ಚಿಕ್ಕಮಗಳೂರು

'ಏಕಪಕ್ಷಿಯ ನಿರ್ಧಾರ ಸರಿಯಲ್ಲ'

Published On :

ಚಿಕ್ಕಮಗಳೂರು: ಕೂದುವಳ್ಳಿ ವ್ಯವಸಾಯ ಸೇವಾ ಸಹಕಾರ ಬ್ಯಾಂಕಿನಲ್ಲಿ ಅವ್ಯವಹಾರ ನಡೆದಿದೆ ಎಂದು ರಾಜಕೀಯ ದುರುದ್ಧೇಶದಿಂದ ಕೆಲವರು ದೂರು ನೀಡಿರುವ ಕುರಿತಂತೆ ಸಂಘದ ಅಧ್ಯಕ್ಷರ ಅಥವಾ ಯಾವುದೇ ನಿರ್ದೇಶಕರ ಗಮನಕ್ಕೆ ಬಾರದೆ ತನಿಖೆಗೆ ಮುಂದಾಗಿ ಅಧಿಕಾರಿಗಳು ಏಕಪಕ್ಷಿಯ ನಿರ್ಧಾರ ತೆಗೆದುಕೊಂಡಿರುವುದು ಸರಿಯಾದ ಕ್ರಮವಲ್ಲ ಎಂದು ಬ್ಯಾಂಕಿನ ಅಧ್ಯಕ್ಷ ವಿ.ಪಿ. ಕೃಷ್ಣೇಗೌಡ ಹೇಳಿದ್ದಾರೆ.
ಸರ್ಕಾರದ ಅಧೀನದಲ್ಲಿರುವ ಯಾವುದೇ ಸಂಘ ಸಂಸ್ಥೆಗಳ ಮೇಲೆ ಸಾರ್ವಜನಿಕರಿಂದ ದೂರು ಬಂದಲ್ಲಿ ಆ ಸಂಸ್ಥೆಗೆ ಸಂಬಂಧಪಟ್ಟ ಆಡಳಿತ ಮಂಡಳಿ ಗಮನಕ್ಕೆ ತಾರದೆ ಏಕಾಏಕಿ ತನಿಖೆ ಮುಂದಾಗುವಂತ ಕ್ರಮ ಯಾವ ಕಾನೂನಿನಲ್ಲಿದೆ ಎಂದು ಅವರು ಹೇಳಿಕೆಯಲ್ಲಿ ಪ್ರಶ್ನಿಸಿದ್ದಾರೆ.
ಅಂತಹ ದೂರುಗಳಿದ್ದರೆ ಓರ್ವ ಸದಸ್ಯರ ಗಮನಕ್ಕಾದರೂ ತಂದು ಈ ಕ್ರಮಕ್ಕೆ ಮುಂದಾಗಬಹುದಿತ್ತು. ಲಾಭದಲ್ಲಿರುವ ಸಹಕಾರಿ ಸಂಘದ ಮೇಲೆ ರಾಜಕೀಯ ದುರುದ್ದೇಶದಿಂದ ಗೂಬೆ ಕುರಿಸಿ ಸದಸ್ಯರು ಮತ್ತು ಷೇರುದಾರರ ನಡುವೆ ಭಿನ್ನಾಭಿಪ್ರಾಯ ಮೂಡುವಂತ ಹುರುಳಿಲ್ಲದ ಆರೋಪಗಳ ಬಗ್ಗೆ ಸತ್ಯತೆ ಪರಿಶೀಲಿಸದೆ ರಾಜಕೀಯ ಪ್ರೇರಿತವಾಗಿ ತನಿಖೆಗೆ ಮುಂದಾಗಿರುವುದು ಸರಿಯಲ್ಲ ಎಂದಿದ್ದಾರೆ.
ಆಡಳಿತ ಮಂಡಳಿ ಗಮನಕ್ಕೆತಾರದೆ ನಡೆಸಿದ ತನಿಖೆಗೆ ಮಣೆಹಾಕಿ ಸಹಕಾರಿ ಸಂಘಕ್ಕೆ ಅಂತಿಮ ನೊಟೀಸ್ ಜಾರಿ ಮಾಡಿದೇವೆಂದು ನಮ್ಮ ತಿಳುವಳಿಕೆಗೆ ಬಾರದೆ ಪ್ರಚಾರ ಪಡಿಸಿರುವುದು ಸಹಕಾರಿ ಸಂಘದ ಯಾವ ಕಾಯ್ದೆ ನಿಯಮಗಳ ವ್ಯಾಪ್ತಿಗೆ ಒಳಪಟ್ಟಿದೆ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.