ಚಿಕ್ಕಮಗಳೂರು

ವಿಚಿತ್ರ ಜ್ವರ: ಜನರಲ್ಲಿ ಆತಂಕ

Published On :

ಕಪ್ರ ವಾರ್ತೆ, ಶಿರಾಳಕೊಪ್ಪ, ಏ.22
ತಾಲೂಕಿನಲ್ಲಿ ಕೆಲವರಿಗೆ ನಿರಂತರ ಜ್ವರ ಕಾಣಿಸಿದ್ದು, ಡೆಂಘೀ ಜ್ವರ ಎಂದು ಚಿಕಿತ್ಸೆ ನೀಡಲಾಗಿದೆ. ಕೆಲವು ಭಾಗದಲ್ಲಿ ನಿರಂತರ ಜ್ವರ ಕಂಡುಬಂದಿದ್ದು ಡೆಂಘೀ ಇರುವ ಬಗ್ಗೆ ವೈದ್ಯರೊಬ್ಬರು ಖಚಿತಪಡಿಸಿದ್ದಾರೆ.
 ಸೋಮವಾರ ಶಿರಾಳಕೊಪ್ಪ ಸರ್ಕಾರಿ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿದ ತಾಲೂಕು ವೈದ್ಯಾಧಿಕಾರಿಗಳು ಪ್ರತಿವರ್ಷ ಬೇಸಿಗೆ ಸಮಯದಲ್ಲಿ ಈ ಭಾಗದಲ್ಲಿ ಇಂತಹ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಅವುಗಳಿಗೆ ವೈರಲ್ ಫಿವರ್ ಎಂದು ಚಿಕಿತ್ಸೆ ಕೊಡಲಾಗುತ್ತಿದೆ. ಆದರೆ ಕೆಲವು ಖಾಸಗಿ ವೈದ್ಯರು ಭಯಹುಟ್ಟಿಸುವ ಕಾರ್ಯ ಮಾಡುತ್ತಿದ್ದು, ಈ ಬಗ್ಗೆ ಜನರು ಎಚ್ಚರಿಕೆ ವಹಿಸಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯ ಬೇಕು ಎಂದು ತಿಳಿಸಿದ್ದಾರೆ.
ಯಾವದೇ ಜ್ವರ ಬಂದಾಗ ಅದಕ್ಕೆ ವೈರಲ್ ಫಿವರ್ ಎಂದು ಚಿಕಿತ್ಸೆ ಪ್ರಾರಂಭಿಸಿ ನಂತರ ಅನುಮಾನ ಕಂಡುಬಂದಲ್ಲಿ ರೋಗಿಗಳ ರಕ್ತವನ್ನು ಶಿವಮೊಗ್ಗದಲ್ಲಿರುವ ವಿಡಿಎಲ್ ಪರೀಕ್ಷೆಗೆ ಕಳಿಸಿಕೊಡುತ್ತೇವೆ.
ಅಲ್ಲಿ ಪರಿಕ್ಷೆ ನಡೆಸಿ ಅವರು ಡೆಂಘೀ ಎಂದು ಖಾತರಿಪಡೆಸಿದಾಗ ಮಾತ್ರ ನಾವು ಅವರನ್ನು ಡೆಂಘೀ ಪೀಡಿತರು ಎಂದು ಗುರುತಿಸುತ್ತೇವೆ. ವೈರಲ್ ಫೀವರ್ ಇದ್ದಲ್ಲಿ ಅವರ ದೇಹದಲ್ಲಿ ಪ್ಲೇಟ್ ಲೇಟ್ ಕಡಿಮೆ ಯಾಗುತ್ತವೆ. ಆಗ ಸರ್ಕಾರಿ ಆಸ್ಪತ್ರೆಯಲ್ಲಿ ಪ್ಲೂಯಡ್ಸ್ ಉಪಯೋಗಿಸಿ ನಂತರ ಓಷಧ ಉಪಚಾರ ಮಾಡುತ್ತೇವೆ. ಆಗ ಜ್ವರ ಹತೋಟಿಗೆ ಬರುತ್ತದೆ.
ಆದರೆ ಕೆಲವು ಖಾಸಗಿ ವೈದ್ಯರು ರೋಗಿಗಳಿಗೆ ಡೆಂಘೀ ಇದೆ ಎಂದು ಹೇಳಿ ಚಿಕಿತ್ಸೆ ಕೊಡುತ್ತಾರೆ. ಇದು ತಪ್ಪು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.