ಸೆ.1ರಂದು ಸಹಕಾರ ಸಂಘದ ಚುನಾವಣೆ
ಮೂಡಿಗೆರೆ: ದಾರದಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಸೆ.1ರಂದು ನಡೆಯಲಿದ್ದು, ನಾಮಪತ್ರ ಸಲ್ಲಿಕೆಗೆ ಆ.24ಕೊನೇ ದಿನ ಎಂದು ಚುನಾವಣಾಧಿಕಾರಿ ಸಿ.ಸಿ. ರುದ್ರೇಗೌಡ ತಿಳಿಸಿದರು.
ದಾರದಹಳ್ಳಿ ಸಹಕಾರ ಬ್ಯಾಂಕ್ ಆವರಣದಲ್ಲಿ 10 ಅಭ್ಯರ್ಥಿಗಳಿಂದ ನಾಮಪತ್ರ ಸ್ವೀಕರಿಸಿದ ಬಳಿಕ ಮಾತನಾಡಿ, 25ರಂದು ನಾಮಪತ್ರ ಪರಿಶೀಲನೆ ಮಾಡಲಾಗುವುದು. 26ರಂದು ನಾಮಪತ್ರ ಹಿಂಪಡೆಯಲು ಅವಕಾಶವಿದೆ. ಅಂದು ಮಧ್ಯಾಹ್ನ 3 ಗಂಟೆಗೆ ಅಭ್ಯರ್ಥಿಗಳಿಗೆ ಚಿಹ್ನೆಗಳನ್ನು ನೀಡಲಾಗುವುದು. ಸೆ.1ರಂದು ಬೆಳಗ್ಗೆ 9 ರಿಂದ 4 ಗಂಟೆವರೆಗೆ ಚುನಾವಣೆ ನಡೆಯಲಿದ್ದು, ಅಂದು ಸಂಜೆ ವೇಳೆಗೆ ಫಲಿತಾಂಶ ಪ್ರಕಟವಾಗಲಿದೆ ಎಂದು ತಿಳಿಸಿದರು.
ಮಂಗಳವಾರ ಎಂ.ಎಂ. ಲಕ್ಷ್ಮಣಗೌಡರ ನೇತೃತ್ವದಲ್ಲಿ ಕೆ.ಯು. ಜಯರಾಮ್ ಮಾರ್ಗದರ್ಶನದಂತೆ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳಲ್ಲಿ ಸಾಲಗಾರರ ಕ್ಷೇತ್ರದಿಂದ ಸಾಮಾನ್ಯ ಅಭ್ಯರ್ಥಿಗಳಾಗಿ ಡಿ.ಆರ್. ಪುಟ್ಟಸ್ವಾಮಿಗೌಡ, ಎಚ್.ಎಲ್. ಮಯೂರ್, ಕೆ.ಕೆ. ಲಕ್ಷ್ಮಣಗೌಡ, ಡಿ.ಕೆ. ಅರುಣ್, ಎಚ್.ಎಸ್. ಗೋಪಾಲಗೌಡ, ಮಹಿಳಾ ಮೀಸಲು ಅಭ್ಯರ್ಥಿಗಳಾಗಿ ಎಚ್.ಎಚ್. ರಾಧಮ್ಮ, ಸುಕನ್ಯಾ ಹಾಗೂ ಪರಿಶಿಷ್ಟ ಜಾತಿ ಮೀಸಲು ಅಭ್ಯರ್ಥಿಗಳಾಗಿ ರಾಮಯ್ಯ, ಹಿಂದುಳಿದ ವರ್ಗದ ಅಭ್ಯರ್ಥಿಯಾಗಿ ಸಂತೋಷ್ ಕುಮಾರ್ ಎಚ್.ಬಿ. ನಾಮಪತ್ರ ಸಲ್ಲಿಸಿದರು. ಸಾಲ ಪಡೆಯದ ಕ್ಷೇತ್ರದಿಂದ ಡಿ.ಎಲ್. ಸಂದೀಪ್ ನಾಮಪತ್ರ ಸಲ್ಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

