ಚಿಕ್ಕಮಗಳೂರು

ಅರಣ್ಯಕ್ಕಾಗಿ 24,000 ಗಿಡ ಬಳಕೆ

Published On :

ಕ.ಪ್ರ.ವಾರ್ತೆ, ಸಾಗರ, ಆ.2
ಅರಣ್ಯೀಕರಣಕ್ಕಾಗಿ ತಾಲೂಕಿನಲ್ಲಿ 33 ,000 ಗಿಡ ಬೆಳೆಸಲಾಗಿದ್ದು, ಈ ಪೈಕಿ 24 ಸಾವಿರ ಗಿಡಗಳನ್ನು ಬಳಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ರಾಮಕೃಷ್ಣಪ್ಪ ಹೇಳಿದರು.
ತಾಲೂಕಿನ ವರದಹಳ್ಳಿ ಶ್ರೀಧರಾಶ್ರಮದಲ್ಲಿ ಗ್ರಾಮ ಅರಣ್ಯ ಸಮಿತಿ, ಮರಡವಳ್ಳಿಯ ಶರಾವತಿ ವಲಯಾಭಿವೃದ್ಧಿ ಸಮಿತಿ, ವೃಕ್ಷಲಕ್ಷ ಆಂದೋಲನ ಹಾಗೂ ಶ್ರೀಧರ ಸೇವಾ ಮಹಾಮಂಡಲ ಹಮ್ಮಿಕೊಂಡಿದ್ದ ಹಲಸು ವೃಕ್ಷಾರೋಹಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
14 ಸಾವಿರ ಎಕರೆ: ತಾಲೂಕಿನಲ್ಲಿ 14 ಸಾವಿರ ಎಕರೆ ಅರಣ್ಯ ಪ್ರದೇಶ ಗುರುತಿಸಲಾಗಿದ್ದು, ಕಾನು ಅರಣ್ಯ ಸಮಿತಿ  ಮೂಲಕ ಅವುಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದೆ. ಒಂದು ರೂ ಸಾಂಕೇತಿಕ ಶುಲ್ಕ ಅಥವಾ ಸಮುದಾಯದ ಮೂಲಕ ಅರಣ್ಯೀಕರಣಕ್ಕೆ ಮುಂದಾದರೆ ಉಚಿತವಾಗಿ ಇನ್ನಷ್ಟು ಸಸಿ ಒದಗಿಸಲು ಇಲಾಖೆ ಸಿದ್ಧವಿದೆ ಎಂದು ಹೇಳಿದರು.
ಸಹ್ಯಾದ್ರಿ ಶ್ರೇಣಿ ಅಪ್ಪೇಮಿಡಿ ಒಕ್ಕೂಟದ ಅಧ್ಯಕ್ಷ ಗಣೇಶ್ ಕಾಕಾಲ್, ಬೆಳೆಸುವ ವಿಚಾರಕ್ಕಿಂತ ಸದ್ಯ ಹಲಸನ್ನು ಬಳಸುವ ವಿಚಾರದಲ್ಲಿ ಹೆಚ್ಚಿನ ಆಂದೋಲನವಾಗಬೇಕಿದೆ. ಈಗಿನ ಮಾಹಿತಿಯ ಪ್ರಕಾರ ಶೇ. 90ರಷ್ಟು ಹಲಸು ಬಳಕೆಯಾಗದೆ ವ್ಯರ್ಥವಾಗುತ್ತಿದೆ. ಹಿಂದೆ ಮಾವಿನಮಿಡಿಯಲ್ಲಿ ಮಾಡಿದ ಮೌಲ್ಯವರ್ಧನೆಯಂತೆ ಹಲಸಿನಲ್ಲೂ ಚಿಪ್ಸ್, ಹಪ್ಪಳಗಳಂಥವನ್ನು ವ್ಯಾಪಕವಾಗಿ ಪ್ರಚಾರ ಮಾಡುವ ಅಗತ್ಯವಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.