದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಡಾ. ವಿಜಯಕುಮಾರ್ ಮಾತನಾಡಿ, ಶೋಷಣೆಗೆ ಒಳಗಾಗಿ ಅದರ ವಿರುದ್ಧ ಹೋರಾಟ ನಡೆಸಿ ದೇಶಕ್ಕೊಂದು ಉತ್ತಮ ಸಂವಿಧಾನ ರಚಿಸಿದ ಧೀಮಂತ ನಾಯಕರು ಎಂದು ತಿಳಿಸಿದರು.
ಮೂಡಿಗೆರೆ ಕ್ಷೇತ್ರದ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ಮಾತನಾಡಿ, ಅಣ್ಣ ತಮ್ಮಂದಿರಂತೆ ಬದುಕಬೇಕೆಂಬ ಆಶಯದಿಂದ ಸಂವಿಧಾನವನ್ನು ರಚಿಸಿ ಸಮಾನತೆಯನ್ನು ತರಲು ಹೋರಾಟ ನಡೆಸಿದ್ದು ಮಾನವೀಯತೆಯನ್ನು ಮೆರೆದವರೆಂದರು.
ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ವರ್ಗದ ಅಧ್ಯಕ್ಷ ಮಲ್ಲೇಶ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಎ.ಎನ್. ಮಹೇಶ್, ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ. ಮಹಮದ್, ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಧರ್ ಉರಾಳ್, ಜಿಲ್ಲಾ ದಲಿತ ಮುಖಂಡರಾದ ಚಿಕ್ಕಯ್ಯ, ಜಿಲ್ಲಾ ಕಾಂಗ್ರೆಸ್ ಕಿಸಾನ್ ಸೆಲ್ ಅಧ್ಯಕ್ಷ ಚಂದ್ರೇಗೌಡ, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ವೆಂಕಟೇಶ್ ನಾಯ್ಡು, ಬಿ.ಎಸ್. ಮಹಮದ್ ಉಪಸ್ಥಿತರಿದ್ದರು.
ಜಿಲ್ಲಾ ಎಸ್ಸಿ, ಎಸ್ಟಿ. ಘಟಕದ ಕಾರ್ಯದರ್ಶಿ ರಾಮಚಂದ್ರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

