ನಾಳೆ ಪ್ರಬಂಧ ಸ್ಪರ್ಧೆ
ಕಡೂರು: ಆ. 15ರಂದು ಕಡೂರು ಪಟ್ಟಣದ ದಿ ಗ್ಲಾಮರ್ ಕೇರ್ ಮತ್ತು ಸ್ನೇಹ ಗ್ರೂಪ್ನಿಂದ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಡೆಸಿದ ಪ್ರಬಂದ ಸ್ಪರ್ಧೆಯ ಸಮಾರೋಪ ಸಮಾರಂಭವು ಕಡೂರು ಟಿ.ಬಿ. ರಸ್ತೆಯ ಸಿದ್ದಾರ್ಥ ಕಾಂಪ್ಲೆಕ್ಸ್ನ ನನ್ನವ್ವ ಸಭಾಂಗಣದಲ್ಲಿ ನಡೆಯಲಿದೆ. ಸಂಜೆ 4 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪ್ರೇಮಾ ಶಂಕರ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಡೂರು ಎಪಿಎಂಸಿ ನಿರ್ದೇಶಕ ಹಾಗು ಮಾಜಿ ತಾ.ಪ.ಅಧ್ಯಕ್ಷ ಹೆಚ್.ಎಂ.ರೇವಣ್ಣಯ್ಯ, ಉಪನ್ಯಾಸಕ ಎ.ಸಿ. ರುದ್ರಯ್ಯ, ಮತ್ತಿತರರು ಭಾಗವಹಿಸಲಿದ್ದಾರೆ.
18ಕ್ಕೆ ಯಕ್ಷಗಾನ
ಚಿಕ್ಕಮಗಳೂರು: ಜಿಲ್ಲಾ ಮೊಗವೀರ ಮಹಾಜನ ಸಂಘದ ಆಶ್ರಯದಲ್ಲಿ ನಗರದ ಕುವೆಂಪು ಕಲಾಮಂದಿರದಲ್ಲಿ ಆ.18 ರಂದು ಸಂಜೆ 5.30ಕ್ಕೆ ಕುಂದಾಪುರದ ಶ್ರೀ ಮಹಾಗಣಪತಿ ಯಕ್ಷಗಾನ ಪ್ರವಾಸಿ ಕಲಾ ತಂಡದಿಂದ ಮೇಘ ಮಯೂರಿ ಎಂಬ ಸಾಮಾಜಿಕ ಕಾಲಮಿತಿ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ಹಾಲಾಡಿಯ ಜಿ. ರಾಘವೇಂದ್ರ ಮಯ್ಯ, ಸಂಗೀತದಲ್ಲಿ ತೆಗ್ಗರ್ಸೆ ಗಣೇಶ ಶೆಟ್ಟಿ ಬೆಳ್ವೆ ಮತ್ತು ಯೋಗೇಂದ್ರ ಆಚಾರ್ಯ, ಮದ್ದಳೆ ವಾದಕರಾಗಿ ಯಲ್ಲಾಪುರದ ಚಂದ್ರಶೇಖರ ಭಟ್, ಚಂಡೆವಾದಕರಾಗಿ ಕಾಡೂರಿನ ರವೀಂದ್ರ ಆಚಾರ್ಯ ಭಾಗವಹಿಸಲಿದ್ದಾರೆ ಎಂದು ಸಂಘದ ಅಧ್ಯಕ್ಷ ಕೆ. ರಾಮಣ್ಣ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವೈಜ್ಞಾನಿಕ ಚಿಂತನೆಗೆ ವಿಜ್ಞಾನ ಸಹಕಾರಿ
ನರಸಿಂಹರಾಜಪುರ: ನಾಟಕದ ಮೂಲಕ ವೈಜ್ಞಾನಿಕ ಚಿಂತನೆ ನಡೆಸಲು ವಿಜ್ಞಾನ ನಾಟಕ ಸ್ಪರ್ಧೆಯು ಅನುಕೂಲವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್. ರಮೇಶ್ ತಿಳಿಸಿದರು. ಅವರು ಮಂಗಳವಾರ ಜ್ವಾಲಾಮಾಲಿನಿ ಬಾಲಿಕಾ ಪ್ರೌಢ ಶಾಲೆಯ ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಚಿಕ್ಕಮಗಳೂರು ಡಯಟ್ ಸಂಸ್ಥೆ, ಜ್ವಾಲಾಮಾಲಿನಿ ಬಾಲಿಕಾ ಪ್ರೌಢಶಾಲೆಯ ವಿಜ್ಞಾನ ಸಂಘ ಹಾಗೂ ಇಕೋ ಕ್ಲಬ್ ಆಶ್ರಯದಲ್ಲಿ ನಡೆದ ಪ್ರೌಢ ಶಾಲಾ ವಿದ್ಯಾರ್ಥಿಗಳ ತಾಲೂಕು ಮಟ್ಟದ ವಿಜ್ಞಾನ ನಾಟಕ ಸ್ಫರ್ಧೆಯ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿದ್ದ ಹಿರಿಯ ಉಪನ್ಯಾಸಕ ಹಾಗೂ ನೋಡಲ್ ಅಧಿಕಾರಿ ಜಯಣ್ಣ ಮಾತನಾಡಿ, ನೀತಿ ಬೋಧಕ ನಾಟಕಗಳು ಶೈಕ್ಷಣಿಕ ಅಭಿವೃದ್ಧಿಗೆ ಸಹಾಯವಾಗಲಿದೆ ಎಂದರು. ಮುಖ್ಯೋಪಾಧ್ಯಾಯ ಲೋಕರಾಜ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಸಹಾಯಕ ನೋಡಲ್ ಅಧಿಕಾರಿ ವಿಜಯಕೃಷ್ಣ ಉಪಸ್ಥಿತರಿದ್ದರು.
ವಿಜೇತ ಶಾಲೆಗಳು: ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಬಾಳೆಹೊನ್ನೂರು ಸರ್ಕಾರಿ ಪ್ರೌಢ ಶಾಲೆ ಪ್ರಥಮ, ನರಸಿಂಹರಾಜಪುರ ಜ್ವಾಲಾಮಾಲಿನಿ ಬಾಲಿಕಾ ಪ್ರೌಢ ಶಾಲೆ ದ್ವಿತೀಯ ಹಾಗೂ ಬಾಳೆಹೊನ್ನೂರು ಬಿಜಿಎಸ್ ಪ್ರೌಢ ಶಾಲೆಯು ದ್ವಿತೀಯ ಸ್ಥಾನ ಪಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

