ಮೌನದ ಮಹಾಯಾತ್ರೆ ಮುಕ್ತಾಯ
ತರೀಕೆರೆ: ಸಮೀಪದ ಗೋಣಿಬೀಡು ಗ್ರಾಮದ ಭದ್ರಾ ನದಿಯ ಎಡದಂಡೆಯ ಸುಂದರ ಪ್ರಕೃತಿಯಲ್ಲಿ 900 ವರ್ಷಗಳ ಹಿಂದೆ ಸ್ಥಾಪಿತಗೊಂಡಿರುವ ಶೀಲ ಸಂಪಾದನಾ ಮಠದ ಮ.ನಿ.ಪ್ರ. ಸಿದ್ದಲಿಂಗ ಸ್ವಾಮಿಯವರು ಸತತ ಮೂರು ವರ್ಷ ಮೂರು ತಿಂಗಳು ಕೈಗೊಂಡಿದ್ದ ಮೌನಾನುಷ್ಠಾನದ ಮುಕ್ತಾಯದ ಅಂಗವಾಗಿ ಶ್ರೀಮಠದ ಆವರಣದಲ್ಲಿ ಭಕ್ತರಿಗೆ ಗುರುದರ್ಶನ ಸಮಾರಂಭವನ್ನು ಏರ್ಪಡಿಸಲಾಗಿತ್ತು.
ದಾಖಲೆಗಳಲ್ಲಿ ಸೇರ್ಪಡೆ: ಕೋಡೀಮಠದ ಶ್ರೀಗಳಾದ ಶಿವಾನಂದ ಶಿವಯೋಗಿ ಸ್ವಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಮೂರು ವರ್ಷಗಳ ಕಾಲ ಮೌನ ಅನುಷ್ಠಾನ ಮಾಡಿರುವುದು ಭಾರತದ ಧಾರ್ಮಿಕ ಪರಂಪರೆಯ ದಾಖಲೆಗಳಲ್ಲಿ ಸೇರ್ಪಡೆಗೊಂಡಿದೆ. ಇದು ಸಾಮಾನ್ಯ ಸಾಧನೆಯಲ್ಲ, ಈ ಮಠದ ಪರಂಪರೆಯಲ್ಲಿ ಆಗಿ ಹೋದ ಮಹಾ ತಪಸ್ವಿಗಳಾದ ಸಿದ್ದವೀರ ಮಹಾಸ್ವಾಮಿಗಳ ತಪೋಶಕ್ತಿ ಇವರಿಗೆ ಚೈತನ್ಯ ಮತ್ತು ಬಲ ತುಂಬಿದೆ ಎಂದು ತಿಳಿಸಿದರು.
ಹುಬ್ಬಳ್ಳಿ ಮೂರು ಸಾವಿರ ಮಠದ ಶ್ರೀಗಳು ಮಾತನಾಡಿ, ಪೂಜ್ಯರ ಸಾಧನೆ ಅದ್ಬುತವಾದದ್ದು, ಯೋಗಿಗಳು ಹಿಮಾಲಯವನ್ನು ಆಧರಿಸಿ ಹೋಗಿ ಆಧ್ಯಾತ್ಮಿಕ ಸಾಧನೆಗೈದರೆ, ಗೋಣಿಬೀಡು ಮಠದ ಪೂಜ್ಯರು, ತಾವು ಇದ್ದ ಮಠದಲ್ಲಿಯೇ ಅಗಾಧವಾದ ಸಾಧನೆ ಮಾಡಿ ಹಿಮಾಲಯದ ಯೋಗಿಗಳ ಮಟ್ಟವನ್ನು ತಲುಪಿದ್ದಾರೆ ಎಂದು ತಿಳಿಸಿದರು.
ಯಡಿಯೂರು ಶ್ರೀಗಳು ಮಾತನಾಡಿ, ದೀರ್ಘಾನುಷ್ಠಾನ ವಿದ್ಯೆಯಲ್ಲಿ, ಯೋಗದಲ್ಲಿ, ಶಿವಪೂಜೆಯಲ್ಲಿ ಶಕ್ತಿಗಳಿಸಿಕೊಳ್ಳಲು ಮುಖ್ಯ. ಧ್ಯಾನ ಮೌನ, ಉಪವಾಸ ಹಾಗೂ ಏಕಾಂತ ಅಂತಃಸತ್ವವನ್ನು ಹೆಚ್ಚಿಸುತ್ತದೆ. ಇದರಿಂದ ವ್ಯಕ್ತಿ ಸಾಧಕನಾಗುತ್ತಾನೆ ಎಂದು ತಿಳಿಸಿದರು.ಕಾಳೇನಹಳ್ಳಿ ಶ್ರೀಗಳು, ಬಿಳಕಿ ಶ್ರೀಗಳು, ಹುಣಸಘಟ್ಟ, ಕುಪ್ಪೂರು, ಯಡಿಯೂರು, ತಾವರೆಕೆರೆ, ಗೊಂದಿ, ಮೇಟಿಕುರ್ಕೆ, ಕೆ. ಬಿದರೆ, ಮಾದಿಹಳ್ಳಿ, ಭದ್ರಗಿರಿ, ಶಿವಮೊಗ್ಗ, ಶಿಖಾರಿಪುರ, ಹಿರಿಯೂರು, ಸಾಲೂರು, ಚನ್ನಗಿರಿ ಶ್ರೀ ಮಠದ ಪೂಜ್ಯರು ಆಶೀರ್ವಚನ ನೀಡಿದರು. ಚಂದ್ರಶೇಖರ ನಾರಾಯಣಪುರ ಅವರ ಅನುಷ್ಠಾನ ಎಂಬ ಪುಸ್ತಕವನ್ನು ಬಿಡುಗೆಡೆಗೊಳಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

