ಕಡೂರು ಕಣದಲ್ಲಿ 9 ಅಭ್ಯರ್ಥಿಗಳು
ಕನ್ನಡ ಪ್ರಭ ವಾರ್ತೆ ಟಿ ಕಡೂರು ಟಿ ಏ.20
ಕಡೂರು ವಿಧಾನಸಭಾ ಕ್ಷೇತ್ರದ ನಾಮಪತ್ರ ವಾಪಸಾತಿ ದಿನವಾದ ಶನಿವಾರ ಮೂವರು ನಾಮಪತ್ರ ಹಿಂಪಡೆಯುವ ಮೂಲಕ 9 ಮಂದಿ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ ಎಂದು ಚುನಾವಣಾಧಿಕಾರಿ ಲಕ್ಷ್ಮೀನರಸಯ್ಯ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿಯ ಚುನಾವಣಾ ಕಚೇರಿಯಲ್ಲಿ ಮಾಹಿತಿ ನೀಡಿದ ಅವರು, ಚುನಾವಣಾ ಕಣದಿಂದ ಸ್ಫರ್ಧೆ ಬಯಸಿದ್ದ 12 ಅಭ್ಯರ್ಥಿಗಳಲ್ಲಿ ಪಕ್ಷೇತರ ಅಭ್ಯರ್ಥಿಗಳಾದ ಜನಾರ್ದನರಾವ್, ಗಿರೀಶ್ ಜಿ. ಉಪ್ಪಾರ್ ಮತ್ತು ಶಿವರುದ್ರಪ್ಪ ನಾಮಪತ್ರ ಹಿಂಪಡೆದವರು.
ಕಣದಲ್ಲಿ ವೈ.ಎಸ್.ವಿ. ದತ್ತ (ಜೆಡಿಎಸ್), ಬೀರೂರು ದೇವರಾಜ್ (ಬಿಜೆಪಿ), ಕೆ.ಬಿ. ಮಲ್ಲಿಕಾರ್ಜುನ್ (ಕಾಂಗ್ರೆಸ್), ಕೆ.ಎಂ. ಕೆಂಪರಾಜು (ಬಿ.ಎಸ್.ಆರ್.ಕಾಂಗ್ರೆಸ್) , ಕೆ.ಎಸ್. ಬೆಳ್ಳಿ ಪ್ರಕಾಶ್ (ಬಿ.ಎಸ್.ಆರ್.ಕಾಂಗ್ರೆಸ್), ಬಿ.ಎಂ.ಮಧು (ಲೋಕಸತ್ತಾ ಪಕ್ಷ) ಟಿ.ಬಿ.ರವಿ ನಾಯ್ಕ, ಕೆ.ಆರ್. ಗಂಗಾಧರಪ್ಪ, ಕೆ.ಎಚ್. ನಾಗರಾಜು (ಪಕ್ಷೇತರ) ಅಭ್ಯರ್ಥಿಗಳಾಗಿ ಕಣದಲ್ಲಿ ಉಳಿದಿದ್ದಾರೆ.
ಚುನಾವಣೆ ವೀಕ್ಷಕ ಬಾದಲ್ ಚಟರ್ಜಿ ಮತ್ತು ಸಹಾಯಕರಾದ ರಿಯಾಜ್ ಅಹಮದ್ ಅವರು ಹಾಜರಿದ್ದ ಸಭೆಯಲ್ಲಿ ಎಲ್ಲಾ ಪಕ್ಷಗಳ ಅಭ್ಯರ್ಥಿ ಮತ್ತು ಏಜೆಂಟರ ಸಭೆಯಲ್ಲಿ ಚುನಾವಣೆ ಕುರಿತು ಮಾತನಾಡಿದ ಚುನಾವಣಾಧಿಕಾರಿಗಳು ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ನೀತಿಸಂಹಿತೆ ಉಲ್ಲಂಘನೆಯಾಗಿರುವ ಘಟನೆಗಳು ಎಲ್ಲೂ ನಡೆದಿಲ್ಲ ಎಂದರು.
ಚುನಾವಣೆ ಶಾಂತಿಯುತವಾಗಿ ನಡೆಯುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದಿಂದ ಎಲ್ಲಾ ರೀತಿಯಲ್ಲಿ ಸಜ್ಜುಗೊಳಿಸಲಾಗಿದೆ. ಅಭ್ಯರ್ಥಿಗಳು ಪಟ್ಟಣ ಅಥವಾ ಗ್ರಾಮಾಂತರ ಪ್ರದೇಶಗಳ ಸಾರ್ವಜನಿಕ ಸಭೆಗಳಲ್ಲಿ ಯಾವುದೇ ವ್ಯಕ್ತಿಯನ್ನು ವೈಯಕ್ತಿವಾಗಿ ಟೀಕಿಸುವುದು ಮತ್ತು ನಿಂದಿಸುವಂತಿಲ್ಲ ಅಥವಾ ಯಾವುದೇ ಧರ್ಮದ ಕುರಿತು ಕೋಮು ಪ್ರಚೋದನೆ ನೀಡುವಂತಹ ಯಾವುದೇ ಭಾಷಣ ಮಾಡುವಂತಿಲ್ಲ ಎಂದು ಸೂಚಿಸಿ ಅಭ್ಯರ್ಥಿಗಳು ಮತ್ತು ಏಜೆಂಟರ ಕರ್ತವ್ಯಗಳನ್ನು ಸಭೆಯಲ್ಲಿ ವಿವರ ನೀಡಲಾಯಿತು. ಪಕ್ಷಗಳ ಅಭ್ಯರ್ಥಿ, ಪಕ್ಷೇತರ ಅಭ್ಯರ್ಥಿ, ತಾ. ದಂಡಾಧಿಕಾರಿ ಶಾರದಾಂಬಾ, ಸಿಬ್ಬಂದಿ ಮೂರ್ತಿ, ಗುರುರಾಜ ಹಾಲ್ಮತ್, ಪ್ರಕಾಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

