ಚಿಕ್ಕಮಗಳೂರು

ಯೋಜನೆ ಸದುಪಯೋಗಕ್ಕೆ ಮನವಿ

Published On :

ಕ.ಪ್ರ.ವಾರ್ತೆ , ನ.ರಾ.ಪುರ ,ಆ.9
ಸರ್ಕಾರವು ವಿವಿಧ ಯೋಜನೆಗಳಿಗಾಗಿ ಸ್ವಸಹಾಯ ಸಂಘಗಳಿಗೆ ನೀಡುವ ಸಹಾಯ ಧನವನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸದೃಢವಾಗಬೇಕು ಎಂದು ಶೆಟ್ಟಿಕೊಪ್ಪ ವೆಂಕಟೇಶ್ವರ ಕೆರೆ ಬಳಕೆದಾರರ ಸಂಘದ ಅಧ್ಯಕ್ಷ ಬಿ.ಕೆ. ಉದಯಕರ್ ಕರೆ ನೀಡಿದರು.
ಅವರು ಗುರುವಾರ ಶೆಟ್ಟಿಕೊಪ್ಪದ ಜಲ ಸಂವರ್ದನಾ ಯೋಜನಾ ಸಂಘದ ಕಚೇರಿಯ ಆವರಣದಲ್ಲಿ ವೆಂಕಟೇಶ್ವರ ಕೆರೆ ಬಳಕೆದಾರರ ಸಂಘದ ವ್ಯಾಪ್ತಿಯ 7 ವಿವಿಧ ಸ್ವಸಹಾಯ ಸಂಘಗಳಿಗೆ ತಲಾ 15 ಸಾವಿರ ಸಹಾಯ ಧನದ  ಚೆಕ್ ವಿತರಿಸಿ ಮಾತನಾಡಿದರು. ಸಮುದಾಯ ಆಧಾರಿತ ಆದಾಯೋತ್ಪನ್ನ ಚಟುವಟಿಕೆಗಳಿಗೆ ಈ ಸಹಾಯ ಧನವನ್ನು ನೀಡಲಾಗಿದೆ. ಸ್ವಸಹಾಯ ಸಂಘದ ಅಭಿವೃದ್ಧಿಗೆ ಅಥವಾ ವೈಯಕ್ತಿಕವಾಗಿಯೂ ಈ ಸಹಾಯಧವನ್ನು ಬಳಸಿಕೊಳ್ಳಬಹುದು ಎಂದು ಸಲಹೆ ನೀಡಿದರು.
ಸಭೆಯಲ್ಲಿ ವೆಂಕಟೇಶ್ವರ ಕೆರೆ ಬಳಕೆದಾರರ ಸಂಘದ ಕಾರ್ಯದರ್ಶಿ ಕೆ.ಟಿ. ಸುರೇಂದ್ರ, ಖಜಾಂಚಿ ಶೈನಿ ಯಹನಾನ್, ಸದಸ್ಯರಾದ ಬಿ.ಕೆ. ರವೀಂದ್ರ, ಎ.ಬಿ. ಚಂದ್ರಶೇಖರ್, ಎಂ. ಮಹೇಶ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.