ಚಿಕ್ಕಮಗಳೂರು

'ಪರಿಶ್ರಮದಿಂದ ಕೆಲಸ ಮಾಡಿ'

Published On :

ಕ.ಪ್ರ.ವಾರ್ತೆ  ಚಿಕ್ಕಮಗಳೂರು  ಆ.8
ಅಧಿಕಾರಿ ಮತ್ತು ಸಿಬ್ಬಂದಿ ಹೊಂದಾಣಿಕೆ ಹಾಗೂ ಪರಿಶ್ರಮದಿಂದ ಕಾರ್ಯನಿರ್ವಹಿಸಿದರೆ ಮಾತ್ರ ಇಲಾಖೆಗೆ ಒಳ್ಳೆಯ ಹೆಸರು ಬರಲು ಸಾಧ್ಯ ಎಂದು ವಲಯ ಅರಣ್ಯಾಧಿಕಾರಿ ಎಚ್.ಕೆ. ಜಯಕುಮಾರ್ ಹೇಳಿದರು.
ಚಿಕ್ಕಮಗಳೂರಿನಿಂದ ಆಲ್ದೂರು ವಲಯಕ್ಕೆ ವರ್ಗವಣೆಗೊಂಡ ಹಿನ್ನೆಲೆಯಲ್ಲಿ ನಗರದ ವಲಯಾರಣ್ಯಧಿಕಾರಿ ಕಚೇರಿಯಲ್ಲಿ ಸಿಬ್ಬಂದಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಚ್ಯುತಿ ಬಾರದಂತೆ ಕೆಲಸ: ಖಾಕಿ ಧರಿಸುವ ಭಾಗ್ಯ ದೊರೆಯುವುದೇ ಅದೃಷ್ಟ, ಅದಕ್ಕೆ ಚ್ಯುತಿ ಬಾರದಂತೆ ಎಚ್ಚರ ವಹಿಸಿ ಕೆಲಸ ಮಾಡಲು ಹೇಳಿದ ಅವರು, ನಮ್ಮ ವಲಯದಲ್ಲಿ 50 ಸಾವಿರ ಎಕರೆ ಮೀಸಲು ಅರಣ್ಯವಿದೆ. ಸಿಬ್ಬಂದಿ ಶ್ರಮದಿಂದ 2 ಸಾವಿರ ಎಕರೆ ಪ್ಲಾಂಟೇಶನ್ ಕಾರ್ಯ ಪೂರ್ಣಗೊಂಡಿದೆ ಎಂದರು.
ವನ ಸಂಪತ್ತು ದೋಚುವವರಿಗೆ ಕೇಸು ಹಾಕೋದು ದೊಡ್ಡದಲ್ಲ. ಅದಕ್ಕೆ ಪೂರಕ ಸಾಕ್ಷಿ ಒಗದಿಸಿ ಶಿಕ್ಷೆಯಾದಾಗ ಇಲಾಖೆ ಬಗ್ಗೆ ಗೌರವ ಹೆಚ್ಚುತ್ತದೆ ಎಂದು ಹೇಳಿದರು.
ನೂತನವಾಗಿ ಅಧಿಕಾರ ಸ್ವೀಕರಿಸಿದ ಆರ್ಎಫ್ಒ ಅಬ್ದುಲ್ ಅಜೀಜ್ ಮಾತನಾಡಿ, ಸರ್ಕಾರಿ ಕೆಲಸದಲ್ಲಿ ವರ್ಗಾವಣೆ ಮತ್ತು ನಿವೃತ್ತಿ ಪ್ರಕ್ರಿಯೆ ಅನಿವಾರ್ಯ.
 ಕರ್ತವ್ಯದಲ್ಲಿದ್ದಾಗ 3 ಭಾಗವಾಗಿ ನಾವೇ ವಿಂಗಡಿಸಿಕೊಂಡು  ಆರಂಭದ 10 ವರ್ಷ ಕಸರತ್ತು, ನಂತರ ಬುದ್ದಿವಂತಿಕೆ, ಉಳಿದ 10 ವರ್ಷ ಸಂಯಮದಿಂದ ಕಾರ್ಯ  ನಿರ್ವಹಿಸಿ ನಿಷ್ಠೆಯಿಂದ ಕೆಲಸ ಮಾಡಬೇಕು ಎಂದರು.
ನೀರು, ಹಸಿರು, ಪ್ರಾಣಿ, ಪಕ್ಷಿ, ಪ್ರಕೃತಿ ರಕ್ಷಣೆಯಂತಹ ಪುಣ್ಯದ ಕೆಲಸ ಮಾಡುತ್ತಿದ್ದೇವೆ. ವೃತ್ತಿಯಲ್ಲಿ ಅಸೂಯೆ ಪಡದೆ ಪ್ರಾಮಾಣಿಕ ಸೇವೆ ಸಲ್ಲಿಸಿದರೆ ಜೀವನದಲ್ಲಿ ಸಾರ್ಥಕತೆ ಕಾಣಬಹುದು ಎಂದರು.
ಅನ್ಯ ವಲಯಕ್ಕೆ ವರ್ಗಾವಣೆಗೊಂಡ ಉಪ ವಲಯಾರಣ್ಯಾಧಿಕಾರಿ ಎಸ್.ಎಂ. ಕೆಂಚೇಗೌಡ, ಎ.ಆರ್. ಪ್ರಮೀಳಾ, ರಾಧಮ್ಮ, ದಿನೇಶ್, ಲೋಕಶೆಟ್ಟಿಯವರನ್ನು ಇದೇ ಸಂದರ್ಭದಲ್ಲಿ ಗೌರವಿಸಿ ಬೀಳ್ಕೊಡಲಾಯಿತು.  ಆರ್ಎಫ್ಒ ಶಿವರಾತ್ರೇಶ್ವರ ಸ್ವಾಮಿ ಮಾತನಾಡಿದರು. ಚಂದ್ರಶೇಖರ್ ಸ್ವಾಗತಿಸಿದರು. ಶಿವಪ್ಪ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.