ಕುವೆಂಪು ಕಾವ್ಯಧಾರೆ
ಶೃಂಗೇರಿ: ತಾಲೂಕು ಕನ್ನಡ ಸಾಹಿತ್ಯಪರಿಷತ್ ಹಾಗೂ ಶಾಲಾಭಿವೃದ್ಧಿ ಸಮಿತಿ ಸಹಯೋಗದೊಂದಿಗೆ ಇಲ್ಲಿನ ವೈಕುಂಠಪುರ ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ ಮಲೆನಾಡಿನ ಸಾಹಿತ್ಯದಲ್ಲಿ ಕುವೆಂಪು ಕಾವ್ಯಧಾರೆ ಕಾರ್ಯಕ್ರಮ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಾಹಿತಿ ಕಿರಣಕೆರೆ ಉಮೇಶ್ ಚಂದ್ರನ್ ಕುವೆಂಪು ಸಾಹಿತ್ಯ, ಕಾವ್ಯಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಎಮ್. ಸುರೇಂದ್ರ, ವೆಂಕಟೇಶ್, ದಿನೇಶ್ ಇದ್ದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸತೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪ್ಲಾಸ್ಟಿಕ್ ವಿರುದ್ಧ ಆಂದೋಲನ
ತರೀಕೆರೆ: ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪುರಸಭೆ ವಲಯದ ಪ್ರಾಯೋಜಿತ ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ಕೋಟೆ ಕ್ಯಾಂಪ್ ಗ್ರಾಮಸ್ಥರ ಸಹಕಾರದಿಂದ ಕೋಟೆ ಕ್ಯಾಂಪಿನಲ್ಲಿ ಪ್ಲಾಸ್ಟಿಕ್ ಆಂದೋಲನ ಏರ್ಪಡಿಸಲಾಗಿತ್ತು. ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳನ್ನು ಗುಟ್ಕಾ, ಸಿಗರೇಟು, ಬೀಡಿ, ಅಡಕೆ ಪ್ಯಾಕೆಟುಗಳನ್ನು ಎಸೆಯುವ ಬಗ್ಗೆ ಮಾಹಿತಿ ನೀಡಲಾಯಿತು. ಪುರಸಭೆ ಸದಸ್ಯ ರಮೇಶ್, ದತ್ತ, ನ್ಯಾಯವಾದಿಗಳಾದ ಇರ್ಫಾನ್ ಅಹಮದ್ ಬೇಗಂ, ಮೇಲ್ವಿಚಾರಕ ದಿನೇಶ್ ಗೌಡ, ಸಂದೇಶ್, ಸೇವಾಪ್ರತಿನಿಧಿ ನಾಗರತ್ನ, ಒಕ್ಕೂಟದ ಅಧ್ಯಕ್ಷೆ ಉಮಾ, ಸ್ವಸಹಾಯ ಸಂಘಗಳ ಸದಸ್ಯರು, ಕೋಟೆ ಕ್ಯಾಂಪ್ ಗ್ರಾಮಸ್ಥರು ಭಾಗವಹಿಸಿದ್ದರು.
ಶಾಲಾ ಮುಖ್ಯೋಪಾಧ್ಯಾಯ ನವೀನ್, ಯೋಜನೆಯಿಂದ ಸಾಮಾಜಿಕ ಕಾರ್ಯಕ್ರಮದಲ್ಲಿರುವ ಕಾಳಜಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮೀನಾಕ್ಷಮ್ಮ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಮೇಲ್ವಿಚಾರಕ ದಿನೇಶ್ ಗೌಡ, ಸಂದೇಶ್, ದೇವರಾಜ್, ದ್ರಾಕ್ಷಾಯಿಣಿ, ಹೇಮಾವತಿ, ಶಾಲಾ ಮಕ್ಕಳು ಮತ್ತು ಸ್ವಸಹಾಯ ಸಂಘಗಳ ಸದಸ್ಯರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

