ಚಿಕ್ಕಮಗಳೂರು

ತೋಟಗಾರಿಕೆ ಇಂದು ಅನಿವಾರ್ಯ

Published On :

ಶೃಂಗೇರಿ: ಪಟ್ಟಣದ ಶ್ರೀ ಜಗದ್ಗುರು ಅಭಿನವ ವಿದ್ಯಾತೀರ್ಥ ಪ್ರೌಢಶಾಲೆಯಲ್ಲಿ ಗ್ರಂಥಾಲಯ ಸಪ್ತಾಹ ಹಾಗೂ ವೃತ್ತಿ ಮಾರ್ಗದರ್ಶನ ಸಪ್ತಾಹದ ಸಮಾರೋಪ ಸಮಾರಂಭ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಪಾಲ್ಗೊಂಡಿದ್ದ ತೋಟಗಾರಿಕಾ ಇಲಾಖೆಯ ರಾಧಿಕ ಮಾತನಾಡಿ, ತೋಟಗಾರಿಕೆ ಇಂದು ಅನಿವಾರ್ಯವಾಗಿದ್ದು, ಅದರಲ್ಲಿ ಪ್ರತಿಯೊಬ್ಬರೂ ಆಸಕ್ತಿ ಬೆಳೆಸಿಕೊಳ್ಳಬೇಕು. ಕಡಿಮೆ ವೆಚ್ಚ, ಹೆಚ್ಚು ಶ್ರಮವಿಲ್ಲದೇ ಪರ್ಯಾಯ ಬೆಳೆ ಬೆಳೆಯಬಹುದಾಗಿದೆ. ಕಾಳು ಮೆಣಸು, ತೆಂಗು, ಬಾಳೆ, ಕಾಫಿ ಇತ್ಯಾದಿ ಬೆಳೆಗಳನ್ನು ಬೆಳೆಯಬಹುದಾಗಿದೆ. ಕಡಿಮೆ ವೆಚ್ಚ, ಹೆಚ್ಚು ಲಾಭಗಳಿಸಬಹುದಾಗಿದ್ದು ವಿದ್ಯಾರ್ಥಿಗಳು ಪಿಯುಸಿ ನಂತರ ಜೀವಶಾಸ್ತ್ರ, ಸಸ್ಯಶಾಸ್ತ್ರದ ಅಧ್ಯಯನಕ್ಕೆ ಒತ್ತು ನೀಡಬೇಕು ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಥ್ಯೋಪಾದ್ಯಯ ರಾಜಣ್ಣ ಮಾತನಾಡಿ, ಭವಿಷ್ಯ ಉಜ್ವಲವಾಗಿರಲು ಅನೇಕ ಮಾರ್ಗಗಳಿದ್ದು ಅವುಗಳನ್ನು ಪ್ರತಿಯೊಬ್ಬರೂ ಅರಿತು ಜೀವನದಲ್ಲಿ ಯಶಸ್ಸು ಸಾಧಿಸಬೇಕೆಂಬ ಹಿನ್ನೆಲೆಯಲ್ಲಿ ಇಂತಹ ಮಾರ್ಗದರ್ಶನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಸಪ್ತಾಹದಲ್ಲಿ ಅಕ್ಷರ ದಾಸೋಹ ನಿರ್ದೇಶಕ ಕೃಷ್ಣಪ್ಪ ವೃತ್ತಿ ಜೀವನ, ಎಸ್‌ಎಸ್‌ಎಸ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿ ನೀಡಿದರು. ಸಪ್ತಾಹದ ಅಂಗವಾಗಿ ವಿದ್ಯಾರ್ಥಿಗಳಿಗೆ ಕೈಗಾರಿಕೆ ಕೇಂದ್ರಗಳಿಗೆ ಕರೆದೊಯ್ದು ಮಾಹಿತಿ ನೀಡಲಾಯಿತು.
ಸ್ಪರ್ಧಾ ವಿಜೇತರು
ಬಾಳೆಹೊನ್ನೂರು: ಇಲ್ಲಿನ ಸಾಂಸ್ಕೃತಿಕ ಸಂಘ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಇತ್ತೀಚೆಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರ ಪಟ್ಟಿ ನೀಡಲಾಗಿದೆ. ಛದ್ಮವೇಷ ಸ್ಪರ್ಧೆ- ಜಬೀವುಲ್ಲಾ(ಪ್ರಥಮ), ರಮ್ಯಕೃಷ್ಣ(ದ್ವಿತೀಯ), ಕೆ. ಅಂಜನಾ(ತೃತೀಯ), ಜಾನಪದ ಗೀತೆ- ಬಿಇಎಸ್ ಶಾಲೆಯ ಜೆ.ಸಿ. ಅಭಿಷೇಕ್(ಪ್ರಥಮ), ನಿರ್ಮಲಾ ಕಾನ್ವೆಂಟ್‌ನ ವೇಣುಗೋಪಾಲ್(ದ್ವಿತೀಯ), ನಿರ್ಮಲಾ ಕಾನ್ವೆಂಟ್‌ನ ಎ.ಎಸ್. ಸಂಜನಾ(ತೃತೀಯ), ಕನ್ನಡ ನಾಡು, ನುಡಿ ನೃತ್ಯ ಸ್ಪರ್ಧೆ- ಎಸ್. ಪೇಟೆ ಪೂರ್ಣಪ್ರಜ್ಞಾ ಶಾಲೆಯ ಪೂರ್ಣಿಮಾ ತಂಡ(ಪ್ರಥಮ), ಬಾಳೆಹೊನ್ನೂರಿನ ಬಿಇಎಸ್ ಶಾಲೆಯ ಅಯೇಷಾ ತಂಡ(ದ್ವಿತೀಯ), ಬಾಳೆಹೊನ್ನೂರಿನ ಸರ್ಕಾರಿ ಸುವರ್ಣ ಮಾದರಿ ಶಾಲೆಯ ಆಫ್ರೀನ್ ತಂಡ(ತೃತೀಯ). ಕನ್ನಡ ಭಾಷಣ ಸ್ಪರ್ಧೆ- ಸ್ಯಾಮ್ಯುವೆಲ್ ಬಿಜಿಎಸ್ ಕಾಲೇಜು(ಪ್ರಥಮ), ಆಸಿಫ್ ಸರ್ಕಾರಿ ಸ್ವತಂತ್ರ ಪಪೂ ಕಾಲೇಜು(ದ್ವಿತೀಯ), ಅಜಿತ ಬಿಜಿಎಸ್ ಕಾಲೇಜು(ತೃತೀಯ), ಪಾಸಿಂಗ್ ದ ಬಾಲ್(ಮಹಿಳೆಯರು) ಶಾಜಿಯಾ ಗೋರಿಗಂಡಿ (ಪ್ರಥಮ), ವಸಂತ ಜಗದೀಶ್(ದ್ವಿತೀಯ), ಅನ್ನಪೂರ್ಣ ರೇವಣ್ಣ(ತೃತೀಯ), ವಾಲಿಬಾಲ್- ಮಾಗುಂಡಿ ತಂಡ(ಪ್ರಥಮ), ಮೂಡಿಗೆರೆ ತಂಡ(ದ್ವಿತೀಯ) ಸ್ಥಾನ ಪಡೆದಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.