ಮಧ್ಯವರ್ತಿ ಹಾವಳಿ ದೂರು
ಶಿವಮೊಗ್ಗ: ಪಡಿತರ ಚೀಟಿಗಾಗಿ ಹೆಚ್ಚಿನ ಅರ್ಜಿ ಬಂದಿದ್ದು, ಪರಿಸ್ಥಿತಿ ಉಪಯೋಗ ಪಡೆದುಕೊಂಡ ಕೆಲವರು ಸಾರ್ವಜನಿಕರಿಂದ ಹಣ ಪಡೆದು ಪಡಿತರ ಚೀಟಿ ಮಾಡಿಸಿಕೊಡಲು ಮುಂದಾಗಿದ್ದಾರೆ. ಈ ಸಂಬಂಧ ದೂರುಗಳು ಆಹಾರ ಇಲಾಖೆಯನ್ನು ತಲುಪಿದ್ದು, ಇಲಾಖೆ ಎಚ್ಚರಿಕೆ ಸಂದೇಶ ರವಾನಿಸಿದೆ.
ಇತ್ತೀಚೆಗೆ ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆಯಡಿಯಲ್ಲಿ ಬಿಪಿಎಲ್ ಪಡಿತರ ಚೀಟಿದಾರರಿಗೆ ರು. 1 ದರದಲ್ಲಿ ಅಕ್ಕಿ ವಿತರಿಸಲು ಕ್ರಮ ಕೈಗೊಂಡಿರುವ ಹಿನ್ನೆಲೆಯಲ್ಲಿ ಬಿ.ಪಿ.ಎಲ್. ಪಡಿತರ ಚೀಟಿ ನೀಡುವಂತೆ 14 ಸಾವಿರಕ್ಕೂ ಅಧಿಕ ಪ್ರಮಾಣದ ಅರ್ಜಿಗಳು ಈ ಕಚೇರಿಗೆ ಬಂದಿವೆ.
ಖುದ್ದು ಪರಿಶೀಲನೆ: ಪ್ರಸ್ತುತ ಆಹಾರ ಇಲಾಖೆಯ ಆಯುಕ್ತ ಈ ಕಚೇರಿಯ ಇಬ್ಬರೂ ಮಹಿಳಾ ಆಹಾರ ನಿರೀಕ್ಷಕರಿಗೆ ನೀಡಿರುವ ಸುತ್ತೋಲೆಯನ್ವಯ ಪಡಿತರ ಕಚೇರಿಯಲ್ಲಿ ಪ್ರತಿದಿನ ಬೆಳಗ್ಗೆ 10ರಿಂದ ಮಧ್ಯಾಹ್ನ 1.20ರವರೆಗೆ ಕಾರ್ಯನಿರ್ವಹಿಸಿ ನಂತರ, ಬಿ.ಪಿ.ಎಲ್ ಮತ್ತು ಎಪಿಎಲ್ ಕಾರ್ಡು ಕೋರಿರುವ ಅರ್ಜಿದಾರರ ಸ್ಥಳ ಪರಿಶೀಲನೆಯನ್ನು ಖುದ್ದಾಗಿ ನಡೆಸಲಾಗುತ್ತಿದೆ.
ಇದರೊಂದಿಗೆ ನ್ಯಾಯಬೆಲೆ ಅಂಗಡಿಗಳಿಗೆ ಆಯಾ ತಿಂಗಳು ಆಹಾರ ಬಿಡುಗಡೆ ಮಾಡಿದ ಆಹಾರಧಾನ್ಯ ಹಾಗೂ ಸೀಮೆಎಣ್ಣೆ ವಿತರಣೆಯ ಮೇಲ್ವಿಚಾರಣೆ ಮಾಡಬೇಕಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಬಂದಿರುವ ಹಿನ್ನೆಲೆಯಲ್ಲಿ ಕಾರ್ಡುಗಳ ವಿತರಣಾ ಕಾರ್ಯ ವಿಳಂಬಗತಿಯಲ್ಲಿ ಸಾಗುತ್ತಿದೆ.
ಕಚೇರಿಗೆ ದೂರು: ಈ ಪರಿಸ್ಥಿತಿಯನ್ನರಿತ ಕೆಲವು ಪಡಿತರ ಚೀಟಿ ಸೇವಾಕೇಂದ್ರದ ಮಾಲೀಕರು ಹಾಗೂ ಕೆಲವು ಮಧ್ಯವರ್ತಿಗಳು ಬಿಪಿಎಲ್ ಕಾರ್ಡಿಗಾಗಿ ಅರ್ಜಿ ಸಲ್ಲಿಸಿದ ಅರ್ಜಿದಾರರನ್ನು ಸಂಪರ್ಕಿಸಿ, ಬಿಪಿಎಲ್ ಕಾರ್ಡ್ ಮಾಡಿಸಿಕೊಡುವುದಾಗಿ ಹೇಳಿ ಅವರಿಂದ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಈ ಕಚೇರಿಗೆ ದೂರುಗಳು ಬರುತ್ತಿವೆ.
ಅರ್ಜಿದಾರರು ಯಾವುದೇ ಮಧ್ಯವರ್ತಿಗಳಿಗೆ ಹಣ ನೀಡದಂತೆ ಹಾಗೂ ಹಣ ವಸೂಲಿ ಮಾಡುತ್ತಿದ್ದಲ್ಲಿ ಬಿ. ರುದ್ರೇಶಪ್ಪ, ಸಹಾಯಕ ನಿರ್ದೇಶಕ, ಪಡಿತರ ಕಚೇರಿ, ಗೋಪಾಳ, ಶಿವಮೊಗ್ಗ ಇವರಿಗೆ ಲಿಖಿತ ದೂರನ್ನು ನೀಡಬಹುದಾಗಿದೆ ಎಂದು ಆಹಾರ ಮತ್ತು ನಾಗರಿಕ ಇಲಾಖೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

