ಚಿಕ್ಕಮಗಳೂರು

ಕಾಂಗ್ರೆಸ್ ನಾಯಕರ ವಾಗ್ದಾಳಿ

Published On :

ಚಿಕ್ಕಮಗಳೂರು: ಭ್ರಷ್ಟರು, ಸ್ವಜನಪಕ್ಷಪಾತಿಗಳು, ಜೈಲಿಗೆ ಹೋಗಿ ಬಂದವರು, ರಾಜ್ಯದ ಮಾನಮರ್ಯಾದೆ ಹರಾಜ್ ಆಗಿದೆ.
ಹೀಗೆ ಆರೋಪಗಳ ಸುರಿಮಳೆಯನ್ನು ಕಾಂಗ್ರೆಸ್‌ನ ದಂಡ ನಾಯಕರು ಜಿಲ್ಲಾ ಆಟದ ಮೈದಾನದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರದಲ್ಲಿ ಸುರಿಸಿದರು.
ರಾಜ್ಯ ಸರ್ಕಾರದಲ್ಲಿ ದುರಾಡಳಿತ, ಸ್ವಜನಪಕ್ಷಪಾತ ಮುಗಿಲು ಮುಟ್ಟಿದೆ. ಈ ರೀತಿಯ ಭ್ರಷ್ಟಚಾರ ಹಿಂದೆಂದೂ ರಾಜ್ಯದ ಜನತೆ ಕಂಡಿರಲಿಲ್ಲ. ಕೆಲವರು ಜೈಲಿಗೆ ಹೋಗಿ ಬಂದಿರುವುದನ್ನು ಕಂಡಿದ್ದೇವೆ. ಇದರಿಂದ ಜನ ಪರಿತಪಿಸುತ್ತಿದ್ದಾರೆ. ಈ ದುರಾಡಳಿತ ಕೊನೆಗೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಪ್ರಚಾರ ಭಾಷಣದಲ್ಲಿ ಹೇಳಿದರು.
ಮುಂದಿನ ದಿನಗಳಲ್ಲಿ ಪರಿಹಾರ: ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಹಲವು ಜನಪರ ಕೆಲಸ ಮಾಡಿದೆ ಎಂದು ಹೇಳಿದ ಅವರು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಡಕೆಗೆ ಹಳದಿ ಎಲೆ ರೋಗ ಬಂದಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.
ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಇಂತಹ ಕೆಟ್ಟ ಸರ್ಕಾರ ಹಿಂದೆಂದೂ ಕಂಡಿರಲಿಲ್ಲ. ಮುಂದೆ ಕಾಣಲು ಸಾಧ್ಯವಿಲ್ಲ. ಈ ಸರ್ಕಾರದಲ್ಲಿದ್ದ ಸಚಿವರು ವಿಧಾನಸಭೆಯಲ್ಲಿ ಬ್ಲೂಫಿಲಂ ನೋಡುವ ಮೂಲಕ ರಾಜ್ಯದ ಮಾನಮರ್ಯಾದೆಯನ್ನು ಹರಾಜ್ ಮಾಡಿದ್ದಾರೆ. ಕಳೆದ ಬಾರಿ ಬಿಜೆಪಿಗೆ ವೋಟ್ ಮಾಡಿದ ಜನರು ಪಶ್ಚಾತ್ತಾಪ ಪಡುತ್ತಿದ್ದಾರೆ. ಈಗ ಬಂದಿರುವ ಸುವರ್ಣ ಅವಕಾಶವನ್ನು ಬಳಸಿಕೊಂಡು ಕಾಂಗ್ರೆಸ್‌ಗೆ ವೋಟ್ ಮಾಡಿ ಎಂದರು.
ವಿಧಾನಪರಿಷತ್ ಸದಸ್ಯೆ ಮೋಟಮ್ಮ ಮಾತನಾಡಿ, ಇದು, ಸಮರ ಮತ್ತು ಸವಾಲಿನ ಸಂದರ್ಭ. ಮೈ ಮರೆಯಬೇಡಿ, ಯೋಗ್ಯರನ್ನು ಆಯ್ಕೆ ಮಾಡಿ ಎಂದು ಹೇಳಿದರು.
ಕೋಟಿ ಕೋಟಿ ರುಪಾಯಿ ಕೊಟ್ಟು ಶಾಸಕರನ್ನು ಖರೀದಿಸಿ ಆಪರೇಷನ್ ಕಮಲ ಮಾಡಿರುವ ಬಿಜೆಪಿಯ ಧನ ಬಲ ನಾಶವಾಗಬೇಕು. ಜನ ಬಲ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಮಾಜಿ ಸಚಿವ ಸಿ.ಆರ್. ಸಗೀರ್ ಅಹಮದ್ ಮಾತನಾಡಿ, ಬಿಜೆಪಿಯ ಹಡಗು ಮುಳುಗುತ್ತಿದೆ. ಸ್ವಾಭಿಮಾನ ಮತ್ತು ಸಂಸ್ಕೃತಿಗೆ ಧಕ್ಕೆ ತರುವ ಕೆಲಸ ಬಿಜೆಪಿಯಿಂದ ಆಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.